* ಒಂದೇ ದಿನ 48 ಹೊಸ ಪ್ರಕರಣ ದಾಖಲು
* ಮಹಾರಾಷ್ಟ್ರದಲ್ಲಿ ದೇಶದಲ್ಲೇ ಅತ್ಯಧಿಕ 65 ಕೇಸು
* ದಿಲ್ಲಿ: ಕ್ರಿಸ್‌ಮಸ್, ಹೊಸ ವರ್ಷದ ಬಹಿರಂಗ ಆಚರಣೆಗೆ ನಿರ್ಬಂಧ
ನವದೆಹಲಿ(ಡಿ.23): ದೇಶಾದ್ಯಂತ(India) ಸದ್ದಿಲ್ಲದೆ ಕೊರೋನಾ(Coronavirus) ರೂಪಾಂತರಿ ತಳಿ ‘ಒಮಿಕ್ರೋನ್’(Omicron) ಕೇಸ್‌ಗಳ ಸಂಖ್ಯೆ ಏರಿಕೆಯಾಗುತ್ತಿರುವ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದೇಶದಲ್ಲಿನ ಕೊರೋನಾ ಪರಿಸ್ಥಿತಿ ಕುರಿತು ಇಂದು(ಗುರುವಾರ) ಮಹತ್ವದ ಪರಿಶೀಲನಾ ಸಭೆ(Meeting) ನಡೆಸಲಿದ್ದಾರೆ. ಈ ಸಭೆಯಲ್ಲಿ ಕೇಂದ್ರದ ಹಿರಿಯ ಅಧಿಕಾರಿಗಳು ಭಾಗಿಯಾಗುವ ಸಾಧ್ಯತೆಯಿದ್ದು, ಸೋಂಕು ನಿಯಂತ್ರಣಕ್ಕೆ ದೇಶದಲ್ಲಿ ಅಗತ್ಯವಾಗಿ ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಯಿದೆ. ಅಲ್ಲದೆ, ಬೂಸ್ಟರ್ ಡೋಸ್(Booster Dose) ನೀಡಬೇಕು ಎಂಬ ಬೇಡಿಕೆ ಬಗ್ಗೆಯೂ ಚರ್ಚೆ ನಡೆಯುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ.
ಈ ಹಿಂದೆ ದೇಶದಲ್ಲಿ ಕೊರೋನಾ ವೈರಸ್ಸಿನ ಮೊದಲ ಅಲೆ ಮತ್ತು 2ನೇ ಅಲೆ ಕಾಣಿಸಿಕೊಂಡಾಗಲೂ ಪ್ರಧಾನಿ ಮೋದಿ ಅವರು ಅಧಿಕಾರಿಗಳು, ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ್ದರು. ಈ ವೇಳೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಸಲಹೆ ಮತ್ತು ಸೂಚನೆಗಳನ್ನು ನೀಡುತ್ತಾ ಬಂದಿದ್ದರು.
Corona Update: ಕರ್ನಾಟಕದಲ್ಲಿ ಕೊರೋನಾ ಏರಿಕೆ, ಇರಲಿ ಎಚ್ಚರಿಕೆ
ದಿಲ್ಲಿ: ಕ್ರಿಸ್‌ಮಸ್, ಹೊಸ ವರ್ಷದ ಬಹಿರಂಗ ಆಚರಣೆಗೆ ನಿರ್ಬಂಧ
ಕೊರೋನಾ ಪ್ರಕರಣಗಳ ಏರುಗತಿ ಮತ್ತು ಒಮಿಕ್ರೋನ್ ಭೀತಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(New Delhi) ಬಹಿರಂಗವಾಗಿ ಕ್ರಿಸ್‌ಮಸ್(Christmas) ಮತ್ತು ಹೊಸ ವರ್ಷಾಚರಣೆ(New Year Celebration) ನಿರ್ಬಂಧ ವಿಧಿಸಲಾಗಿದೆ.
ಕ್ರಿಸ್‌ಮಸ್ ಹಾಗೂ ಹೊಸ ವರ್ಷಾಚರಣೆ ವೇಳೆ ಎಲ್ಲೂ ಗುಂಪು ಸೇರದಂತೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಬುಧವಾರ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಸೂಚಿಸಿದೆ. ಇದೇ ವೇಳೆ ಸಮೀಕ್ಷೆ ನಡೆಸಿ ಕೋವಿಡ್ ಸೋಂಕು ಸೂಪರ್‌ಸೋಡರ್ ಸ್ಥಳಗಳನ್ನು ಪತ್ತೆ ಹಚ್ಚುವಂತೆ ನಿರ್ದೇಶನ ನೀಡಿದೆ.
ಜಿಲ್ಲಾಧಿಕಾರಿಗಳು ಮತ್ತು ಉಪ ಪೊಲೀಸ್ ಕಮಿಷನರ್‌ಗಳು ಕೋವಿಡ್ ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ಸಾರ್ವಜನಿಕ ಸ್ಥಳಗಳಲ್ಲಿ ನಿಯೋಜಿಸಬೇಕು ಎಂದು ಹೇಳಿದೆ.
ಕಳೆದವಾರದ ವರೆಗೂ 100ಕ್ಕಿಂತ ಕಮ್ಮಿ ಕೇಸು ದಾಖಲಾಗುತ್ತಿದ್ದ ದೆಹಲಿಯಲ್ಲಿ ಬುಧವಾರ 125 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಪಾಸಿಟಿವಿಟಿ ದರ ಶೇ.0.20ರಷ್ಟಿದೆ. 57 ಒಮಿಕ್ರೋನ್ ಪ್ರಕರಣಗಳು ನಗರದಲ್ಲಿ ದಾಖಲಾಗಿವೆ.
ದೇಶದಲ್ಲಿ 200 ದಾಟಿದ ಒಮಿಕ್ರೋನ್
ದೇಶದಲ್ಲಿ ಒಂದೇ ದಿನ 48 ಒಮಿಕ್ರೋನ್ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ದೇಶದಲ್ಲಿ ಕೋವಿಡ್(Covid-19) ರೂಪಾಂತರಿ ಒಮಿಕ್ರೋನ್ ಪ್ರಕರಣಗಳು 200ರ ಗಡಿ ದಾಟಿದ್ದು, 217ಕ್ಕೆ ಏರಿದೆ. ಆಶಾದಾಯಕ ವಿಚಾರವೆಂದರೆ ಒಮಿಕ್ರೋನ್ ಸೋಂಕಿತರಲ್ಲಿ ಈವರೆಗೆ 77 ಮಂದಿ ಗುಣಮುಖರಾಗಿದ್ದಾರೆ.
Omicron Threat: ಧಾರವಾಡ ಜಿಲ್ಲೆಗೆ ಒಮಿಕ್ರೋನ್ ಪ್ರವೇಶ: ವೈರಸ್ ಆರ್ಭಟ ಎದುರಿಸಲು ಸಿದ್ಧತೆ
ಸೋಂಕಿನಲ್ಲಿ ಮಹಾರಾಷ್ಟ್ರ(Maharashtra) ಅಗ್ರಸ್ಥಾನದಲ್ಲಿದ್ದು ಮಂಗಳವಾರ 11 ಸೇರಿ 65 ಪ್ರಕರಣ ಈವರೆಗೆ ವರದಿಯಾಗಿವೆ. ನಂತರದ ಸ್ಥಾನ ದಿಲ್ಲಿಯದ್ದಾಗಿದ್ದು, 54 ಪ್ರಕರಣಗಳು ದಾಖಲಾಗಿವೆ. ತೆಲಂಗಾಣದಲ್ಲಿ ಮಂಗಳವಾರ 4 ಸೇರಿ 24, ಕರ್ನಾಟಕದಲ್ಲಿ 19, ರಾಜಸ್ಥಾನದಲ್ಲಿ 18, ಕೇರಳದಲ್ಲಿ 15, ಗುಜರಾತ್‌ನಲ್ಲಿ 14, ಉತ್ತರ ಪ್ರದೇಶ ಹಾಗೂ ಒಡಿಶಾದಲ್ಲಿ 2, ಆಂಧ್ರ ಪ್ರದೇಶ, ಚಂಡೀಗಢ, ತಮಿಳುನಾಡು ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ತಲಾ 1 ಪ್ರಕರಣಗಳು ದಾಖಲಾಗಿವೆ. ಕರ್ನಾಟಕದಲ್ಲಿ(Karnataka) 19 ಸೋಂಕಿತರ ಪೈಕಿ 15 ಮಂದಿ ಈಗಾಗಲೇ ಗುಣಮುಖರಾಗಿದ್ದಾರೆ.
ದಿಲ್ಲಿಯ ಎಲ್ಲಾ ಕೊರೋನಾ ಪಾಸಿಟಿವ್ ವರದಿ ಜಿನೋಂ ಸೀಕ್ವೆನ್ಸಿಂಗ್ ಪರೀಕ್ಷೆಗೆ
ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿಢೀರ್ ಏರಿಕೆಯಾಗುತ್ತಿದೆ. ಹೀಗಾಗಿ ಕೊರೋನಾ ದೃಢಪಟ್ಟಎಲ್ಲಾ ವರದಿಗಳನ್ನು ಒಮಿಕ್ರೋನ್ ಪತ್ತೆ ಹಚ್ಚುವ ಪರೀಕ್ಷೆಯಾದ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ತಿಳಿಸಿದ್ದಾರೆ.