
ನವದೆಹಲಿ(ನ.12): ಪ್ರಧಾನಿ ನರೇಂದ್ರ ಮೋದಿ ಇಂದು ಎಡಪಂಥೀಯರ ಕೋಟೆ ಎಂದೇ ಕರೆಸಿಕೊಳ್ಳುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವರ್ಚುವಲೀ ಭಾಗಿಯಾಗಲಿದ್ದಾರೆ. ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಜೆಎನ್‌ಯು ಕ್ಯಾಂಪಸ್‌ನಲ್ಲಿ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ಅನಾವರಣಗೊಳಿಸಲಿದ್ದಾರೆ. ಪಿಎಂ ಮೋದಿ ಅನೇಕ ವೇದಿಕೆಗಳಿಂದ ಸ್ವಾಮಿ ವಿವೇಕಾನಂದರ ಶಿಕ್ಷಣ ಹಾಗೂ ಉಪದೇಶಗಳನ್ನು ತಿಳಿಸುತ್ತಾ ಬಂದಿದ್ದಾರೆ. ಆದರೆ ಜೆಎನ್‌ಯುನಲ್ಲಿ ನಡೆಯುತ್ತಿರುವ ಕಾರ್ಯಕ್ರಮವೊಂದರಲ್ಲಿ ಅವರು ಭಾಗವಹಿಸುತ್ತಿರುವುದು ಇದೇ ಮೊದಲು.
ಈ ಸಂಬಂಧ ಪಿಎಂ ಮೋದಿ ಕೂಡಾ ಟ್ವೀಟ್ ಮಾಡಿ ಇಂದು ಸಂಜೆ 6:30ಕ್ಕೆ ಜೆಎನ್‌ಯು ಆವರಣದಲ್ಲಿ ನಿರ್ಮಿಸಿರುವ ಸ್ವಾಮಿ ವಿವೇಕಾನಂದರ ಪ್ರತಿಮೆ ಅನಾವರಣಗೊಳಿಸಿ ನನ್ನ ಅಭಿಪಗ್ರಾಯವನ್ನು ಹಂಚಿಕೊಳ್ಳುತ್ತೇನೆ. ಈ ಕಾರ್ಯಕ್ರಮ ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆಯಲಿದೆ ಎಂದಿದ್ದಾರೆ.
ಇನ್ನು ಜೆಎನ್‌ಯುನ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳ ತಂಡ ಮೋದಿ ವಿರುದ್ಧ ಮಾತನಾಡಿ ಸದ್ದು ಮಾಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಜೆಎನ್‌ಯು ಅನೇಕ ಬಾರಿ ವಿವಾದಕ್ಕೀಡಾಗಿದೆ. ಹೀಗಿರುವಾಗ ಮೋದಿಯವರು ಸುಖಾ ಸುಮ್ಮನೆ ಇಲ್ಲಿನ ಕಾರ್ಯಕ್ರಮದಲ್ಲಿ ಭಾಗಿಯಾಘುತ್ತಿಲ್ಲ, ಇದರ ಹಿಂದೆ ರಣನೀತಿ ಇದೆ ಎಂದು ವಿಶ್ಲೇಷಿಸಲಾಗಿದೆ.
ಜೆಎನ್‌ಯು ಆವರಣದಲ್ಲಿರುವ ವಿವೇಕಾನಂದರ ಪ್ರತಿಮೆ ಬಗ್ಗೆಯೂ ವಿವಾದ
ಮೂರು ವರ್ಷದ ಹಿಂದೆ ಈ ಪ್ರತಿಮೆ ನಿರ್ಮಾಣ ಆರಂಭವಾಗಿತ್ತು. 2018ರಲ್ಲಿ ಈ ಕಾಮಗಾರಿ ಪೂರ್ಣಗೊಂಡಿದ್ದು, ಈವರೆಗೂ ಅದನ್ನು ಮುಚ್ಚಿಡಲಾಗಿತ್ತು. ಜೆಎನ್‌ಯು ವಿದ್ಯಾರ್ಥಿಗಳೂ ಈ ಸಂಬಂಧ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದ್ದಾರೆ. ಹೀಗಿರುವಾಗ ಆಡಳಿತ ಮಂಡಳಿ ಪ್ರತಿ ಬಾರಿ ಇದನ್ನು ನಿರ್ಮಿಸಲು ತಗ್ಉಲಿದ ವೆಚ್ಚ ಹಳೆ ವಿದ್ಯಾರ್ಥಿಗಳು ನೀಡಿದ್ದಾರೆ, ಜೆಎನ್‌ಯು ಫಂಡ್‌ನಿಂದ ಹಣ ವಿನಿಯೋಗಿಸಿಲ್ಲ ಎಂದಿದ್ದರು. ಈ ಜಗಳ ತಾರಕಕ್ಕೇರಿ ಲೈಬ್ರೆರಿ ನಿರ್ಮಾಣಕ್ಕೆ ಬಂದ ಹಣ ಈ ಪ್ರತಿಮೆಗೆ ಖರ್ಚು ಮಾಡಿದ್ದೀರಾ ಎಂದು ವಿದ್ಯಾಋfಥಿಗಳು ಪ್ರಶ್ನಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ