ಲೋಕ ಸಮರದ ಫಲಿತಾಂಶಕ್ಕೂ ಮುನ್ನ ಕನ್ಯಾಕುಮಾರಿಯಲ್ಲಿ ಪ್ರಧಾನಿ ಮೋದಿ ಧ್ಯಾನ

By Mahmad Rafik  |  First Published May 28, 2024, 2:56 PM IST

ಮೇ 30 ಮತ್ತು ಮೇ 31ರಂದು ಕನ್ಯಾಕುಮಾರಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಪ್ರಧಾನಿಗಳು ಎರಡು ದಿನ ವಿವೇಕಾನಂದ ರಾಕ್ ಮೆಮೊರಿಯಲ್ ಹಾಲ್‌ನಲ್ಲಿ (Vivekananda Rock Memorial Hall) ಧ್ಯಾನ ಮಾಡಲಿದ್ದಾರೆ ಎಂದು ವರದಿಯಾಗಿದೆ.


ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶಕ್ಕೂ (Loksabha  Election Results 2024) ಮುನ್ನ ಮೇ 30ರಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ತಮಿಳುನಾಡಿನ ಕನ್ಯಾಕುಮಾರಿಗೆ (Kanniyakumari  in Tamil Nadu) ಭೇಟಿ ನೀಡುವ ಸಾಧ್ಯತೆಗಳಿವೆ. ಜೂನ್ 1ರಂದು ಕೊನೆಯ ಹಂತದ ಮತದಾನ (7th Phase Voting) ನಡೆಯಲಿದ್ದು, ಜೂನ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಮೇ 30 ಮತ್ತು ಮೇ 31ರಂದು ಕನ್ಯಾಕುಮಾರಿಯಲ್ಲಿಯೇ ವಾಸ್ತವ್ಯ ಹೂಡಲಿರುವ ಪ್ರಧಾನಿಗಳು ಎರಡು ದಿನ ವಿವೇಕಾನಂದ ರಾಕ್ ಮೆಮೊರಿಯಲ್ ಹಾಲ್‌ನಲ್ಲಿ (Vivekananda Rock Memorial Hall) ಧ್ಯಾನ ಮಾಡಲಿದ್ದಾರೆ. ಜೂನ್ 1ರಂದು ಕನ್ಯಾಕುಮಾರಿಯಿಂದ ಹಿಂದಿರುಗುವ ಸಾಧ್ಯತೆಗಳಿವೆ. 

Tap to resize

Latest Videos

ಒಂದು ವೇಳೆ ಮೊದಲ ಹಂತದ ಮತದಾನ ಬಳಿಕ ಅಂದ್ರೆ ಜೂನ್ 1ರಂದು ಪ್ರಧಾನಿಗಳು ಕನ್ಯಾಕುಮಾರಿಗೆ ಆಗಮಿಸಬಹುದು. ಈ ವೇಳಾಪಟ್ಟಿ ಪ್ರಕಾರ ಜೂನ್ 1 ಮತ್ತು ಜೂನ್ 2ರಂದು ವಿವೇಕಾನಂದ ರಾಕ್ ಮೆಮೊರಿಯಲ್ ಹಾಲ್‌ನಲ್ಲಿ ಧ್ಯಾನ ಮಾಡಿ ಜೂನ್ 3ರಂದು ಹಿಂದಿರುಗುವ ಸಾಧ್ಯತೆಗಳಿವೆ ಎಂದು ದಿ ಹಿಂದೂ ವರದಿ ಮಾಡಿದೆ. 

2019ರ ಲೋಕಸಭಾ ಚುನಾವಣೆಯ ಫಲಿತಾಂಶದ ಕೆಲದಿನಗಳ ಕೇದರಾನಾಥ ದೇಗುಲ ವ್ಯಾಪ್ತಿಯ ಹಿಮಾಲಯದ 11,700 ಅಡಿ ಎತ್ತರದ ರುದ್ರ ಗುಹೆಯೊಂದರಲ್ಲಿ ಪ್ರಧಾನಿಗಳು ಎರಡು ದಿನ ಧ್ಯಾನ ಮಾಡಿದ್ದರು. ಈ ಗುಹೆ ಪ್ರವಾಸಿತಾಣವಾಗಿ ಬದಲಾಗಿದೆ. 
 

click me!