PM Narendra Modi:ಭಾರತ ನಿಮ್ಮ ಮನೆ: ಆಪ್ಘನ್‌ ಅಲ್ಪ ಸಂಖ್ಯಾತರಿಗೆ ಪ್ರಧಾನಿ ಧೈರ್ಯ!

By Suvarna News  |  First Published Feb 20, 2022, 7:39 AM IST

*ಆಫ್ಘನ್‌ನಿಂದ ಭಾರತಕ್ಕೆ ಬಂದವರಿಂದ ಪ್ರಧಾನಿ ಭೇಟಿ
*ಆಪ್ಘನ್‌ ಅಲ್ಪ ಸಂಖ್ಯಾತರಿಗೆ ಪ್ರಧಾನಿ ಮೋದಿ ಧೈರ್ಯ


ನವದೆಹಲಿ (ಫೆ. 20) : ‘ಭಾರತವು ನಿಮ್ಮ ಮನೆ, ನೀವಿಲ್ಲಿ ಅತಿಥಿಗಳಲ್ಲ. ಪ್ರತಿಯೊಬ್ಬ ಭಾರತೀಯ ನಿಮ್ಮನ್ನು ಗೌರವಿಸುತ್ತಾನೆ, ಪ್ರೀತಿಸುತ್ತಾನೆ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಆಪ್ಘನ್‌ ಅಲ್ಪಸಂಖ್ಯಾತ ಸಮುದಾಯದ ಸದಸ್ಯರಿಗೆ ಹೇಳಿದ್ದಾರೆ. ಕಳೆದ ವರ್ಷ ತಾಲಿಬಾನ್‌ ಅಷ್ಘಾನಿಸ್ತಾನವನ್ನು ವಶ ಪಡಿಸಿಕೊಂಡ ನಂತರ ಭಾರತ ಸರ್ಕಾರವು ಆಪರೇಶನ್‌ ದೇವಿ ಶಕ್ತಿಯೆಂಬ ಕಾರ್ಯಾಚರಣೆಯನ್ನು ನಡೆಸಿ ಹಲವಾರು ಆಪ್ಘನ್‌ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂ ಹಾಗೂ ಸಿಖ್ಖರನ್ನು ಭಾರತಕ್ಕೆ ಸ್ಥಳಾಂತರಿಸಿತ್ತು. ಆಪ್ಘನ್‌ ಅಲ್ಪಸಂಖ್ಯಾತ ಸಮುದಾಯದ ಸದಸ್ಯರನ್ನು ತಮ್ಮ ನಿವಾಸದಲ್ಲಿ ಭೇಟಿಯಾದ ಮೋದಿ ಸುಮಾರು ಒಂದು ಗಂಟೆ ಕಾಲ ಮಾತುಕತೆ ನಡೆಸಿದರು.

ತಾಲಿಬಾನ್‌ ಅಪ್ಘಾನಿಸ್ತಾನ ಆಕ್ರಮಿಸಿಕೊಂಡಾಗ ಭಾರತವು ಒದಗಿಸಿದ ಸಹಾಯ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಷ್ಘಾನಿಸ್ತಾನದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾದ ಮುಸ್ಲಿಮೇತರ ಅಲ್ಪಸಂಖ್ಯಾತ ಸಮುದಾಯಗಳಿಗೆ ಭಾರತದ ಪೌರತ್ವ ಒದಗಿಸುವ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯ ಮಹತ್ವ ಹಾಗೂ ಅದರಿಂದ ಆಪ್ಘನ್‌ ಅಲ್ಪಸಂಖ್ಯಾತ ಸಮುದಾಯದವರಿಗೆ ಆಗಲಿರುವ ಅನುಕೂಲಗಳ ಬಗ್ಗೆ ಪ್ರಧಾನಿ ಮಾತನಾಡಿದರು.

Tap to resize

Latest Videos

ಇದನ್ನೂ ಓದಿ: Gobar-Dhan: ಇಂದೋರ್‌ನಲ್ಲಿ ಏಷ್ಯಾದ ಅತಿದೊಡ್ಡ ಜೈವಿಕ- ಸಿಎನ್‌ಜಿ ಘಟಕಕ್ಕೆ ಪ್ರಧಾನಿ ಮೋದಿ ಚಾಲನೆ!

ಅಲ್ಲದೇ ಆಪ್ಘನ್‌ ಅಲ್ಪಸಂಖ್ಯಾತರ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಆಶ್ವಾಸನೆ ನೀಡಿದರು. ಅಷ್ಘಾನಿಸ್ತಾನದಿಂದ ಮರಳುವಾಗ ಹರ್ದೀಪ ಸಿಂಗ್‌ ಪುರಿ ಸಿಖ್ಖರ ಧರ್ಮ ಗ್ರಂಥವಾದ ಗುರುಗ್ರಂಥ ಸಾಹೇಬ್‌ನ ಸ್ವರೂಪವನ್ನು ಮರಳಿ ತಂದಿದ್ದನ್ನು ನೆನಪಿಸಿಕೊಂಡರು.

ಆಷ್ಘಾನ್‌ ಅಲ್ಪಸಂಖ್ಯಾತ ನಿಯೋಗದ ಸದಸ್ಯರು ಜಗತ್ತಿನಾದ್ಯಂತ ಇರುವ ಹಿಂದೂ ಸಿಖ್ಖರಿಗೆ ಸಂಕಷ್ಟದ ಕಾಲದಲ್ಲಿ ಸಹಾಯ ಮಾಡುವ ಪ್ರಧಾನಿ ಮೋದಿ ಕೇವಲ ಭಾರತದ ಪ್ರಧಾನಿಯಲ್ಲಿ ವಿಶ್ವದ ಪ್ರಧಾನಿ ಎಂದು ಶ್ಲಾಘಿಸಿದರು. ಅಷ್ಘಾನಿನ ಸಾಂಪ್ರದಾಯಿಕ ಉಡುಗೆ ಚಪಾನ್‌ನ್ನು, ಅಷ್ಘಾನಿ ಸಾಂಪ್ರದಾಯಿಕ ಪೇಟವನ್ನು ಸದಸ್ಯರು ಪ್ರಧಾನಿಗೆ ಉಡುಗೊರೆಯಾಗಿ ನೀಡಿದರು. ಇದನ್ನು ಸ್ವೀಕರಿಸಿದ ಮೋದಿ ‘ಇದು ಆಫ್ಘನ್‌ ಸಂಕೇತವಾಗಿದೆ. ಮಾಜಿ ಆಪ್ಘನ್‌ ಅಧ್ಯಕ್ಷ ಹೈದ್‌ ಕರ್ಜೈ ಅವರು ಇದನ್ನು ನೋಡಿ ಸಂತೋಷ ಪಡುತ್ತಿದ್ದರು’ ಎಂದರು.

ಪ್ರಮುಖ ಸಿಖ್ ನಾಯಕರ ಭೇಟಿಯಾದ ಮೋದಿ: ಫೆಬ್ರವರಿ 20 ರಂದು ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಸಿಖ್ಖರನ್ನು ತನ್ನತ್ತ ಸೆಳೆಯಲು ಯತ್ನಿಸುತ್ತಿದೆ. ಇದೇ ನಿಟ್ಟಿನಲ್ಲಿ ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ನಿವಾಸದಲ್ಲಿ ದೇಶಾದ್ಯಂತದ ಪ್ರಮುಖ ಸಿಖ್ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಈ ವೇಳೆ ಪ್ರಧಾನಿಯವರು ಸಿಖ್ ನಾಯಕರನ್ನು ಸ್ವಾಗತಿಸುತ್ತಿರುವುದು ಕಂಡುಬಂದಿತು. ಊಟದ ಸಮಯದಲ್ಲಿ ಖುದ್ದು ಮೋದಿ ಸಿಖ್ ನಾಯಕರಿಗೆ ತಟ್ಟೆಯನ್ನು ಕೊಟ್ಟು ಸತ್ಕರಿಸಿದ್ದಾರೆ.

ಇದನ್ನೂ ಓದಿPanchayati Raj Day ಎಪ್ರಿಲ್ 24 ರಂದು ಕರ್ನಾಟಕದ ಗ್ರಾಮ ಪಂಚಾಯ್ತಿಗೆ ಪ್ರಧಾನಿ ಮೋದಿ ಭೇಟಿ!

ಪ್ರಧಾನಿ ನರೇಂದ್ರ ಶುಕ್ರವಾರ ತಮ್ಮ ನಿವಾಸದಲ್ಲಿ ದೇಶದ ಪ್ರಮುಖ ಸಿಖ್ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ, ಅವರು ನನ್ನ ರಕ್ತದಲ್ಲಿ ಸಿಖ್ ಧರ್ಮವಿದೆ. ಸೇವೆ ಎಂಬುವುದು ನನಗೆ ರಕ್ತದಲ್ಲೇ ಬಂದಿದೆ. ನಾನು ಏನು ಮಾಡಿದರೂ ಅದನ್ನು ಹೃದಯದಿಂದ ಮಾಡುತ್ತೇನೆ ಎಂದಿದ್ದಾರೆ. 

ನರೇಂದ್ರ ಮೋದಿ ಮತ್ತು ಸಿಖ್ ಸಮಾಜದ ಮುಖಂಡರ ನಡುವೆ ಹಲವು ವಿಷಯಗಳ ಕುರಿತು ಮಾತುಕತೆ ನಡೆದಿದೆ. ಪ್ರಧಾನಿ ಮೋದಿ ಸಿಖ್ ನಾಯಕರಿಗೆ ತಮ್ಮ ನೀತಿಗಳನ್ನು ತಿಳಿಸಿದರು ಮತ್ತು ಏಳು ವರ್ಷಗಳಲ್ಲಿ ಮಾಡಿದ ಕೆಲಸಗಳ ಬಗ್ಗೆ ತಿಳಿಸಿದರು.

ಕರ್ತಾರ್‌ಪುರ ಕಾರಿಡಾರ್‌ನಿಂದ ಸಿಖ್ ಗಲಭೆ ಮತ್ತು ಅವರ ಅಪರಾಧಿಗಳಿಗೆ ಶಿಕ್ಷೆಯವರೆಗಿನ ಎಲ್ಲಾ ಹಂತಗಳ ಬಗ್ಗೆ ಪ್ರಧಾನಿ ಮೋದಿ ಸಿಖ್ ಸಂಘಟನೆಗಳಿಗೆ ತಿಳಿಸಿದರು. ಸಿಖ್ ನಾಯಕರು ತಮ್ಮ ಬೇಡಿಕೆಗಳು ಮತ್ತು ಕಳವಳಗಳನ್ನು ಪ್ರಧಾನಿ ಮುಂದೆ ಮಂಡಿಸಿದರು.

click me!