
ಪುದುಚೇರಿ(ಫೆ.25): ಪ್ರಧಾನಮಂತ್ರಿ ನರೇಂದ್ರ ಮೋದಿ ಪುದುಚೇರಿಯಲ್ಲಿ ವಿಭಿನ್ನ ಯೋಜನೆಗಳನ್ನು ಉದ್ಘಾಟಿಸಿ, ಶಿಲಾನ್ಯಾಸ ನೆರವೇರಿಸಿದ್ದಾರೆ. ಹೀಗಿರುವಾಗ ಪುದುಚೇರಿಯ ಉಪ ರಾಜ್ಯಪಾಲ ತಮಿಳಸಾಯಿ ಸುಂದರ್ ರಾಜನ್ ಕೂಡಾ ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಪಿಎಂ ಮೋದಿ ದೇಶಾದ್ಯಂತ ನಮ್ಮ ರೈತರು ಅನೇಕ ಬಗೆಯ ಆವಿಷ್ಕಾರ ಮಾಡುತ್ತಿದ್ದಾರೆ. ಹೀಗಿರುವಾಗ ನಮ್ಮ ರೈತರ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಸಿಗುವಂತೆ ಮಾಡುವುದು ನಮ್ಮ ಕರ್ತವ್ಯ ಎಂದಿದ್ದಾರೆ.
ಮಾಜಿ ಸಿಎಂ ಪಕ್ಷದ ಟಾಪ್ ಲೀಡರ್ ಚಪ್ಪಲಿ ಎತ್ತಲು ಎಕ್ಸ್‌ಪರ್ಟ್ ಆಗಿದ್ದರು
ಅಲ್ಲದೇ ನಿಮ್ಮ ಮಾಜಿ ಸಿಎಂ ತಮ್ಮ ಪಕ್ಷದ ಟಾಪ್ ಲೀಡರ್‌ನ ಚಪ್ಪಲಿ ಎತ್ತುವಲ್ಲಿ ನಿಸ್ಸೀಮರಾಗಿದ್ದರು. 2015ರಲ್ಲಿ ನಾರಾಯಣಸಾಮಿಯ ವಿಡಿಯೋ ಒಂದು ಬಹಿರಂಗಗೊಂಡಿತ್ತು. ಇದರಲ್ಲಿ ಅವರು ಅಂದಿನ ಕಾಂಗ್ರೆಸ್ ನಾಯಕರಾಗಿದ್ದ ರಾಹುಲ್ ಗಾಂಧಿಯವರ ಚಪ್ಪಲಿ ಎತ್ತಿದ್ದ ದೃಶ್ಯಗಳಿದ್ದವು.
ಕಾಂಗ್ರೆಸ್ ವಿರುದ್ಧ ಮೋದಿ ಕಿಡಿ
ಕಾಂಗ್ರೆಸ್ ಸರ್ಕಾರ ಪುದುಚೇರಿಯಲ್ಲಿ ಆಡಳಿತದ ಪ್ರತಿ ಕ್ಷೇತ್ರಕ್ಕೂ ನಷ್ಟವೆಸಗಿದೆ. ಕಾಂಗ್ರೆಸ್ ಜನ ಪರ ಕೆಲಸ ಮಾಡುವಲ್ಲಿ ನಂಬಿಕೆ ಇರಿಸಿಕೊಂಡಿಲ್ಲ. ಬೇರೊಬ್ಬರು ಜನರಿಗಾಗಿ ಕೆಲಸ ಮಾಡುವುದನ್ನು ಕಾಂಗ್ರೆಸ್ ಯಾಕೆ ಸಹಿಸಿಕೊಳ್ಳುವುದಿಲ್ಲ ಎಂಬುವುದೇ ನನಗೆ ಅರ್ಥವಾಗುತ್ತಿಲ್ಲ ಎಂದೂ ಈ ಸಂದರ್ಭದಲ್ಲಿ ಮೋದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ