
ಮಂಗಳೂರು(ಮಾ. 07) ಮಂಗಳೂರಿನ ವೈದ್ಯ ಡಾ. ಪದ್ಮನಾಭ ಕಾಮತ್ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದ್ದಾರೆ ಜನೌಷಧಿ ಕೇಂದ್ರ ಗಳನ್ನು ಪ್ರೋತ್ಸಾಹಿಸುತ್ತಿರುವ ವೈದ್ಯ ಡಾಕ್ಟರ್ ಪದ್ಮನಾಭ ಕಾಮತ್ ಅವರ ಜತೆ ಸಂವಾದದಲ್ಲಿ ಮಾತನಾಡಿದ್ದಾರೆ.
ಡಾ.ಪದ್ಮನಾಭ ಕಾಮತ್ ಮಂಗಳೂರಿನ ಖ್ಯಾತ ಹೃದಯ ವೈದ್ಯರು. ಮೂರು ವರ್ಷದಿಂದ ಜನೌಷಧಿ ಅಭಿಯಾನದಲ್ಲಿ ಭಾಗಿಯಾಗಿದ್ದೇನೆ ಗ್ರಾಮೀಣ ಭಾಗದ ಬಡಜನರಿಗೆ ಹೃದಯಾಘಾತ ಆಗುತ್ತಿತ್ತು. ಅವರಿಗೆ ತಕ್ಷಣದ ಚಿಕಿತ್ಸೆ ನೀಡುವುದು ಕಷ್ಟ ಆಗುತ್ತಿತ್ತು. ಹಾಗಾಗಿ ಜನೌಷಧಿ ಕೇಂದ್ರದಲ್ಲಿ ಇಸಿಜಿ ಮೆಶೀನ್ ಹಾಕಿದೆ. ಆರಂಭದಲ್ಲಿ ಜನರು ನನಗೆ ಹುಚ್ಚು ಅಂದ್ರು ಆದರೆ ನನಗೆ ಜನರ ಕಷ್ಟಗಳಿಗೆ ಸ್ಪಂದಿಸುವುದು ಮುಖ್ಯವಾಗಿತ್ತು. ಆರು ಕಡೆ ಜನೌಷಧಿಕೇಂದ್ರದಲ್ಲಿ ಇಸಿಜಿ ಯಂತ್ರ ಅಳವಡಿಕೆ ಮಾಡಿದೆ. ಇದರ ಫಲಾನುಭವಿಗಳ ಸಂತೋಷ ಕಂಡರೆ ಸಾರ್ಥಕ ಅನುಭವ ಆಗುತ್ತೆ. ಈ ಮೂಲಕ ನೂರು ಹೃದಯಾಘಾತವಾಗುವ ಪ್ರಕರಣ ಪತ್ತೆ ಮಾಡಿದ್ದೇವೆ. ರೋಗಿಗಳ ಜೀವ ಉಳಿಸಿದ್ದೇವೆ ಎಂದು ಕಾಮತ್ ತಿಳಿಸಿದರು.
ಅಪ್ಪನ ಸಾವಿನ ನಡುವೆಯೂ ಇಬ್ಬರ ಜೀವ ಉಳಿಸಿದ ಕಾಮತ್..ನಿಮಗೊಂದು ಸಲಾಂ
ಜನೌಷಧಿ ಸೇವೆ ಮತ್ತು ಉದ್ಯೋಗದ ಉತ್ತಮ ಸಂದೇಶ ನೀಡಿದೆ. ಓರ್ವ ನಿರುದ್ಯೋಗಿ ಯುವಕನಿಗೆ ಹಣ ಕೊಟ್ಟು ಜನೌಷಧ ಆರಂಭಿಸಲು ಪ್ರೇರಣೆ ನೀಡಿದೆ. ಈಗ ಆ ಕೇಂದ್ರ ಅಗ್ರಪಂಕ್ತಿಯಲ್ಲಿದೆಇಷ್ಟು ದೊಡ್ಡ ವೈದ್ಯನಾಗಿ ಯಾಕೆ ಜನೌಷಧಿ ಕೇಂದ್ರಗಳ ಜೊತೆ ಇದ್ದೀಯಾ ಎಂಬ ಪ್ರಶ್ನೆ ಬರುತ್ತಿತ್ತು. ಜನೌಷಧಿ ಜನೋಪಯೋಗಿ ಅನ್ನೋದು ನನ್ನ ಅಭಿಪ್ರಾಯ ಎಂದರು.
ವೈದ್ಯರ ಸಾಧನೆಯನ್ನು ಕೊಂಡಾಡಿದ ಪ್ರಧಾನಿ, ನಮ್ಮ ಕಲ್ಪನೆಯ ಮೂರ್ತರೂಪ ನೀವು ಮಾಡಿತೋರಿಸಿದ್ದೀರಿ. ಓರ್ವ ಯುವಕನಿಗೆ ದಾರಿ ತೋರಿಸಿಒಳ್ಳೇದಿ ಮಾಡಿದ್ರಿ. ಜನೌಷಧಿ ಕೇಂದ್ರದಲ್ಲಿ ಇಸಿಜಿ ಆರಂಭಿಸಿದ್ದು ಮೆಚ್ಚಿಕೊಳ್ಳುವ ಕೆಲಸ ಎಂದರು.
ಡಾ.ಕಾಮತ್ಗೆ ‘ಜನೌಷಧಿ ಚಿಕಿತ್ಸಕ್’ ಪ್ರಶಸ್ತಿ ಪ್ರದಾನ
ಬ್ರಹ್ಮಾವರ: ಮಂಗಳೂರಿನ ಕೆಎಂಸಿಯ ಹೃದ್ರೋಗತಜ್ಞ ಡಾ. ಪದ್ಮನಾಭ ಕಾಮತ್ ಅವರ ಸೇವೆ ಗುರುತಿಸಿ ಕೇಂದ್ರ ಸರ್ಕಾರ ‘ಜನೌಷಧಿ ಚಿಕಿತ್ಸಕ್’ ಪ್ರಶಸ್ತಿ ನೀಡಿ ಗೌರವಿಸಿದೆ. ಭಾನುವಾರ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರಾಷ್ಟ್ರ ಮಟ್ಟದ ಜನೌಷಧಿ ದಿನಾಚರಣೆಯ ಅಂಗವಾಗಿ, ಪ್ರಧಾನಿ ಮೋದಿ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆಸ್ಸ್ ಸಂವಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಈ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಿ.ವಿ.ಸದಾನಂದ ಗೌಡ, ಈ ಜನೌಷಧಿ ಕೇಂದ್ರಗಳು ಜನಸಾಮಾನ್ಯರಿಗೆ ಎಷ್ಟುಹತ್ತಿರವಾಗಿವೆ ಎಂದರೆ ಅವರು ಈ ಕೇಂದ್ರಗಳನ್ನು ಪ್ರಧಾನಮಂತ್ರಿ ಕಾ ದುಕಾನ್ ಎಂದೇ ಕರೆಯುತ್ತಾರೆ ಎಂದು ಸದಾನಂದ ಗೌಡರು ಹೇಳಿದರು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ರಘುಪತಿ ಭಟ್, ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ