
ನವದೆಹಲಿ (ಸೆ.04): ಭಾರತ ಅಂದು ದೀರ್ಘಕಾಲದವರೆಗೆ 100 ಕೋಟಿ ಹಸಿದ ಹೊಟ್ಟೆಗಳ ದೇಶ ಎಂದು ಗ್ರಹಿಸಲ್ಪಟ್ಟಿತ್ತು. ಆದರೆ ಇಂದು 200 ಕೋಟಿ ಕೌಶಲ್ಯಪೂರ್ಣ ಕೈಗಳ ದೇಶವಾಗಿ ಹೊರಹೊಮ್ಮಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಪಿಟಿಐ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿದ ಅವರು. ‘ದೀರ್ಘಕಾಲದಿಂದ ಭಾರತದಲ್ಲಿ 100 ಕೋಟಿ ಜನರು ಬಡತನದಿಂದ ಬಳಲುತ್ತಿದ್ದರು.
ಆದರೆ ಇಂದು ಸರ್ಕಾರ ಕೈಗೊಂಡ ಕ್ರಮಗಳಿಂದ ಪರಿಸ್ಥಿತಿ ಬದಲಾಗಿದೆ. ಭಾರತವನ್ನು 100 ಕೋಟಿಗೂ ಹೆಚ್ಚು ಮಹತ್ವಾಕಾಂಕ್ಷೆಯ ಮನಸ್ಸುಗಳು, 200 ಕೋಟಿಗೂ ಹೆಚ್ಚು ನುರಿತ ಕೈಗಳು ಮತ್ತು ನೂರಾರು ದಶಲಕ್ಷ ಯುವಜನರ ರಾಷ್ಟ್ರವಾಗಿ ನೋಡಲಾಗುತ್ತಿದೆ’ ಎಂದರು. ‘ಭಾರತ ಸದಸ್ಯ ದೇಶ ಆಗಿರುವ ಜಿ20 ಒಕ್ಕೂಟವು ವಿಶ್ವದ ಜಿಡಿಪಿಯಲ್ಲಿ ಶೇ.85ರಷ್ಟು ಪಾಲು ಹೊಂದಿದೆ. ಅಂತಾರಾಷ್ಟ್ರೀಯ ವ್ಯಾಪಾರದ ಶೇ.75 ಮತ್ತು ವಿಶ್ವ ಜನಸಂಖ್ಯೆಯ ಶೇ.65ರಷ್ಟುಪಾಲು ಹೊಂದಿದೆ’ ಎಂದು ಹೇಳಿದರು. ‘ಇದಕ್ಕೆಲ್ಲ ಕಾರಣ ಸಬ್‌ಕಾ ಸಾಥ್’ ಎಂಬ ಮಾದಿಯ ಆಡಳಿತ.
ಪಿಎಂ, ಸಿಎಂಗೆ ಭದ್ರತೆ ನೀಡಿದ್ದ ಸ್ಫೋಟಕ ಪತ್ತೆದಾರಿ ದಾವಣಗೆರೆ ಪೊಲೀಸ್ ಶ್ವಾನ ಸೌಮ್ಯ ಇನ್ನಿಲ್ಲ!
ಇದು ವಿಶ್ವಕ್ಕೇ ಮಾರ್ಗದರ್ಶಿ ಆಗಬಲ್ಲ ಮಾದರಿ ಆಗಬಹುದು. ಜಿಡಿಪಿ ಕೇಂದ್ರಿತ ವಿಧಾನವು ಮಾನವ ಕೇಂದ್ರಿತ ವಿಧಾನವಾಗಿ ಮಾನವ ಕೇಂದ್ರತ ವಿಧಾನವಾಗಿ ಮಾರ್ಪಾಡಾಗಬಹುದು. ಜಿಡಿಪಿ ಎಷ್ಟೇ ದೊಡ್ಡದಿರಲಿ. ಎಲ್ಲರ ದನಿಗೂ ಪ್ರಾಶಸ್ತ್ಯ ಸಿಗುವಂತಾಗಬೇಕು ಎಂದರು. ಭಾರತಕ್ಕೆ ಜಿ20 ಅಧ್ಯಕ್ಷತೆ ಸಿಕ್ಕ ಬಳಿಕ ವಿಶ್ವದ 3ನೇ ಸ್ತರದಲ್ಲಿದ್ದ ದೇಶಗಳಿಗೆ ಆತ್ಮವಿಶ್ವಾಸ ಬಂದಿದೆ. ತಾವೂ ಮುಂದೊಂದು ದಿನ ಮುಂಚೂಣಿ ರಾಷ್ಟ್ರವಾಗಿ ಹೊರಹೊಮ್ಮಬಲ್ಲೆವು ಎಂಬ ವಿಶ್ವಾಸ ಮೂಡಿಸಿದೆ ಎಂದು ಪ್ರಧಾನಿ ಹರ್ಷಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ