Mann Ki Baat: ಬಾಹ್ಯಾಕಾಶ ಹಾಗೂ ಸೌರ ವಿದ್ಯುತ್‌ ವಲಯದಲ್ಲಿ ನಾವು ಅಚ್ಚರಿಗಳನ್ನು ನೀಡುತ್ತಿದ್ದೇವೆ!

By Santosh Naik  |  First Published Oct 30, 2022, 12:22 PM IST

ಮನ್‌ ಕಿ ಬಾತ್‌ನ 94ನೇ ಸಂಚಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಲವಾರು ವಿಷಯಗಳ ಬಗ್ಗೆ ಮಾತನಾಡಿದರು. ಇದರಲ್ಲಿ ಪ್ರಮುಖವಾಗಿ ಬಾಹ್ಯಾಕಾಶದಲ್ಲಿ ಇಸ್ರೋ ಹಾಗೂ ಸೌರ ವಿದ್ಯುತ್‌ ವಲಯದಲ್ಲಿ ಭಾರತ ತೋರುತ್ತಿರುವ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
 


ನವದೆಹಲಿ (ಅ. 30): ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' 94 ನೇ ಆವೃತ್ತಿಯನ್ನು ಉದ್ದೇಶಿಸಿ ಮಾತನಾಡಿದ್ದು, ದೇಶದ ಬಾಹ್ಯಾಕಾಶ ವಲಯದಲ್ಲಿ ಇಸ್ರೋ ಹಾಗೂ ಸೌರ ವಿದ್ಯುತ್‌ ವಲಯದಲ್ಲಿ ಭಾರತದ ಸಾಧನೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಾರ್ಯಕ್ರಮವು ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಡೆಯುತ್ತದೆ, ಅದರ ಮೂಲಕ ಪ್ರಧಾನಿ ರಾಷ್ಟ್ರದೊಂದಿಗೆ ಸಂವಾದ ನಡೆಸುತ್ತಾರೆ.  ಆಲ್ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ನರೇಂದ್ರ ಮೋದಿ ಮೊಬೈಲ್ ಅಪ್ಲಿಕೇಶನ್‌ನಲ್ಲಿ ಮನ್‌ ಕೀ ಬಾತ್‌ ನೇರಪ್ರಸಾರವಾಗತ್ತದೆ. ಕಾರ್ಯಕ್ರಮದ ಆರಂಭದಲ್ಲಿಯೇ ಇಸ್ರೋ ಸಾಧನೆಗೆ ಹೆಮ್ಮೆ ವ್ಯಕ್ತಪಡಿಸಿದ ಮೋದಿ, “ಭಾರತವು ಏಕಕಾಲದಲ್ಲಿ 36 ಉಪಗ್ರಹಗಳನ್ನು ಬಾಹ್ಯಾಕಾಶದಲ್ಲಿ ಇರಿಸಿದೆ. ದೇಶಕ್ಕೆ ನಮ್ಮ ಯುವಕರಿಂದ ವಿಶೇಷ ದೀಪಾವಳಿ ಉಡುಗೊರೆ ಇದು. ಇದರೊಂದಿಗೆ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಮತ್ತು ಕಚ್‌ನಿಂದ ಕೊಹಿಮಾವರೆಗೆ ಇಡೀ ದೇಶದಲ್ಲಿ ಡಿಜಿಟಲ್ ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಮೋದಿ ಹೇಳಿದರು. “ಭಾರತವು ಸೌರ ವಲಯದಲ್ಲಿ ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಅದ್ಭುತಗಳನ್ನು ಮಾಡುತ್ತಿದೆ. ಇಂದು ಇಡೀ ವಿಶ್ವವೇ ಭಾರತದ ಸಾಧನೆಯನ್ನು ಕಂಡು ಬೆರಗಾಗಿದೆ,'' ಎಂದು ಅವರು ಹೇಳಿದರು.

ಮೊಧೇರಾ ಗ್ರಾಮದ ಸಾಧನೆಗಳನ್ನು ಶ್ಲಾಘಿಸಿದ ಮೋದಿ: ಗುಜರಾತ್‌ನ ಮೊಧೇರಾದ ಬಹುತೇಕ ಮನೆಗಳು ಸೌರಶಕ್ತಿಯಿಂದ ವಿದ್ಯುತ್ ಉತ್ಪಾದಿಸಲು ಆರಂಭಿಸಿವೆ. ಇದೊಂದು ದೊಡ್ಡ ಸಾಧನೆಯಾಗಿದೆ ಎಂದು ಪ್ರಧಾನಿ ಮೋದಿ ಇದೇ ವೇಳೆ ಹೇಳಿದ್ದಾರೆ. ಇತ್ತೀಚೆಗೆ ಭಾರತದ ಮೊದಲ ಸೌರಶಕ್ತಿ ಚಾಲಿತ ಗ್ರಾಮವೆಂದು ಘೋಷಿಸಲಾದ ಮೊಧೇರಾ ಗ್ರಾಮದ ನಿವಾಸಿಗಳೊಂದಿಗೆ ಪ್ರಧಾನಿ ಮೋದಿ ಮಾತುಕತೆ ಕೂಡ ನಡೆಸಿದರು. “ಭಾರತವು ಸೌರ ಶಕ್ತಿಯನ್ನು ದೊಡ್ಡ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ. ಇದು ನಮ್ಮ ದೇಶದ ಬಡ ಮತ್ತು ಮಧ್ಯಮ ವರ್ಗದವರ ಜೀವನವನ್ನು ಪರಿವರ್ತಿಸುತ್ತಿದೆ ಎಂದು ಮೋದಿ ಹೇಳಿದರು.

Tap to resize

Latest Videos

ಛತ್ ಪೂಜೆ ಕುರಿತು ಪ್ರಸ್ತಾಪ:  ಪ್ರಧಾನಿ ಮೋದಿ ಅವರು ಛತ್ ಪೂಜೆಯನ್ನು 'ಏಕ್ ಭಾರತ್, ಶ್ರೇಷ್ಠ ಭಾರತ'ದ "ಉತ್ತಮ ಉದಾಹರಣೆ" ಎಂದು ಕಾರ್ಯಕ್ರಮದ ವೇಳೆ ಉಲ್ಲೇಖಿಸಿದ್ದಾರೆ. "ವಿದೇಶಗಳಲ್ಲಿ ಛತ್‌ ಪೂಜೆಯ ಇಂತಹ ಭವ್ಯವಾದ ಚಿತ್ರಗಳನ್ನು ನಾವು ನೋಡುತ್ತೇವೆ, ಅಂದರೆ ಭಾರತೀಯ ಸಂಸ್ಕೃತಿ ಮತ್ತು ಅದರ ನಂಬಿಕೆಯು ಪ್ರಪಂಚದ ಎಲ್ಲಾ ಮೂಲೆಗಳಲ್ಲಿಯೂ ಛಾಪು ಮೂಡಿಸುತ್ತಿದೆ ಎಂದರು. ಛತ್ ಶುಭಾಶಯಗಳನ್ನು ದೇಶವಾಸಿಗಳಿಗೆ ನೀಡಿದ ಮೋದಿ, ಛತ್ ಪೂಜೆಯಲ್ಲಿ, ಸೂರ್ಯಾರಾಧನೆಯು ಪ್ರಕೃತಿಯೊಂದಿಗೆ ನಮ್ಮ ಸಂಸ್ಕೃತಿಯ ಆಳವಾದ ಸಂಪರ್ಕದ ಪುರಾವೆಯಾಗಿದೆ ಎಂದು ಹೇಳಿದರು.

“ಭಾರತದ ಯುವಕರಿಗೆ ಬಾಹ್ಯಾಕಾಶ ಕ್ಷೇತ್ರವನ್ನು ತೆರೆದ ನಂತರ, ಅದರಲ್ಲಿ ಕ್ರಾಂತಿಕಾರಿ ಬದಲಾವಣೆಗಳು ಬರಲಾರಂಭಿಸಿವೆ. ಸ್ಟಾರ್ಟ್ ಅಪ್‌ಗಳು ಈ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ಮತ್ತು ತಂತ್ರಜ್ಞಾನಗಳನ್ನು ತರುತ್ತಿವೆ. ವಿದ್ಯಾರ್ಥಿ ಶಕ್ತಿಯು ಭಾರತವನ್ನು ಶಕ್ತಿಯುತವಾಗಿಸಲು ಆಧಾರವಾಗಿದೆ. ಇದು ಇಂದಿನ ಯುವಕರು, ಮುಂಬರುವ ವರ್ಷಗಳಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಾರೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

Mann Ki Baat: ಇಂದು 94ನೇ ಸಂಚಿಕೆ, ದೇಶವನ್ನು ಉದ್ದೇಶಿಸಿ ಮೋದಿ ಮಾತು!

ಪರಿಸರದ ಬಗ್ಗೆ ಸೂಕ್ಷ್ಮತೆ ಇರಲಿ: ಪರಿಸರದ ಬಗೆಗಿನ ಸೂಕ್ಷ್ಮತೆಯು ನಮ್ಮ ಸಮಾಜದ ಪ್ರತಿಯೊಂದು ಕಣದಲ್ಲೂ ಹುದುಗಿದೆ ಮತ್ತು ನಾವು ಅದನ್ನು ನಮ್ಮ ಸುತ್ತಲೂ ಅನುಭವಿಸಬಹುದು. ಪರಿಸರ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಡುವವರಿಗೇನೂ ದೇಶದಲ್ಲಿ ಕೊರತೆಯಿಲ್ಲ ಎಂದು ಮೋದಿ ಹೇಳಿದರು. ಪರಿಸರವನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ವೈಯಕ್ತಿಕ ಮತ್ತು ಸಾಮೂಹಿಕ ಕ್ರಮವನ್ನು ಖಚಿತಪಡಿಸಿಕೊಳ್ಳಲು ಭಾರತ ನೇತೃತ್ವದ ಜಾಗತಿಕ ಸಾಮೂಹಿಕ ಆಂದೋಲನವಾದ ಮಿಷನ್ ಲೈಫ್ (ಪರಿಸರಕ್ಕಾಗಿ ಜೀವನಶೈಲಿ) ಅನ್ನು ಓದುವಂತೆ ಪ್ರಧಾನಿ ಮೋದಿ ನಾಗರಿಕರನ್ನು ಒತ್ತಾಯಿಸಿದರು.

Bagalkote: ಮನ್ ಕಿ ಬಾತ್‌ನಲ್ಲಿ ಬಿಲ್‌ಕೆರೂರ ಗ್ರಾಮದ ಕೆರೆ ಬಗ್ಗೆ ಶ್ಲಾಘನೀಯ ವ್ಯಕ್ತಪಡಿಸಿದ ಪ್ರಧಾನಿ ಮೋದಿ

ಬಿರ್ಸಾ ಮುಂಡಾಗೆ ಗೌರವ:  ಶ್ರೀ ಬಿರ್ಸಾ ಮುಂಡಾ ಅವರಿಗೆ ನಮನಗಳು. ಅವರು ಭಾರತದ ಸ್ವಾತಂತ್ರ್ಯಕ್ಕಾಗಿ ಮತ್ತು ಶ್ರೀಮಂತ ಬುಡಕಟ್ಟು ಸಂಸ್ಕೃತಿಯನ್ನು ರಕ್ಷಿಸಲು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು ಎಂದು ಕಾರ್ಯಕ್ರಮದಲ್ಲಿ ಗೌರವ ಸಲ್ಲಿಸಿದರು.

‘ರನ್ ಫಾರ್ ಯೂನಿಟಿ’ ಕುರಿತು ಮೋದಿ:  ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಮೊದಲು ಮೋದಿ ಅವರಿಗೆ ಗೌರವ ಸಲ್ಲಿಸಿದರು. ನಾಳೆ, ಅಕ್ಟೋಬರ್ 31, ರಾಷ್ಟ್ರೀಯ ಏಕತಾ ದಿನ, ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಶುಭ ಸಂದರ್ಭವಾಗಿದೆ. ಈ ದಿನದಂದು, ದೇಶದ ಮೂಲೆ ಮೂಲೆಗಳಲ್ಲಿ ಏಕತೆಯ ಓಟವನ್ನು ಆಯೋಜಿಸಲಾಗಿದೆ. ಈ ಓಟವು ದೇಶದಲ್ಲಿ ಏಕತೆಯ ಎಳೆಯನ್ನು ಬಲಪಡಿಸುತ್ತದೆ, ನಮ್ಮ ಯುವಕರನ್ನು ಪ್ರೇರೇಪಿಸುತ್ತದೆ ಎಂದು ಹೇಳಿದರು.

click me!