YouTubeನಲ್ಲಿ ದಾಖಲೆ ಬರೆದ ಪ್ರಧಾನಿ ಮೋದಿ, 2 ಕೋಟಿ ಸಬ್ಸ್ಕ್ರೈಬರ್ ಪಡೆದ ವಿಶ್ವದ ಮೊದಲ ನಾಯಕ!

By Suvarna NewsFirst Published Dec 26, 2023, 4:25 PM IST
Highlights

ಪ್ರಧಾನಿ ನರೇಂದ್ರ ಮೋದಿ ಹೊಸ ದಾಖಲೆ ಬರೆದಿದ್ದಾರೆ. ಯೂಟ್ಯೂಬ್‌ನಲ್ಲಿ ಬರೋಬ್ಬರಿ 2 ಕೋಟಿ ಚಂದಾದಾರರನ್ನು ಪಡೆದು ವಿಶ್ವದ ಮೊದಲ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 
 

ನವದೆಹಲಿ(ಡಿ.26) ಪ್ರಧಾನಿ ನರೇಂದ್ರ ಮೋದಿ ಸಾಮಾಜಿಕ ಮಾಧ್ಯಮಗಳು, ಹೊಸ ತಂತ್ರಜ್ಞಾನ ಬಳಕೆಯಲ್ಲಿ ಸದಾ ಮುಂದಿದ್ದಾರೆ. ಟ್ವಿಟರ್, ಫೇಸ್‌ಬುಕ್, ವ್ಯಾಟ್ಸ್ಆ್ಯಪ್ ಚಾನೆಲ್ ಸೇರಿದಂತೆ ಹಲವು ಮಾಧ್ಯಮಗಳ ಮೂಲಕ ಜನಸಾಮಾನ್ಯರಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಮೋದಿ ಸಾಮಾಜಿಕ ಮಾಧ್ಯಮ ಬಳಕೆ ಮಾತ್ರವಲ್ಲ, ಗರಿಷ್ಠ ಫಾಲೋವರ್ಸ್, ಸಬ್ಸ್‌ಸ್ಕ್ರೈಬರ್ ಮೂಲಕ ದಾಖಲೆ ಬರೆದಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ಹೊಸ ದಾಖಲೆ ಬರೆದಿದೆ. ಬರೋಬ್ಬರಿ 2 ಕೋಟಿ ಚಂದಾದಾರರನ್ನು ಪಡೆದಿದ್ದಾರೆ. ಈ ಮೂಲಕ ಗರಿಷ್ಠ ಚಂದಾರರನ್ನು ಪಡೆದ ವಿಶ್ವದ ಮೊದಲ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನರೇಂದ್ರ ಮೋದಿ ಯೂಟ್ಯೂಬ್ ಚಾನೆಲ್ ವೈವಿದ್ಯಮ ವಿಷಗಳನ್ನು ಪ್ರಸ್ತುತ ಪಡಿಸುತ್ತದೆ. ಮೋದಿ ಚಾನೆಲ್‌ನಲ್ಲಿನ ವಿಡಿಯೋಗಳು  4.5 ಬಿಲಿಯನ್ ಅಂದರೆ 450 ಕೋಟಿ ವೀಕ್ಷಣೆಗಳನ್ನು ಪಡೆದಿದೆ. ವಿಶ್ವದ ಪ್ರಮುಖ ನಾಯಕರ ಪೈಕಿ ಗರಿಷ್ಠ ಚಂದಾರರನ್ನು ಪಡೆಯುವ ಮೂಲಕ ಜಾಗತಿಕ ಸಮಕಾಲೀನರ ಯೂಟ್ಯೂಬ್ ಚಾನೆಲ್‌ಗಳನ್ನೇ ಮೀರಿಸಿದೆ.  

Latest Videos

ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಪ್ರಧಾನಿ ಮೋದಿಗೆ 1 ಮಿಲಿಯನ್ ಫಾಲೋವರ್ಸ್!

2022ರ ಫೆಬ್ರವರಿ ತಿಂಗಳಲ್ಲಿ ಪ್ರಧಾನಿ ಮೋದಿ ಯೂಟ್ಯೂಬ್ ಚಾನೆಲ್ 10 ಮಿಲಿಯನ್ ಚಂದಾದಾರಿಕೆ ಪಡೆದಿತ್ತು. ಇದೀಗ ಒಂದೇ ವರ್ಷದಲ್ಲಿ 10 ಮಿಲಿಯನ್ ಚಂದಾದಾರರನ್ನು ಪಡೆಯುವ ಮೂಲಕ ಇದೀಗ 2 ಕೋಟಿ ತಲುಪಿದೆ. ಕೆಲ ಜನಪ್ರಿಯ ವಿಡಿಯೋಗಳು 175 ಮಿಲಿಯನ್ ವೀಕ್ಷಣೆ ಪಡೆದಿದೆ. ಇದು ವಿಶ್ವನಾಯಕರ ಚಾನೆಲ್‌ನಲ್ಲಿ ವಿಡಿಯೋಗಳಿಗೆ ಹೋಲಿಸಿದರೆ ಗರಿಷ್ಠ ಮಟ್ಟದ ವೀಕ್ಷಣೆ ದಾಖಲೆ ಹೊಂದಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಪ್ರಧಾನಿ ಮೋದಿ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ್ದರು. ಒಂದೇ ವಾರಕ್ಕೆ 5 ಮಿಲಿಯನ್ ಫಾಲೋವರ್ಸ್ ಪಡೆಯುವ ಮೂಲಕ ದಾಖಲೆ ಬರೆದಿದ್ದರು. ಇದೀಗ ಬರೀ ನಾಲ್ಕೇ ತಿಂಗಳಲ್ಲಿ 12.6 ಮಿಲಿಯನ್ ಹಿಂಬಾಲಕರನ್ನು ಪಡೆದಿದ್ದಾರೆ. ಸೆಪ್ಟೆಂಬರ್ 19, 2023ರಂದು ಪ್ರಧಾನಿ ಮೋದಿ ತಮ್ಮ ವ್ಯಾಟ್ಸ್ಆ್ಯಪ್ ಚಾನೆಲ್ ಆರಂಭಿಸಿದ್ದರು. ಚಾನೆಲ್ ಆರಂಭಿಸಿದ ಒಂದೇ ದಿನಕ್ಕೆ ಮೋದಿ 1 ಮಿಲಿಯನ್ ಫಾಲೋವರ್ಸ್ ಪಡೆದಿದ್ದರು.

ಮುಂದಿನ ಪ್ರಧಾನಿ ಯಾರಾಗಬೇಕು? ಕರ್ನಾಟಕದಲ್ಲಿ ಮೋದಿಗೆ ಶೇ.65ರಷ್ಟು ಮತ!

ಇನ್ನು ಟ್ವಿಟರ್ ಮೂಲಕ ಪ್ರಧಾನಿ ಮೋದಿ ಬರೋಬ್ಬರಿ 94 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಧಾನಿ ಮೋದಿ ಗರಿಷ್ಠ ಫಾಲೋವರ್ಸ್ ಹಾಗೂ ಚಂದಾದಾರರನ್ನು ಪಡೆದ ವಿಶ್ವದ ಏಕೈಕ ನಾಯಕ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದೀಗ ಮೋದಿ ಯೂಟ್ಯೂಬ್ 2 ಕೋಟಿ ಚಂದಾದಾರಿಕೆ ಮೂಲಕ ಹೊಸ ಸಂಚಲನ ಸೃಷ್ಟಿಸಿದೆ.
 

click me!