ಕಾಂಗ್ರೆಸ್‌ಗೆ ಮರಳಿದ ಅನರ್ಹಗೊಂಡ MLA

By Web DeskFirst Published Oct 13, 2019, 2:56 PM IST
Highlights

ಮರಳಿ ಕೈಹಿಡಿದ ಅನರ್ಹಗೊಂಡ ಶಾಸಕಿ| ದೆಹಲಿಯ ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕಿ ಅಲ್ಕಾ ಲಂಬಾ ಕಾಂಗ್ರೆಸ್ ಸೇರ್ಪಡೆ |2013ರಲ್ಲಿ ಆಮ್ ಆದ್ಮಿ ಪಕ್ಷ ಸೇರ್ಪಡೆಯಾಗಿದ್ದ ಅಲ್ಕಾ ಲಂಬಾ. 

ನವದೆಹಲಿ, (ಅ.13): ಆಮ್ ಆದ್ಮಿ ಪಕ್ಷದ ದೆಹಲಿಯ ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕಿ ಅಲ್ಕಾ ಲಂಬಾ ಅವರು ಮತ್ತೆ ಕಾಂಗ್ರೆಸ್‌ಗೆ ಮರಳಿದ್ದಾರೆ. 

ದೆಹಲಿಯ ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದ ಶಾಸಕಿ ಅಲ್ಕಾ ಲಂಬಾ ಅವರು ಆಮ್ ಆದ್ಮಿ ಪಕ್ಷ ತೊರೆದಿದ್ದರು. ಈ ಹಿನ್ನೆಲೆಯಲ್ಲಿ ಅಲ್ಕಾ ಲಂಬಾ ಅವರನ್ನು ಸಂವಿಧಾನದ 10ನೇ ಪರಿಚ್ಛೇದದ ಕಲಂ 2(1)ರ ಅನ್ವಯ ಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ರಂಗೇರಿದ ಚುನಾವಣೆ ಕಣ: ನಾಲ್ವರು ಬಿಜೆಪಿ ನಾಯಕರ ಉಚ್ಛಾಟನೆ

ಇದೀಗ ತಮ್ಮ ಮಾತೃ ಪಕ್ಷ ಕಾಂಗೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಶನಿವಾರ ಕಾಂಗ್ರೆಸ್ ಸೇರಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅಲ್ಕಾ ಲಂಬಾ,  ಕಾಂಗ್ರೆಸ್ ಪಕ್ಷ ನನ್ನನ್ನು ಮರಳಿ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು, ಕಾಂಗ್ರೆಸ್ ಸದಸ್ಯಳಾಗಿ ಮತ್ತೊಮ್ಮೆ ರಾಜಕೀಯ ಜೀವನ ಆರಂಭಿಸುತ್ತಿದ್ದೇನೆ. ನಾನು ಪಕ್ಷದಿಂದ ದೂರವಿದ್ದರೂ ಪಕ್ಷದ ಸಿದ್ಧಾಂತ, ಕಾಂಗ್ರೆಸ್ ಕಲಿಸಿದ ಪಾಠದಿಂದ ದೂರಾಗಿರಲಿಲ್ಲ ಎಂದರು.

2013ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದ ಲಂಬಾ, ಚಾಂದಿನಿ ಚೌಕ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ  ಎಎಪಿಯಲ್ಲಿ ಸದಾಕಾಲ ರೆಬೆಲ್ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅಲ್ಕಾ ಲಂಬಾ ಅವರು ರಾಜೀವ್ ಗಾಂಧಿ ಅವರ ಭಾರತ ರತ್ನ ಹಿಂಪಡೆಯುವ ನಿಲುವಳಿಗೆ ವಿರೋಧಿಸಿದ್ದರು. 

ಅಷ್ಟೇ ಅಲ್ಲೇ ಕೇಜ್ರಿವಾಲ್ ಸರ್ಕಾರದ ನೀತಿ ಹಾಗೂ ಕಾರ್ಯಕರ್ತರ ಬಗ್ಗೆ ತಾರತಮ್ಯವನ್ನು ಸದಾ ಪ್ರಶ್ನಿಸಿ, ಹಲವಾರು ಮಂದಿಯ ವಿರೋಧ ಕಟ್ಟಿಕೊಂಡರು. ಲೋಕಸಭೆ ಚುನಾವಣೆ ವೇಳೆ ಕೇಜ್ರಿವಾಲ್ ರೋಡ್ ಶೋಗೆ ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಲ್ಕಾ ಲಂಬಾ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗಿತ್ತು.

ಈಗ ಲಂಬಾ ಸ್ಫರ್ಧಿಸಿದ್ದ ಚೌಕ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲಿದೆ. ಆದ್ರೆ ಚುನಾವಣೆ ಆಯೋಗ ದಿನಾಂಕ ಘೋಷಣೆ ಮಾಡಿಲ್ಲ.

click me!