ಅ.5ಕ್ಕೆ ರಾಮಮಂದಿರಕ್ಕೆ ಮೋದಿ ಭೂಮಿಪೂಜೆ: ಪೂಜಾ ಕೈಂಕರ್ಯಗಳಲ್ಲಿ ಮೋದಿ ಭಾಗಿ ಸಾಧ್ಯತೆ!

By Kannadaprabha News  |  First Published Jul 20, 2020, 8:14 AM IST

ಅ.5ಕ್ಕೆ ರಾಮಮಂದಿರಕ್ಕೆ ಮೋದಿ ಭೂಮಿಪೂಜೆ| ಬೆಳಗ್ಗೆ 11 ಗಂಟೆಗೆ ಅಯೋಧ್ಯೆಗೆ ಮೋದಿ ಆಗಮನ ಸಾಧ್ಯತೆ| ಮಧ್ಯಾಹ್ನ 1.10ರವರೆಗೆ ಪೂಜಾ ಕೈಂಕರ್ಯಗಳಲ್ಲಿ ಭಾಗಿ


ಅಯೋಧ್ಯೆ(ಜು.20): ಅಯೋಧ್ಯೆಯಲ್ಲಿ ಭವ್ಯ ರಾಮಂದಿರ ನಿರ್ಮಾಣಕ್ಕೆ ಆಗಸ್ಟ್‌ 5ರಂದು ಭೂಮಿಪೂಜೆ ನೆರವೇರುವುದು ಬಹುತೇಕ ಖಚಿತ ಎನ್ನಲಾಗಿದೆ. ಆ.5ರಂದು ಬೆಳಗ್ಗೆ 11 ಗಂಟೆಗೆ ಅಯೋಧ್ಯೆಗೆ ಆಗಮಿಸಲಿರುವ ಪ್ರಧಾನಿ ಮೋದಿ ಅವರು ರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ನೆರವೇರಿಸಲಿದ್ದಾರೆ.

ಅಂದು ಬೆಳಗ್ಗೆ 8 ಗಂಟೆಯಿಂದಲೇ ಕಾಶಿ ಮತ್ತು ಮೋದಿ ಲೋಕಸಭೆ ಕ್ಷೇತ್ರ ಪ್ರತಿನಿಧಿಸುವ ವಾರಾಣಸಿ ಮೂಲದ ಅರ್ಚಕರು ಭೂಮಿ ಪೂಜೆ ಪ್ರಕ್ರಿಯೆಗಳನ್ನು ಆರಂಭಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮಕ್ಕೆ ಆಗಮಿಸಲಿರುವ ಮೋದಿ ಅವರು ಮಧ್ಯಾಹ್ನ 1.10 ನಿಮಿಷದವರೆಗೆ ಪೂಜಾ ವಿಧಿ ವಿಧಾನಗಳಲ್ಲಿ ಸಕ್ರಿಯರಾಗಲಿದ್ದಾರೆ ಎನ್ನಲಾಗಿದೆ.

Latest Videos

undefined

300 ಕೋಟಿಯ ರಾಮಮಂದಿರ: ಆ.3 ಅಥವಾ 5ಕ್ಕೆ ಭೂಮಿಪೂಜೆ: ಮೋದಿಗೆ ಆಹ್ವಾನ!

ದೆಹಲಿಯಲ್ಲಿದ್ದುಕೊಂಡೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳುವ ಇಂಗಿತವನ್ನು ಮೋದಿ ಅವರು ವ್ಯಕ್ತಪಡಿಸಿದ್ದರು. ಆದರೆ, ಮೋದಿ ಅವರೇ ಖುದ್ದಾಗಿ ಅಯೋಧ್ಯೆಗೆ ಭೇಟಿ ನೀಡಿ ಈ ಮಹತ್ಕಾರ್ಯ ನೆರವೇರಿಸಬೇಕು ಎಂಬ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಕೋರಿಕೆ ಮೇರೆಗೆ ಮೋದಿ ಅವರು ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.

ಈ ವೇಳೆ ಮೋದಿ ಅವರು ಹನುಮಾನ್‌ ಗಡಿ ದೇವಾಲಯ ಮತ್ತು ಸರಯೂ ನದಿಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಪ್ರಧಾನಿ ಕಚೇರಿಯಿಂದ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಅಯೋಧ್ಯೆಗೆ ನೀಡುತ್ತಿರುವ ಮೊದಲ ಭೇಟಿ ಇದಾಗಲಿದೆ.

click me!