ರಾತ್ರಿ 8 ಗಂಟೆಗೆ ಮೋದಿ ಭಾಷಣ, ಮೆಡಿಕಲ್ ಎಮರ್ಜೆನ್ಸಿ ಘೋಷಿಸಿದ್ರೆ ನಮ್ಮೆಲ್ಲರ ಸ್ಥಿತಿ ಏನಾಗುತ್ತೆ?

Published : Mar 19, 2020, 05:10 PM ISTUpdated : Mar 19, 2020, 05:37 PM IST
ರಾತ್ರಿ 8 ಗಂಟೆಗೆ ಮೋದಿ ಭಾಷಣ, ಮೆಡಿಕಲ್ ಎಮರ್ಜೆನ್ಸಿ ಘೋಷಿಸಿದ್ರೆ ನಮ್ಮೆಲ್ಲರ ಸ್ಥಿತಿ ಏನಾಗುತ್ತೆ?

ಸಾರಾಂಶ

ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡ್ತಾರಾ ನರೇಂದ್ರ ಮೋದಿ/ 8 ಗಂಟೆಗೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ/ ಆರೋಗ್ಯ ತುರ್ತುಪರಿಸ್ಥಿತಿ ಘೋಷಣೆಯಾದರೆ ಏನಾಗುತ್ತದೆ/ ಜನ ಜೀವನದ ಮೇಲೆ ಬೀರುವ ಪರಿಣಾಮ ಎಂಥಹುದು?

ನವದೆಹಲಿ(ಮಾ. 19)  ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಗುರುವಾರ ಸಂಜೆ 8 ಗಂಟೆಗೆ ಮಾತನಾಡಲಿದ್ದಾರೆ ಎಂಬುದೇ ಸದ್ಯದ ಮಟ್ಟಿಗೆ ದೊಡ್ಡ ಸುದ್ದಿ. ಕೊರೋನಾ ವೈರಸ್ ಗಿಂತಲೂ ಪ್ರಖರವಾಗಿ ಈ ಸುದ್ದಿ ಪ್ರಸಾರವಾಗುತ್ತಿದೆ. ಹಾಗಾದರೆ ಮೋದಿ ಏನು ಮಾತನಾಡಲಿದ್ದಾರೆ ಎಂಬ ಕುತೂಹಲವೂ ಮನೆ ಮಾಡಿದೆ. ಪ್ರಧಾನಿ ಏನಾದರೂ ಮೆಡಿಕಲ್ ಎಮರ್ಜೆನ್ಸಿ ಘೋಷಣೆ ಮಾಡುತ್ತಾರಾ? ಗೊತ್ತಿಲ್ಲ. ಆದರೆ ಈ ಸಂದರ್ಭದಲ್ಲಿ ಒಂದಿಷ್ಟು ಮಾಹಿತಿಯನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಅಷ್ಟಕ್ಕೂ ಭಾರತದ ಸಂವಿಧಾನದಲ್ಲಿ ಮೆಡಿಕಲ್ ಎಮರ್ಜೆನ್ಸಿ ಅಥವಾ ಆರೋಗ್ಯದ ತುರ್ತುಪರಿಸ್ಥಿತಿ  ಎಂಬ ಪದ ಬಳಕೆ ಇಲ್ಲ. ಅದನ್ನು ತರುವ ಅವಕಾಶವೂ ಇಲ್ಲ. ಜರ್ಮನಿಯ ಸಂವಿಧಾನದಿಂದ ತುರ್ತುಪರಿಸ್ಥಿತಿ ವಿಚಾರಗಳನ್ನು ನಾವು  ಎರವಲು ಪಡೆದುಕೊಂಡಿದ್ದೇವೆ.

ಬಾಹ್ಯ ತುರ್ತುಪರಿಸ್ಥಿತಿ ಮತ್ತು ಆಂತರಿಕ ತುರ್ತುಪರಿಸ್ಥಿತಿ ಎಂದು ವಿಭಾಗ ಮಾಡಲಾಗಿದೆ. ಬಾಹ್ಯ ಅಂದರೆ ದೇಶವಾಸಿಗಳಿಗೆ ಸಂಬಂಧಪಡುವುದಿಲ್ಲ. ಯುದ್ಧಕಾಲದ ಸಂದರ್ಭ ಇದರ ಬಳಕೆಯಾಗುತ್ತದೆ.

ಇನ್ನು ಹಣಕಾಸು ತುರ್ತುಪರಿಸ್ಥಿತಿಯನ್ನು ಕೇಂದ್ರ ಸರ್ಕಾರದ ಶಿಫಾರಸಿನ ಮೇಲೆ ರಾಷ್ಟಪತಿ ಘೋಷಣೆ ಮಾಡಬಹುದು. ಇದು ಸಕಲ ದೇಶವಾಸಿಗಳಿಗೆ ಅನ್ವಯವಾಗುತ್ತದೆ.  ರಾಜ್ಯ ತುರ್ತುಪರಿಸ್ಥಿತಿ ಎಂದರೆ ಒಂದು ನಿರ್ದಿಷ್ಟ ರಾಜ್ಯಕ್ಕೆ ಉದಾಹರಣೆ ಕರ್ನಾಟಕ, ಆಂಧ್ರ ಹೀಗೆ ಆ ಭೂಪ್ರದೇಶಕ್ಕೆ ಮಾತ್ರ ಅನ್ವಯವಾಗುವಂತಹ ಸ್ಥಿತಿ. ಆದರೆ ಈಗ ಇದೆಲ್ಲಕ್ಕೂ ಮಿಗಿಲಾದ ಸ್ಥಿತಿ ಬಂದು ನಮ್ಮ ಮುಂದೆ ನಿಂತಿದೆ.

ಕಲಂ 144 ನ್ನು ಹಲವು ಕಡೆ ಜಾರಿಮಾಡಲಾಗಿದೆ. ಸಭೆ ಸೇರುವಂತಿಲ್ಲ, ಸಮಾರಂಭ ಮಾಡುವಂತಿಲ್ಲ, 150 ಅಧಿಕ ಮಂದಿ ಒಂದೇ ಕಡೆ ಸೇರುವಂತೆ  ಇಲ್ಲ ಹೀಗೆ ಹಲವಾರು ನಿರ್ಬಂಧ ಈಗಾಗಲೇ ವಿಧಿಸಲಾಗಿದೆ. ಆಸ್ಪತ್ರೆ, ಇಂಧನ, ಹಾಲು, ಮಾಧ್ಯಮ ಸೇರಿದಂತೆ ಅಗತ್ಯ ವಸ್ತು ಮತ್ತು ಅನಿವಾರ್ಯಗಳು ಮಾತ್ರ ಮುಕ್ತವಾಗಿವೆ.

ಕೊರೋನಾ ಕಾಟ: ಉತ್ತರ ಕರ್ನಾಟಕದ ಜನ ಏನು ಪಾಪ ಮಾಡಿದ್ದರು?

ಆರೋಗ್ಯ ತುರ್ತು ಪರಿಸ್ಥಿತಿ ಬಂದರೆ ಏನಾಗಬಹುದು?
ಕೊರೋನಾ ತನ್ನ ಸಂಖ್ಯೆ ಹೆಚ್ಚು ಮಾಡಿಕೊಳ್ಳುತ್ತಲೇ ಇದೆ. ಈ ಕಾರಣಕ್ಕಾಗಿ ಒಂದು ವೇಳೆ ಮೆಡಿಕಲ್ ಎಮರ್ಜನ್ಸಿ ಎಂಬುದು ಬಳಕೆಯಾದರೆ ಏನಾಗುತ್ತದೆ ಎಂದು ನಾವು ಊಹಿಸಲು ಸಾಧ್ಯವಿದೆ ಇಂದಿನ ಪರಿಸ್ಥಿತಿಗೆ ತಕ್ಕಂತೆ. ಇದೆಲ್ಲದರ ಅಂತಿಮ ಉದ್ದೇಶ ಜನರ ಸಂಪರ್ಕ ಸಂಪೂರ್ಣ  ಬಂದ್ ಮಾಡುವುದೇ ಆಗಿದೆ. ಹಾಗಾದರೆ ಏನಾಗಬಹುದು?

* ವಿದೇಶದ ಮತ್ತು ದೇಶಿಯ ವಿಮಾನಯಾನಗಳು ಸಂಪೂರ್ಣ ಬಂದ್

* ಅಗತ್ಯವಿದ್ದಷ್ಟೆ ಸಾರಿಗೆ ಸಂಪರ್ಕ

* ಎಲ್ಲಿಯೂ ಜನರು ಸೇರುವಂತೇ ಇಲ್ಲ

* ರೈಲ್ವೇ ಸಂಚಾರದ ಮೇಲೆ ನಿರ್ಬಂಧ

* ಸೋಂಕಿತರು ಹೆಚ್ಚು ಕಾಣಿಸಿಕೊಂಡ ಪ್ರದೇಶಕ್ಕೆ ವಾಹನಗಳ ಪ್ರವೇಶ ಇಲ್ಲ

* ತಾಲೂಕಾ ಮಟ್ಟದಲ್ಲಿ ಸಹಾಯವಾಣಿ

* ಮನೆಯಲ್ಲೇ ಎಲ್ಲರಿಗೂ ದಿಗ್ಭಂದನ

* ಅಗತ್ಯ ಆಹಾರ ವಸ್ತುಗಳ ಪೂರೈಕೆಗೆ ಅವಕಾಶ

(ಇಲ್ಲಿಯವರೆಗೆ ಕರ್ನಾಟಕದಲ್ಲಿ ಕಲಬುರಗಿಯಲ್ಲಿ ಮಾತ್ರ 144 ಸೆಕ್ಷನ್ ಜಾರಿ ಮಾಡಲಾಗಿದೆ)

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ದೇಗುಲ ಪ್ರವೇಶಿಸುವುದಿಲ್ಲ ಎಂದ ಕ್ರಿಶ್ಚಿಯನ್ ಮಿಲಿಟರಿ ಅಧಿಕಾರಿಯ ಅಮಾನತು ಎತ್ತಿ ಹಿಡಿದ ಸುಪ್ರೀಂಕೋರ್ಟ್‌ ಹೇಳಿದ್ದೇನು?
ಇಂಡಿಗೋದ ಭಾರೀ ಕುಸಿತ: ಒಂದೇ ವಿಮಾನಯಾನ ಸಂಸ್ಥೆಯ ಏಕಸ್ವಾಮ್ಯವಾದಾಗ