ಇನ್ನು ಭಾರತದಲ್ಲೇ ಸೇನೆಯ ಸರಕು ವಿಮಾನ ನಿರ್ಮಾಣ: ರಕ್ಷಣಾ ಕ್ಷೇತ್ರದಲ್ಲಿ ಮತ್ತೊಂದು ಸ್ವದೇಶಿ ಮೈಲಿಗಲ್ಲು

By Kannadaprabha News  |  First Published Oct 29, 2024, 8:37 AM IST

ಪ್ರಧಾನಿ ಮೋದಿ ಮತ್ತು ಸ್ಪ್ಯಾನಿಶ್ ಪ್ರಧಾನಿ ಸ್ಯಾಂಚೆಜ್ ವಡೋದರಾದಲ್ಲಿ ಟಾಟಾ-ಏರ್‌ಬಸ್ ಸಿ295 ವಿಮಾನ ಉತ್ಪಾದನಾ ಘಟಕವನ್ನು ಉದ್ಘಾಟಿಸಿದರು. ಈ ಮೂಲಕ ಭಾರತೀಯ ಖಾಸಗಿ ಕಂಪನಿಯೊಂದು ಮಿಲಿಟರಿ ವಿಮಾನ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಿದೆ ಮತ್ತು ಸೇನಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.


ವಡೋದರಾ: ಸೇನಾ ಸರಕು ಸಾಗಣೆಗೆ ನೆರವಾಗುವ ಸ್ಪೇನ್‌ನ ಸಿ295 ಅತ್ಯಾಧುನಿಕ ವಿಮಾನಗಳ ಉತ್ಪಾದನೆ ಇನ್ನು ಭಾರತದಲ್ಲಿ ಆರಂಭವಾಗಲಿದ್ದು, ಇದನ್ನು ಭಾರತದಲ್ಲಿ ನಿರ್ಮಿಸಲಿರುವ ಟಾಟಾ ಏರ್‌ಬಸ್‌ ವಿಮಾನ ಘಟಕವನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಸ್ಪ್ಯಾನಿಶ್‌ ಪ್ರಧಾನಿ ಪರ್ವೋ ಸ್ಯಾಂಚೆಜ್ ಸೋಮವಾರ ಇಲ್ಲಿ ಜಂಟಿಯಾಗಿ ಉದ್ಘಾಟಿಸಿದರು.

ಈ ಮೂಲಕ ಇದೇ ಮೊದಲ ಬಾರಿಗೆ ಭಾರತೀಯ ಖಾಸಗಿ ಕಂಪನಿಯೊಂದು ಮಿಲಿಟರಿ ವಿಮಾನ ನಿರ್ಮಾಣ ಕ್ಷೇತ್ರಕ್ಕೆ ಕಾಲಿಟ್ಟಂತಾಗಿದೆ ಹಾಗೂ ವಡೋದರಾದಲ್ಲಿರುವ ಟಾಟಾ ವಿಮಾನ ಘಟಕವು ದೇಶದ ಮೊದಲ ಖಾಸಗಿ ಸೇನಾ ವಿಮಾನ ಉತ್ಪಾದನಾ ಘಟಕ ಎನಿಸಿಕೊಳ್ಳಲಿದೆ. ಸೇನಾ ವಲಯದಲ್ಲಿ ಆತ್ಮನಿರ್ಭರತೆ ಸಾಧಿಸುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆಯಾಗಿದೆ.

Latest Videos

undefined

ಇದನ್ನು ಉದ್ಘಾಟಿಸಿ ಮಾತನಾಡಿದ ಮೋದಿ, 'ಟಾಟಾ ಘಟಕವು ಸ್ಪೇನ್- ಭಾರತದ ಸಂಬಂಧ ಗಟ್ಟಿಗೊಳಿಸುವುದು ಮಾತ್ರವಲ್ಲ, 'ಮೇಕ್ ಇನ್ ಇಂಡಿಯಾ, ಮೇಕ್ ಫಾರ್ ದ ವರ್ಲ್ಡ್' (ಭಾರತದಲ್ಲಿ ಉತ್ಪಾದಿಸಿ, ವಿಶ್ವಕ್ಕೆಂದು ಉತ್ಪಾದಿಸಿ) ಆಂದೋಲನಕ್ಕೆ ವೇಗ ನೀಡಲಿದೆ. ಸಿ-295 ವಿಮಾನ ಭಾರತದ ಹೊಸ ಕೆಲಸದ ಸಂಸ್ಕೃ ತಿಯ ಪ್ರತೀಕ' ಎಂದು ಹರ್ಷಿಸಿದರು.

10 ವರ್ಷದ ಹಿಂದೆ ರಕ್ಷಣಾ ಸಾಮಗ್ರಿ, ಗಳ ಅಮದು ಆಗುತ್ತಿತ್ತು. ಆದರೆ ನಮ್ಮ ಸರ್ಕಾರ ಬಂದ ನಂತರ ಕ್ರಮಗಳಿಂದ ಈಗ ಭಾರತದಲ್ಲೇ ಸಾಮಗ್ರಿಗಳು ಉತ್ಪಾದನೆ ಆಗುವಂತಾಗಿದೆ. ನಾವು ಭಾರತಕ್ಕೆ ಹೊಸ ಗುರಿ ಇಟ್ಟುಕೊಂಡಿದ್ದೇವೆ. ಇಂಥ ಸಾಧನೆ ಸಾಕಾರವಾಗಲಿದೆ ಎಂದು ಯಾರೂ ಊಹಿಸಿರಲಿಲ್ಲ' ಎಂದರು. ಇದೇ ವೇಳೆ ಇತ್ತೀಚೆಗೆ ನಿಧನರಾದ ಟಾಟಾ ಕಂಪನಿ ಮುಖ್ಯಸ್ಥರತನ್ ಟಾಟಾ ಅವರಿಗೆ ಮೋದಿ ಶ್ರದ್ಧಾಂಜಲಿ ಸಲ್ಲಿಸಿದರು. 2022ರಲ್ಲಿ ವಿಮಾನ ಈ ಘಟಕಕ್ಕೆ ಶಂಕು ಸ್ಥಾಪನೆ ನೆರವೇರಿಸಲಾಗಿತ್ತು.

ಸ್ವದೇಶಿ 40 ಸಿ295 ವಿಮಾನ ಉತ್ಪಾದನೆ
6 ದಶಕದಿಂದ ಭಾರತದ ಸಶಸ್ತ್ರ ವಡೆಗಳು ಆವೋ-748 ಸರಕು ವಿಮಾನ ಬಳಕೆ. ಅದು ಹಳತಾದ ಕಾರಣ ಸಿ-295 ಗೆ ಮೊರೆ.
ಸಿ295 ವಿಮಾನವನ್ನು ಮೊದಲು ಸ್ಪೇನ್‌ ಕಾಸಾ ಕಂಪನಿ ನಿರ್ಮಿಸಿತ್ತು,ಈಗ ಏರ್‌ಬಸ್ ಜತೆಗೂಡಿ ಟಾಟಾದಿಂದ ವಡೋದರಾದಲ್ಲಿ ಉತ್ಪಾದನೆ.
ಸ್ಪೇನ್‌ನ ಕಾಸಾ ಹಾಗೂ ಏರ್ ಬಸ್ ಜತೆ ಭಾರತವು 2021ರಲ್ಲಿ 21,935 ಕೋಟಿ  ಮೌಲ್ಯದಲ್ಲಿ 56 '2295' ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ,ಇದರಲ್ಲಿ 16 ಸ್ಪೇನ್‌ನಿಂದ ಬರಲಿದ್ದು ಉಳಿದ 40 ಭಾರತದಲ್ಲಿ ಉತ್ಪಾದನೆ ಆಗಬೇಕು ಎಂಬ ಒಪ್ಪಂದವಿದೆ. 
 2026ರಲ್ಲಿ ಮೊದಲ ಸಿ295 ವಿಮಾನ ಉತ್ಪಾದನೆ. ಉಳಿದ ವಿಮಾನಗಳು 2031ರೊಳಗೆ ನಿರ್ಮಾಣವಾಗಲಿದೆ. 

click me!