ಡಿಜಿಟಲ್ ಅರೆಸ್ಟ್‌ನಿಂದ ಹೈದ್ರಾಬಾದ್ ಟೆಕ್ಕಿ ಜಸ್ಟ್ ಎಸ್ಕೇಪ್

By Kannadaprabha News  |  First Published Oct 29, 2024, 7:58 AM IST

ಹೈದರಾಬಾದ್‌ನ ಟೆಕ್ಕಿಯೊಬ್ಬರು 30 ಗಂಟೆಗಳ ಕಾಲ ಹೋಟೆಲ್‌ನಲ್ಲಿ ಡಿಜಿಟಲ್ ಬಂಧನಕ್ಕೊಳಗಾದ ಘಟನೆ ನಡೆದಿದೆ. ಮುಂಬೈ ಪೊಲೀಸರ ಹೆಸರಿನಲ್ಲಿ ಕರೆ ಮಾಡಿದ ವಂಚಕರು ಆತನನ್ನು ವಂಚಿಸಿದ್ದಾರೆ. ಮೊಬೈಲ್ ನೆಟ್‌ವರ್ಕ್ ಕಟ್ ಆದ ಕಾರಣ ಆತ ಪಾರಾಗಿದ್ದಾನೆ.


ಹೈದರಾಬಾದ್: ಡಿಜಿಟಲ್ ಅರೆಸ್ಟ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ ಹೊತ್ತಿನಲ್ಲೇ ಹೈದ್ರಾಬಾದ್‌ನ ಟೆಕ್ಕಿಯೊಬ್ಬ ಹೋಟೆಲ್‌ನಲ್ಲಿ 30 ಗಂಟೆಗಳ ಕಾಲ ಡಿಜಿಟಲ್ ಅರೆಸ್ಟ್ ಆಗಿದ್ದ ಘಟನೆ ನಡೆದಿದೆ. ಆತನ ಅದೃಷ್ಟಕ್ಕೆ ಮೊಬೈಲ್ ನೆಟ್ವರ್ಕ್ ಕಟ್ ಆದ ಕಾರಣ ಆತ ಪಾರಾಗಿದ್ದಾನೆ.

ನಡೆದಿದ್ದೇನು?: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂತ್ರಸ್ತನ ಆಧಾರ್ ಸಂಖ್ಯೆ ಪತ್ತೆಯಾಗಿದೆ ಎಂದು ಶನಿವಾರ ನಸುಕಿನ ಜಾವ ಮುಂಬೈ ಪೊಲೀಸರ ಹೆಸರಲ್ಲಿ ಕರೆ ಮಾಡಿದ್ದ ಆರೋಪಿಗಳು, ಆತನ ಖಾತೆಯ ಪರಿಶೀಲನೆ ಮುಗಿಯುವ ತನಕ ವಿಡಿಯೋ ಕರೆ ಮೂಲಕ ತಮ್ಮ ಸಂಪರ್ಕದಲ್ಲಿರಬೇಕು ಎಂದಿದ್ದರು. ಈ ವಿಷಯ ಹೊರ ಬಂದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಬೆದರಿಸಿದ ಆರೋಪಿಗಳು, ಕುಟುಂಬದಿಂದ ದೂರ ಉಳಿಯುವಂತೆ ಸೂಚಿಸಿದ್ದರು. ಅದರಂತೆ ತುರ್ತು ಸಭೆಗೆ ಹೋಗುವುದಾಗಿ ಪತ್ನಿಗೆ ತಿಳಿಸಿ 4 ಗಂಟೆಗೆ ಮನೆಯಿಂದ ಹೊರಟು, 15 ಕಿಮೀ ದೂರದ ಲಾಡ್ಜ್‌ಗೆ ಹೋಗಿದ್ದರು. ಈ ವೇಳೆ ಖಾತೆ ಪರಿಶೀಲನೆಗಾಗಿ ಹಣ ಪಾವತಿಸುವಂತೆ ಸೂಚಿಸಲಾಯಿತು. ಭಾನುವಾರ ಮುಂಜಾನೆ 4ರ ಹೊತ್ತಿಗೆ ವಿಡಿಯೋ ಕರೆ ಕಡಿತಗೊಂಡಿದ್ದು, ಕೂಡಲೇ ಸಂತ್ರಸ್ತ ಹೈದರಾಬಾದ್‌ನ ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಈ ವೇಳೆ ತಾನು ವಂಚನೆಗೆ ಒಳಗಾಗಿದ್ದು ಗೊತ್ತಾಗಿದೆ.

Tap to resize

Latest Videos

ವಿವಿಧ ಡಿಜಿಟಲ್ ವಂಚನೆಯಲ್ಲಿ ₹1776 ಕೋಟಿ ನಷ್ಟ |

ನವದೆಹಲಿ: ಭಾರತೀಯರು ಈ ವರ್ಷದ ಜನವರಿಯಿಂದ ಏಪ್ರಿಲ್‌ನವರೆಗೆ ಡಿಜಿಟಲ್ ಅರೆಸ್ಟ್ ವಂಚನೆ ಪ್ರಕರಣದಲ್ಲಿ ಸುಮಾರು 120.30 ಕೋಟಿ ರು. ಹಣವನ್ನು ಕಳೆದುಕೊಂಡಿದ್ದಾರೆ ಎನ್ನುವ ಆಘಾತಕಾರಿ ಅಂಕಿ ಅಂಶವನ್ನು ಕೇಂದ್ರ ಗೃಹ ಇಲಾಖೆ ಬಿಚ್ಚಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಮನ್ ಕೀ ಬಾತ್‌ನಲ್ಲಿ 'ಸೈಬರ್ ವಂಚನೆ, ಡಿಜಿಟಲ್ ಆರೆ ಸ್ಟ್ ಬಗ್ಗೆ ಪ್ರಸ್ತಾಪಿಸಿದ ಬೆನ್ನಲ್ಲೇ ಕೇಂದ್ರ ಗೃಹ ಇಲಾಖೆ, ಸೈಬರ್ ಅಪರಾಧ ಬಗ್ಗೆ ಸಿದ್ದ ಪಡಿಸಿದ ಅಂಕಿಅಂಶವನ್ನು ಪ್ರಕಟಿಸಿದೆ. 'ಮಯನ್ಮಾರ್, ಲಾವೋಸ್ ಮತ್ತು ಕಾಂಬೋಡಿಯಾಗಳಿಂದ ಡಿಜಿಟಲ್ ಅರೆಸ್ಟ್ ವಂಚನೆ ಹೆಚ್ಚಾಗಿದೆ. ಜನವರಿಯಿಂದ ಏಪ್ರಿಲ್‌ವರೆಗಿನ ಅಂಕಿ ಅಂಶದ ಪ್ರಕಾರ ಡಿಜಿಟಲ್ ಅರೆಸ್ಟ್‌, ಟ್ರೇಡಿಂಗ್ ವಂಚನೆ, ಹೂಡಿಕೆ ವಂಚನೆ, ಡೇಟಿಂಗ್ ಆ್ಯಪ್‌ಗಳಿಂದ ಶೇ.46 ರಷ್ಟು ಜನ 1776 ಕೋಟಿ ರು. ಕಳೆದುಕೊಂಡಿದ್ದಾರೆ.

ಡಿಜಿಟಲ್ ಅರೆಸ್ಟ್‌ಗೆ ಕಂಗಾಲಾಗಿ ಬಟ್ಟೆ ಬಿಚ್ಚಿದ ಯುವತಿ, ಕೈಯಲ್ಲಿದ್ದ 5 ಲಕ್ಷ ರೂ ಗುಳುಂ!

120.30 ಡಿಜಿಟಲ್ ಅರೆಸ್ಟ್‌ನಿಂದ ಕಳೆದುಕೊಂಡಿದ್ದರೆ, ಟ್ರೇಡಿಂಗ್ 1020.48 ಕೋಟಿ, ಹೂಡಿಕೆ 222.58 ಕೋಟಿ ಡೇಟಿಂಗ್ ಆ್ಯಪ್ 213.23 ಕೋಟಿಗಳಿಂದ ಕಳೆದುಕೊಂಡಿದ್ದಾರೆ' ಎಂದು ಅಂಕಿ ಅಂಶ ಹೇಳಿದೆ. ಜನರಿಗೆ ಪ್ರಧಾನಿ ಮೋದಿ ಎಚ್ಚರಿಕೆ ಬೆನ್ನಲ್ಲೇ ಗೃಹ ಇಲಾಖೆ ಈ ಮಾಹಿತಿ ಬಿಡುಗಡೆ

ಏನಿದು ಡಿಜಿಟಲ್ ಅರೆಸ್ಟ್?
ಹೆಸರೇ ಹೇಳುವಂತೆ ಇದು ಡಿಜಿಟಲ್ ಮೂಲಕ ಅರೆಸ್ಟ್ ಮಾಡುವ ಅಥವಾ ಮೋಸದ ಜಾಲಕ್ಕೆ ಸಿಲುಕಿಸುವ ವಂಚನೆ. ಆರಂಭದಲ್ಲಿ ಹೆಚ್ಚಾಗಿ ಪಾರ್ಸೆಲ್, ಕೊರಿಯರ್ ಕಂಪನಿಗಳ ಸೋಗಿನಲ್ಲಿ ಕರೆಯೊಂದು ಬರಲಿದೆ. ನಿಮ್ಮ ಹೆಸರಲ್ಲಿ ಯಾರೋ ಪಾರ್ಸೆಲ್ ಕಳುಹಿಸಿದ್ದಾರೆ. ಅಥವಾ ನಿಮ್ಮ ಹೆಸರಿನಿಂದ ಥಾಯ್ಲೆಂಡ್‌ಗೆ, ಮಲೇಷಿಯಾಗೆ ಪಾರ್ಲೆಸ್ ಕಳುಹಿಸಲಾಗಿದೆ. ಈ ಪಾರ್ಸೆಲ್‌ನಲ್ಲಿ ಮಾದಕ ವಸ್ತು, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಇನ್ನಿತರ ವಸ್ತುಗಳು ಇವೆ. ಡ್ರಗ್ಸ್ ಜಾಲ ನಿಮ್ಮ ಹೆಸರಿನಲ್ಲಿ ಈ ಕೃತ್ಯ ಮಾಡಿದೆ. ಈ ಕುರಿತು ನೀವು ದೂರು ದಾಖಲಿಸಿ ಅಥವಾ ನಿಮಗೆ  ನರ್ಕೋಟಿಕ್ಸ್ ವಿಭಾಗ ಅಧಿಕಾರಿಗಳು ಕರೆ ಮಾಡಲಿದ್ದಾರೆ ಅನ್ನೋ ಸಂದೇಶ ನೀಡುತ್ತಾರೆ. ಬಳಿಕ ಕೋರಿಯರ್ ಕಂಪನಿ ನೀಡಿದ ನಂಬರ್‌ಗೆ ವ್ಯಾಟ್ಸ್ಆ್ಯಪ್ ಕರೆ ಮಾಡುವಂತೆ ಮಾಡುತ್ತಾರೆ, ಅಥವಾ ಅವರೇ ಮಾಡುತ್ತಾರೆ. ಪೊಲೀಸರು, ಸಿಸಿಬಿ, ಸೇರಿದಂತೆ ಇತರ ಅಧಿಕಾರಿಗಳ ವೇಷ ಧರಿಸಿ ವೀಡಿಯೋ ಕಾಲ್ ಮೂಲಕ ವಿಚಾರಣೆ ನಡೆಸುತ್ತಾರೆ. ಆಧಾರ್‌ನಲ್ಲಿರುವ ಅಥವಾ ಸರ್ಕಾರಿ ದಾಖಳೆಯಲ್ಲಿರುವ ಗುರುತು ಪತ್ತೆಗೆ ವಿವಸ್ತ್ರಗೊಳಿಸುತ್ತಾರೆ.  ಈ ಪ್ರಕರಣದಿಂದ ಪಾರಾಗಲು ಇಂತಿಷ್ಟು ಹಣ ಕೇಳುತ್ತಾರೆ. ಈ ಮೋಸದ ಜಾಲಕ್ಕೆ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಳ್ಳುವ ಅನಿವಾರ್ಯ ಪರಿಸ್ಥಿತಿ ಎದರಾಗುತ್ತದೆ. ಇದು ಒಂದು ಉದಾಹರಣೆಷ್ಟೇ, ಈ ರೀತಿ ಆರ್‌ಬಿಐ, ಆರೋಗ್ಯ ಅಧಿಕಾರಿಗಳು ಸೇರಿದಂತೆ ಹಲವರ ಸೋಗಿನಲ್ಲಿ ಕರೆಗಳು ಬರಬಹುದು.

ಡಿಜಿಟಲ್ ಅರೆಸ್ಟ್‌ನಿಂದ 3 ತಿಂಗಳಲ್ಲಿ ಭಾರತಕ್ಕೆ 120 ಕೋಟಿ ರೂ ನಷ್ಟ, ಪಾರಾಗಲು 3 ಸೂತ್ರ!

click me!