ಸಪ್ರೈಸ್ ಕೊಟ್ಟ ಪಿಎಂ ಮೋದಿ: ಕುಣಿದು ಕುಪ್ಪಳಿಸಿದ ನವದಂಪತಿ!

Published : Sep 12, 2021, 01:28 PM ISTUpdated : Sep 12, 2021, 01:55 PM IST
ಸಪ್ರೈಸ್ ಕೊಟ್ಟ ಪಿಎಂ ಮೋದಿ: ಕುಣಿದು ಕುಪ್ಪಳಿಸಿದ ನವದಂಪತಿ!

ಸಾರಾಂಶ

* ಗುಜರಾತ್‌ ನವದಂಪತಿಗೆ ಮದುವೆ ದಿನ ಅಚ್ಚರಿ * ಗುಜರಾತ್‌ನ ನವ ದಂಪತಿಗೆ ಪಿಎಂ ಮೋದಿ ಸಪ್ರೈಜ್‌  * ಪತ್ರ ಕಳುಹಿಸಿ ಶುಭ ಕೋರಿದ ಮೋದಿ

 ಅಹಮದಾಬಾದ್‌(ಸೆ.12): ಪಿಎಂ ಮೋದಿ ಜನಸಾಮಾನ್ಯರ ಜೊತೆಗೆ ಬೆರೆತುಕೊಳ್ಳುವ ವಿಚಾರಕ್ಕೆ ಭಾರೀ ಮನ್ನಣೆ ಪಡೆದುಕೊಂಡಿದ್ದಾರೆ. ಊಹೆಯನ್ನೂ ಇಟ್ಟುಕೊಳ್ಳದವರಿಗೆ ಸಪ್ರೈಜ್ ಕೊಟ್ಟು ಅಚ್ಚರಿ ಮೂಡಿಸುತ್ತಾರೆ. ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲೂ ಇದೇ ಬಗೆಯ ತಮ್ಮ ಸರಳತೆಯಿಂದ ಜನರ ಮನಸ್ಸು ಗೆದ್ದಿದ್ದಾರೆ. ಸದ್ಯ ಗುಜರಾತ್‌ನ ನವ ದಂಪತಿಗೆ ಪಿಎಂ ಮೋದಿ ಸಪ್ರೈಜ್‌ ನೀಡಿ ಮದುವೆ ದಿನದ ಖುಷಿಯನ್ನು ದುಪ್ಪಟ್ಟು ಮಾಡಿದ್ದಾರೆ.

ಹೌದು ಗುಜರಾತ್‌ನ ಧನ್ಬಾದ್‌ನ ನವದಂಪತಿಗೆ ಪ್ರಧಾನಿ ನರೇಂದ್ರ ಮೋದಿ ಪತ್ರ ಮುಖೇನ ಶುಭ ಹಾರೈಸಿ ಅಚ್ಚರಿಗೊಳಿಸಿದ್ದಾರೆ. ಇನ್ನು ಲೆಟರ್‌ ನೋಡಿದ ವಧು, ವರ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾರೆ. ಧ್ರುವ್ ರಾವಲ್ ಹಾಗೂ ಅವರ ಪತ್ನಿ ಸೋನಲ್ ಪಾಲಿಗೆ ಮೋದಿಯ ಶುಭಾಶಯ ಪತ್ರ ಮದುವೆ ದಿನ ಸಿಕ್ಕ ಅತ್ಯಮೂಲ್ಯ ಕೊಡುಗೆಯಾಗಿದೆ. ಪ್ರಧಾನಿ ಮೋದಿಯ ಈ ಪತ್ರ ಗುಜರಾತಿ ಭಾಷೆಯಲ್ಲಿದ್ದು, ಇದನ್ನು ಧ್ರುವ್ ರಾವಲ್ ತಂದೆ ಶೈಲೇಶ್ ರಾವಲ್ ಹೆಸರಿಗೆ ಕಳುಹಿಸಲಾಗಿದೆ. ಈ ಪತ್ರದಲ್ಲಿ ನವದಂಪತಿಗೆ ಸುಖಕರ ಜೀವನ ಹಾರೈಸಿದ್ದಾರೆ.

ಪತ್ರ ಪಡೆದ ದಂಪತಿಗೆ ಈಗ ಎಲ್ಲರ ಶುಭ ಹಾರೈಕೆ

ಪತ್ರವನ್ನು ಸ್ವೀಕರಿಸಿದ ನಂತರ, ಧನಬಾದ್‌ನಲ್ಲಿ ವಾಸಿಸುವ ಇಡೀ ಕುಟುಂಬದಲ್ಲಿ ಹಾಗೂ ಗುಜರಾತಿ ಸಮಾಜದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದೆ. ಇದರ ಹೊರತಾಗಿ, ಪ್ರಧಾನ ಮಂತ್ರಿಯ ಸಂದೇಶವನ್ನು ಸ್ವೀಕರಿಸಿದ ಬಳಿಕ, ದಂಪತಿಗೆ ದೇಶದೆಲ್ಲೆಡೆಯಿಂದ ಅಭಿನಂದನೆಯ ಮಹಾಪೂರ ಹರಿದು ಬಂದಿದೆ. ಧ್ರುವ್ ಮತ್ತು ಸೋನಾಲ್ ಇಬ್ಬರೂ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಾರೆ. 2012 ರಲ್ಲಿ, ಅದೇ ಕುಟುಂಬದ ಇನ್ನೊಂದು ದಂಪತಿಗಳಾದ ಸ್ನೇಹಾ ಮತ್ತು ಧ್ರುವಪದ್ ಅವರಿಗೆ ಪ್ರಧಾನಿ ಮೋದಿ ಅಭಿನಂದನಾ ಸಂದೇಶವನ್ನು ನೀಡಿದರು. ನಂತರ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!