
ನವದೆಹಲಿ (ಜುಲೈ 4): ಆಂಧ್ರಪ್ರದೇಶದ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ ದಿವಂಗತ ಪಾಸಲ ಕೃಷ್ಣಮೂರ್ತಿ (Pasala Krishna Murthy) ಅವರ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿ (PM Modi) ಸೋಮವಾರ ಭೇಟಿ ಮಾಡಿದರು. ಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಪುತ್ರಿ 90 ವರ್ಷದದ ಪಾಸಲ ಕೃಷ್ಣ ಭಾರತಿ (Pasala Krishna Bharti) ಗಾಲಿ ಖುರ್ಚಿಯಲ್ಲಿ ಪ್ರಧಾನಿ ಅವರನ್ನು ಭೇಟಿ ಮಾಡಲು ಬಂದಿದ್ದರು. ಈ ವೇಳೆ ಪ್ರಧಾನಿ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದ ಚಿತ್ರ ವೈರಲ್ ಆಗಿದೆ.
ಪಾಸಲ ಕೃಷ್ಣ ಭಾರತಿ ತನ್ನ ಸಹೋದರಿ ಮತ್ತು ಸೊಸೆಯೊಂದಿಗೆ ಭೀಮಾವರಂನಲ್ಲಿ ಪ್ರಧಾನಿಯವರನ್ನು ಭೇಟಿ ಮಾಡಿದರು. ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಂ ತಾಲೂಕಿನ ಪಶ್ಚಿಮ ವಿಪ್ಪರ್ರು ಗ್ರಾಮದಲ್ಲಿ 1900 ರಲ್ಲಿ ಜನಿಸಿದ ಪಾಸಲ ಕೃಷ್ಣ ಮೂರ್ತಿ ಅವರು 1921 ರಲ್ಲಿ ತಮ್ಮ ಪತ್ನಿಯೊಂದಿಗೆ ಕಾಂಗ್ರೆಸ್ ಪಕ್ಷವನ್ನು ಸೇರಿದರು. ಗಾಂಧಿವಾದಿ, ಅವರು ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಭಾಗವಹಿಸಿದರು, ಇದಕ್ಕಾಗಿ ಅವರಿಗೆ ಶಿಕ್ಷೆ ಒಂದು ವರ್ಷ ಜೈಲು ಶಿಕ್ಷೆಯನ್ನೂ ವಿಧಿಸಲಾಗಿತ್ತು. ಅವರು 1978 ರಲ್ಲಿ ನಿಧನರಾದರು.
ಆಂಧ್ರಪ್ರದೇಶದ ಭೀಮಾವರಂನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟಗಾರ ಅಲ್ಲೂರಿ ಸೀತಾರಾಮ ರಾಜು ಅವರ 125 ನೇ ಜನ್ಮ ದಿನಾಚರಣೆಯ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸೋಮವಾರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದರು. ಆ ಬಳಿಕ ಡಿಜಿಟಲ್ ಇಂಡಿಯಾ ವೀಕ್ 2022 ಅನ್ನು ಉದ್ಘಾಟಿಸಲು ಪ್ರಧಾನಿ ಮೋದಿ ಗುಜರಾತ್‌ನ ಗಾಂಧಿನಗರಕ್ಕೆ ಭೇಟಿ ನೀಡಲಿದ್ದಾರೆ.
ಪ್ರತಿಮೆಯನ್ನು ಅನಾವರಣಗೊಳಿಸಿದ ನಂತರ ಜನರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸವು ಕೆಲವು ವರ್ಷಗಳ ಅಥವಾ ಕೆಲವು ಜನರ ಬಗ್ಗೆ ಇರುವ ಕಥೆಯಲ್ಲ. ದೇಶದ ಮೂಲೆ ಮೂಲೆಯ ಜನರ ತ್ಯಾಗದ ಪ್ರತೀಕ ಎಂದು ಹೇಳಿದರು.
ಒಂದೆಡೆ ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದ್ದು, ಅದರೊಂದಿಗೆ ಅಲ್ಲೂರಿ ಸೀತಾರಾಮರಾಜು ಅವರ 125ನೇ ಜನ್ಮದಿನಾಚರಣೆ ಹಾಗೂ ರಾಂಪ ಬಂಡಾಯದ 100ನೇ ವರ್ಷದ ಸಂಭ್ರಮವನ್ನೂ ಆಚರಿಸಲಾಗುತ್ತಿದೆ ಎಂದರು. 1922ರಲ್ಲಿ ಆರಂಭವಾದ ರಾಂಪಾ ದಂಗೆಯನ್ನು ಅಲ್ಲೂರಿ ಸೀತಾರಾಮರಾಜು ಮುನ್ನಡೆಸಿದ್ದರು. ಸ್ಥಳೀಯ ಜನರು ಅವರನ್ನು "ಮಾನ್ಯಂ ವೀರುಡು" (ಕಾಡಗಳ ವೀರ) ಎಂದು ಕರೆಯುತ್ತಾರೆ. ಸ್ವಾತಂತ್ರ್ಯ ಹೋರಾಟವು ಕೇವಲ ಕೆಲವು ವರ್ಷಗಳ, ಕೆಲವು ಪ್ರದೇಶಗಳು ಅಥವಾ ಕೆಲವು ಜನರ ಇತಿಹಾಸವಲ್ಲ, ಇದು ದೇಶದ ಮೂಲೆ ಮೂಲೆಯ ತ್ಯಾಗದ ಇತಿಹಾಸವಾಗಿದೆ ಎಂದು ಮೋದಿ ಹೇಳಿದರು. .
ಹುಲಿ ಬರುತ್ತಿದ್ದಂತೆಯೇ ನರಿಗಳು ಓಡಿ ಹೋಗ್ತವೆ: ಮೋದಿ ಸ್ವಾಗತಿಸದ ಕೆಸಿಆರ್‌ಗೆ ಬಿಜೆಪಿ ಲೇವಡಿ!
ಯಾರಿವರು ಪಾಸಲ ಕೃಷ್ಣಮೂರ್ತಿ: ಪಾಸಲ ಕೃಷ್ಣಮೂರ್ತಿ (1900-78) ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಾಡೆಪಲ್ಲಿಗುಡೆಂ ತಾಲೂಕಿನ ಪಶ್ಚಿಮ ವಿಪರು ಗ್ರಾಮದವರು. ಅವರು 26 ಜನವರಿ 1900 ರಂದು ಜನಿಸಿದರು. ಅವರ ತಂದೆಯ ಹೆಸರು ಆದಿಯಾ ಮತ್ತು ತಾಯಿಯ ಹೆಸರು ಸೀತಮ್ಮ. ಪಸಲ ಅವರು, ಅಂಜಲಕ್ಷ್ಮಿ ಅವರನ್ನು ವಿವಾಹವಾಗಿದ್ದರು.
ಮಾರ್ಚ್ 1921 ರಲ್ಲಿ ಮಹಾತ್ಮ ಗಾಂಧಿ ವಿಜಯವಾಡಕ್ಕೆ ಹೋದಾಗ, ಕೃಷ್ಣಮೂರ್ತಿ ಮತ್ತು ಅಂಜಲಕ್ಷ್ಮಿ ಕಾಂಗ್ರೆಸ್ ಸೇರಿದರು. 1929ರಲ್ಲಿ ಗಾಂಧೀಜಿಯವರು 1929ರಲ್ಲಿ ಚಾಗಲ್ಲುವಿನ ಆನಂದ ನಿಕೇತನ ಆಶ್ರಮವನ್ನು ತಲುಪಿದಾಗ ಕೃಷ್ಣಮೂರ್ತಿ ದಂಪತಿಗಳು ತಮ್ಮ ಚಿನ್ನವನ್ನು ಖದರ್ ನಿಧಿಗೆ ನೀಡಿದರು. ಆ ಬಳಿಕ ಹುಟ್ಟಿದ್ದು ಕೃಷ್ಣ ಭಾರತಿ. ಉಪ್ಪಿನ ಸತ್ಯಾಗ್ರಹ ಚಳವಳಿಯಲ್ಲಿ ಪಾಸಲ ದಂಪತಿ ಭಾಗವಹಿಸಿದ್ದರು. 6 ಅಕ್ಟೋಬರ್ 1930 ರಂದು, ರಾಜಮಂಡ್ರಿ ಮತ್ತು ವೆಲ್ಲೂರು ಜೈಲುಗಳಲ್ಲಿ ಒಂದು ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸಿದ್ದರು.
ಹಂಪ್ಸ್‌ಗಳು ಮಾಯ, ಪ್ರಧಾನಿ ಮೋದಿ ಬಂದು ಹೋದ ರಸ್ತೆ ಈಗ ಆಕ್ಸಿಡೆಂಟ್ ಝೋನ್!
ಗಾಂಧಿ-ಇರ್ವಿನ್ ಒಪ್ಪಂದದ ಪರಿಣಾಮವಾಗಿ ಅವರು 13 ಮಾರ್ಚ್ 1931 ರಂದು ಜೈಲಿನಿಂದ ಬಿಡುಗಡೆಯಾದರು. ಪಾಸಲ್ ಅವರು ತಾಡೆಪಲ್ಲಿಗುಡೆಂ ಮಾರುಕಟ್ಟೆಯಲ್ಲಿ ನಾಗರಿಕ ಅಸಹಕಾರ ಚಳವಳಿಯ ಸಂದರ್ಭದಲ್ಲಿ ವಿದೇಶಿ ಬಟ್ಟೆ ಅಂಗಡಿಯಲ್ಲಿ ಧರಣಿ ನಡೆಸಿದರು ಮತ್ತು 26 ಜೂನ್ 1932 ರಂದು ಭೀಮಾವರಂ ಸಬ್-ಕಲೆಕ್ಟರ್ ಕಚೇರಿಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದರು. ಆಗಲೂ ಅವರನ್ನು ಬಂಧಿಸಿ 27 ಜೂನ್ 1932 ರಂದು ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತಲ್ಲದೆ. ರೂ 400 ದಂಡವನ್ನೂ ವಿಧಿಸಲಾಗಿತ್ತು. ಪಾಸಲ್ ಖಾದಿ ಬಳಕೆ ಮತ್ತು ಹರಿಜನರ ಉನ್ನತಿಗಾಗಿ ಹೋರಾಟಕ್ಕೆ ಹೆಸರುವಾಸಿಯಾಗಿದೆ. ಕೃಷ್ಣಮೂರ್ತಿ ಮತ್ತು ಅವರ ಪತ್ನಿ ಅಂಜಲಕ್ಷ್ಮಿ ಪಶ್ಚಿಮ ವಿಪರುವಿನಲ್ಲಿ ಆಸ್ಪತ್ರೆಯನ್ನೂ ನಿರ್ಮಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ