ಉದ್ಧವ್‌ಗಾಗಿ ಕಣ್ಣೀರು ಸುರಿಸಿದ್ದ ಶಾಸಕನಿಂದ ವಿಶ್ವಾಸಮತಕ್ಕೂ ಮುನ್ನ ಶಿಂಧೆ ಬಣಕ್ಕೆ!

Published : Jul 04, 2022, 02:02 PM IST
ಉದ್ಧವ್‌ಗಾಗಿ ಕಣ್ಣೀರು ಸುರಿಸಿದ್ದ ಶಾಸಕನಿಂದ ವಿಶ್ವಾಸಮತಕ್ಕೂ ಮುನ್ನ ಶಿಂಧೆ ಬಣಕ್ಕೆ!

ಸಾರಾಂಶ

* ಸುಲಭವಾಗಿ ಬಹುಮತ ಸಾಬೀತುಪಡಿಸಿದ ಶಿಂಧೆ ಬಣ * ಉದ್ಧವ್‌ಗಾಗಿ ಕಣ್ಣೀರು ಸುರಿಸಿದ್ದ ಶಾಸಕನಿಂದ ವಿಶ್ವಾಸಮತಕ್ಕೂ ಮುನ್ನ ಶಿಂಧೆ ಬಣಕ್ಕೆ * ಶಾಸಕ ಸಂತೋಷ್ ಬಂಗಾರ್ ಈಗ ಶಿಂಧೆ ಬಣಕ್ಕೆ

ಮುಂಬೈ(ಜು.04): ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಸೆಂಬ್ಲಿಯಲ್ಲಿ ವಿಶ್ವಾಸಮತ ಪರೀಕ್ಷೆಗೆ ಒಂದು ರಾತ್ರಿ ಮೊದಲು, ಠಾಕ್ರೆ ತಂಡದಿಂದ ಮತ್ತೊಬ್ಬ ಶಿವಸೇನೆ ಶಾಸಕ ಶಿಂಧೆ ಬಣ ಸೇರಿಕೊಂಡಿದ್ದಾರೆ. ಹೀಗಿದ್ದರೂ ಶಿಂಧೆ ಈಗಾಗಲೇ ನಿಶ್ಚಿತ ಬಹುಮತವನ್ನು ಹೊಂದಿದ್ದರು ಎಂಬುವುದು ಉಲ್ಲೇಖನೀಯ. ಶಿಂಧೆ ಬಣ ಸೇರಿದ ಶಾಸಕ ಸಂತೋಷ್ ಬಂಗಾರ್ ಅವರು ಒಂದು ವಾರದ ಹಿಂದೆ ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸಿ ಸಾರ್ವಜನಿಕವಾಗಿ ಅಳಲು ತೋಡಿಕೊಂಡಿದ್ದರು.

ನಿನ್ನೆ ತಡರಾತ್ರಿ ಸಂತೋಷ್ ಬಂಗಾರ್ ಅವರು ತಮ್ಮ ಬೆಂಬಲಿಗ ಶಾಸಕರೊಂದಿಗೆ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ತಂಗಿರುವ ಮುಂಬೈನ ಹೋಟೆಲ್‌ಗೆ ತೆರಳಿದ್ದಾರೆ. ಬಂಗಾರ್ ಅಧಿಕೃತವಾಗಿ ಪ್ರತಿಸ್ಪರ್ಧಿ ಶಿಂಧೆಯ ಪಾಳಯಕ್ಕೆ ಸೇರ್ಪಡೆಗೊಂಡಿದ್ದಾರೆ. ಶಿವಸೇನೆಯಲ್ಲಿ ಬಂಡಾಯವೆದ್ದು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರವನ್ನು ಉರುಳಿಸಿದ ಕೆಲವೇ ದಿನಗಳಲ್ಲಿ ಏಕನಾಥ್ ಶಿಂಧೆ ಇಂದು ಸುಲಭವಾಗಿ ವಿಶ್ವಾಸ ಮತ ಗೆದ್ದಿದ್ದಾರೆ.

ಜೂನ್ 24 ರಂದು, ಏಕನಾಥ್ ಶಿಂಧೆ ಅವರ ಬಂಡಾಯ ಬಣಕ್ಕೆ ಶಾಸಕರು ಸೇರುವುದನ್ನು ತಡೆಯಲು ಉದ್ಧವ್ ಠಾಕ್ರೆ ಹೋರಾಟ ನಡೆಸುತ್ತಿದ್ದಾಗ, ಸಂತೋಷ್ ಬಂಗಾರ್ ಅವರು ತಮ್ಮ ಕ್ಷೇತ್ರದ ಜನರನ್ನು ಉದ್ದೇಶಿಸಿ ಉದ್ಧವ್ ಠಾಕ್ರೆ ಅವರನ್ನು ಬೆಂಬಲಿಸಿ ಕೈ ಜೋಡಿಸಿ ಅಳಲು ಮತ್ತು ವೀಡಿಯೊವನ್ನು ಪೋಸ್ಟ್ ಮಾಡಿದ್ದರು.

ವೀಡಿಯೊದಲ್ಲಿ, ಬಂಗಾರ್ ಅವರು ಠಾಕ್ರೆಗೆ ನಿಷ್ಠೆಯನ್ನು ತೋರಿಸುತ್ತಾ ಕಣ್ಣೀರಿಟ್ಟಿದ್ದರು. ಅಲ್ಲದೇ ಠಾಕ್ರೆ ಪದ ಧ್ವನಿ ಎತ್ತಿದ್ದ ಬಂಗಾರ್ ಪಕ್ಷದಲ್ಲಿನ ಬಂಡಾಯವನ್ನು "ದ್ರೋಹ" ಎಂದು ಕರೆದು ಅವರು ಏಕನಾಥ್ ಶಿಂಧೆ ಮರಳಲು ವಿನಂತಿಸಿದ್ದರು. ಹೀಗಿರುವಾಗ ಪಕ್ಕದಲ್ಲಿ ಕುಳಿತಿದ್ದ ಬೆಂಬಲಿಗರೊಬ್ಬರು ಕರವಸ್ತ್ರದಿಂದ ಕೆನ್ನೆ ಒರೆಸಿಕೊಂಡಿದ್ದರು. .

ಬಾಳಾಸಾಹೇಬ್ ಠಾಕ್ರೆ, ಉದ್ಧವ್-ಜಿ ಠಾಕ್ರೆ, ನೀವು ಮುಂದುವರಿಯಿರಿ, ನಾವು ನಿಮ್ಮೊಂದಿಗೆ ಇದ್ದೇವೆ ಎಂದು ಬಂಗಾರ್ ಅವರು ನೆರೆದಿದ್ದ ಜನಸಮೂಹದಿಂದ ಘೋಷಣೆಗಳನ್ನು ಎತ್ತಿದ್ದರು. ಇಂದು ಬೆಳಗ್ಗೆ ಬಂಗಾರ್ ಅವರು ಏಕನಾಥ್ ಶಿಂಧೆ ಅವರೊಂದಿಗೆ ಮತ ಚಲಾಯಿಸಿದಾಗ, ಪ್ರತಿಪಕ್ಷಗಳು ಅವರನ್ನು ಕೂಗಿದವು. ಮತ್ತೋರ್ವ ಶಾಸಕ ಶ್ಯಾಮಸುಂದರ್ ಶಿಂಧೆ ಕೂಡ ಕೊನೆಯ ಕ್ಷಣದಲ್ಲಿ ಪಕ್ಷ ಬದಲಾಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..