ಕೊರೋನಾ ನಿಯಂತ್ರಣಕ್ಕೆ ಮೋದಿ 10 ಸೂತ್ರ!

By Kannadaprabha NewsFirst Published Apr 5, 2021, 8:18 AM IST
Highlights

ಕೊರೋನಾ ನಿಯಂತ್ರಣಕ್ಕೆ ಮೋದಿ 10 ಸೂತ್ರ| ನಿಯಂತ್ರಣಾ ಕ್ರಮದ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ನಾಳೆಯಿಂದ ಅಭಿಯಾನ

ನವದೆಹಲಿ(ಏ.05): ದೇಶದಲ್ಲಿ 2ನೇ ಅಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದರ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಉನ್ನತ ಮಟ್ಟದ ಸಭೆ ನಡೆಸಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಈ ವೇಳೆ ಕೊರೋನಾ ಪ್ರಕರಣಗಳ ನಿಯಂತ್ರಣಕ್ಕೆ ಮೋದಿ ಅವರು 10 ಅಂಶಗಳನ್ನು ಮುಂದಿಟ್ಟಿದ್ದಾರೆ.

ಉನ್ನತ ಮಟ್ಟದ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಜೊತೆಗಿನ ಸಭೆಯ ವೇಳೆ 10 ರಾಜ್ಯಗಳಲ್ಲಿನ ಸೋಂಕಿನ ಏರಿಕೆ, ಸಾವಿನ ಪ್ರಮಾಣದ ಬಗ್ಗೆ ವಿಸ್ತೃತವಾದ ವಿವರಣೆಯನ್ನು ಮೋದಿ ಅವರ ಮುಂದೆ ಸಾದರಪಡಿಸಲಾಯಿತು. ಈ ವೇಳೆ ಆರೋಗ್ಯ ಮೂಲ ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಎಲ್ಲಾ ರಾಜ್ಯಗಳಲ್ಲಿ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮೋದಿ ಸೂಚನೆ ನೀಡಿದರು. ಅಲ್ಲದೇ ಕೊರೋನಾ ಬಗ್ಗೆ ಜನಾಂದೋಲನ ನಡೆಸುವ ಹಾಗೂ ಲಸಿಕೆ ಅಭಿಯಾನಕ್ಕೆ ಚುರುಕು ನೀಡಬೇಕಾದ ಅಗತ್ಯವಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಮೋದಿ ಸೂಚಿಸಿದ 10 ಅಂಶಗಳು

- ಕೊರೋನಾ ವಿರುದ್ಧದ ಹೋರಾಟದಲ್ಲಿ ಜನರ ಭಾಗವಹಿಸುವಿಕೆ, ಸಮುದಾಯದ ಹೊಣೆಗಾರಿಕೆ ಅತ್ಯಂತ ಮಹತ್ವದ್ದು.

- ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ, ನಿಯಂತ್ರಣಾ ಕ್ರಮ, ಲಸಿಕೆ- ಈ 5 ಸೂತ್ರ ಕೊರೋನಾ ಹರಡುವಿಕೆ ತಡೆಯಬಲ್ಲದು

- ಸೋಂಕು ನಿಯಂತ್ರಣ ಬಗ್ಗೆ ಜನರಲ್ಲಿ ಅರಿವಿಗೆ ಏ.6ರಿಂದ ಏ.14ರವರೆಗೆ ದೇಶದೆಲ್ಲೆಡೆ ಜಾಗೃತಿ ಶಿಬಿರ, ಜನಾಂದೋಲನ

- ಆರೋಗ್ಯ ಮೂಲಸೌಕರ್ಯ ಹೆಚ್ಚಳ. ಶೇ.100ರಷ್ಟುಮಾಸ್ಕ್‌ ಬಳಕೆ, ವೈಯಕ್ತಿಕ ಶುಚಿತ್ವ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಗೆ ಆದ್ಯತೆ.

- ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಆಮ್ಲಜನಕದ ಲಭ್ಯತೆ, ವೆಂಟಿಲೇಟರ್‌ ಸೌಲಭ್ಯಲಭ್ಯವಾಗುವಂತೆ ನೋಡಿಕೊಳ್ಳಬೇಕು.

- ಎಲ್ಲಾ ರಾಜ್ಯಗಳಲ್ಲಿ ಸಾವಿಗೆ ಕಾರಣವಾಗುತ್ತಿರುವ ಸನ್ನಿವೇಶವನ್ನು ತಪ್ಪಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು.

- ಪಂಜಾಬ್‌, ಮಹಾರಾಷ್ಟ್ರ, ಛತ್ತೀಸ್‌ಗಢದಲ್ಲಿ ಪರಿಸ್ಥಿತಿಯ ಪರಿಶೀಲನೆಗೆ ಕೇಂದ್ರದಿಂದ ತಜ್ಞರ ತಂಡ ರವಾನೆ

- ಕೊರೋನಾ ಹೆಚ್ಚಿರುವ ಸ್ಥಳಗಳಲ್ಲಿ ಎಲ್ಲಾ ರಾಜ್ಯಗಳು ಕಟ್ಟುನಿಟ್ಟಿನ ನಿಯಂತ್ರಣಾ ಕ್ರಮಗಳನ್ನು ಜಾರಿಗೊಳಿಸಬೇಕು. ನಿಯಮಾವಳಿ ಕಠಿಣಗೊಳಿಸಬೇಕು.

- ಸಕ್ರಿಯ ಪ್ರಕರಣ ಪತ್ತೆ ಮತ್ತು ಕಂಟೇನ್ಮೆಂಟ್‌ ಪ್ರದೇಶ ನಿರ್ವಹಿಸಲು ಸಮುದಾಯ ಮಟ್ಟದಲ್ಲಿ ಸ್ವಯಂ ಸೇವಕರನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

- ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಅಧಿಕಾರಿಗಳು ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಬೇಕಿದೆ.

click me!