
ನವದೆಹಲಿ(ಮಾ.16): ಪ್ರಧಾನಿ ನರೇಂದ್ರ ಮೋದಿಯ ಮುಖ್ಯ ಸಲಹೆಗಾರನಾಗಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದ ಪಿಕೆ ಸಿನ್ಹಾ ಇದೀಗ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪ್ರಧಾನಿ ಕಾರ್ಯಾಲಯ ಸಿನ್ಹಾ ರಾಜೀನಾಮೆಯನ್ನು ಖಚಿತಪಡಿಸಿದೆ. ವೈಯುಕ್ತಿಕ ಕಾರಣ ನೀಡಿ ಸಿನ್ಹಾ ರಾಜೀನಾಮೆ ನೀಡಿದ್ದಾರೆ.
CM ಜೊತೆ ಮೋದಿ ಕೊರೋನಾ ಸಭೆಗೂ ಮುನ್ನ ಮತ್ತೆ 4 ನಗರಗಳಲ್ಲಿ ಕರ್ಫ್ಯೂ ಹೇರಿಕೆ!
ಪಿಕೆ ಸಿನ್ಹಾ ಪ್ರಧಾನಿ ಪ್ರಧಾನ ಸಲಹೆಗಾರ ಜವಾಬ್ದಾರಿಗೂ ಮುನ್ನ ಕ್ಯಾಬಿನೆಟ್ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಿವೃತ್ತಿಯಾದ ಬಳಿಕ ನರೇಂದ್ರ ಮೋದಿ, 2019ರ ಸೆಪ್ಟೆಂಬರ್ ತಿಂಗಳಲ್ಲಿ ತಮ್ಮ ಪ್ರಧಾನ ಸಲಹೆಗಾರನಾಗಿ ನೇಮಕ ಮಾಡಿಕೊಂಡಿದ್ದರು.
ಪಿಕೆ ಸಿನ್ಹಾ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಸಿನ್ಹಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕಾರ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಧಾನಿ ಕಾರ್ಯಾಲದಲ್ಲಿ ಇತ್ತೀಚಿನ ದಿನಗಳಲ್ಲಿ ಹಲವು ಬದಲಾವಣೆಗಳಾಗಿವೆ. 2020ರ ಎಪ್ರಿಲ್ ತಿಂಗಳಲ್ಲಿ ಪ್ರಧಾನಿ ಕಾರ್ಯದಲ್ಲಿದ್ದ ತರುಣ್ ಬಜಾಜ್, ಆರ್ಥಿಕ ವ್ಯವಹಾರ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿದ್ದರು. ಮತ್ತೊರ್ವ ಹಿರಿಯ ಅಧಿಕಾರಿ ಎಕೆ ಶರ್ಮಾ ಸೂಕ್ಷ್ಮ ಮತ್ತು ಸಣ್ಣ ಉದ್ಯಮ ಸಚಿವಾಲಯಕ್ಕೆ ತೆರಳಿ ನಿವೃತ್ತಿಯಾದರು. ಹೀಗಾಗಿ ಹಿರಿಯ ಅಧಿಕಾರಾಗಿಳಾದ ಭಾಸ್ಕರ್ ಖುಲ್ಬೆ ಹಾಗೂ ಅಮರಜೀತ್ ಸಿನ್ಹಾ ಅವರನ್ನು ಪ್ರಧಾನಿ ಸಲಹೆಗಾರರಾಗಿ ನೇಮಕ ಮಾಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ