ಉಪರಾಷ್ಟ್ರಪತಿ ಸ್ವಾಗತಿಸುವ ದಾರಿಯಲ್ಲಿ ಬಿದ್ದಿದ್ದ ಕಸ ಹೆಕ್ಕಿದ ಪ್ರಧಾನಿ ಮೋದಿ, ವಿಡಿಯೋ!

Published : Jan 26, 2025, 03:27 PM IST
ಉಪರಾಷ್ಟ್ರಪತಿ ಸ್ವಾಗತಿಸುವ ದಾರಿಯಲ್ಲಿ ಬಿದ್ದಿದ್ದ ಕಸ ಹೆಕ್ಕಿದ ಪ್ರಧಾನಿ ಮೋದಿ, ವಿಡಿಯೋ!

ಸಾರಾಂಶ

ಕರ್ತವ್ಯಪಥದ ಗಣರಾಜ್ಯೋತ್ಸವ ಆಚರಣೆ ವೇಳೆ ಉಪರಾಷ್ಟ್ರಪತಿಯನ್ನು ಸ್ವಾಗತಿಸಲು ಬಂದ ಮೋದಿ ಅಲ್ಲೆ ಬಿದ್ದಿದ್ದ ಕಸ ಹೆಕ್ಕಿ ಸ್ವಚ್ಚಗೊಳಿಸಿದ ಘಟನೆ ನಡೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ನವದೆಹಲಿ(ಜ.26) ಭಾರತ ಅದ್ಧೂರಿಯಾಗಿ ಗಣರಾಜ್ಯೋತ್ಸವ ಆಚರಿಸಿದೆ. ದೆಹಲಿಯ ಕರ್ತವ್ಯಪಥದಲ್ಲಿ ಭಾರತ ಗಣತಂತ್ರ ದಿನಾಚರಣೆ ಮಾಡಿತ್ತು. ಸೇನೆಗಳ ಶಕ್ತಿ ಪ್ರದರ್ಶನ, ಪಥಸಂಚಲನ, ಸ್ತಬ್ಧ ಚಿತ್ರಗಳ ಪ್ರದರ್ಶನ, ಕಲಾ ತಂಡಗಳ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳುು ಮನಸೂರೆಗೊಂಡಿದೆ. ಈ ಕಾರ್ಯಕ್ರಮಕ್ಕೆ ಆಗಮಿಸುವ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿಗಳನ್ನು ಪ್ರಧಾನಿ ಬರ ಮಾಡಿಕೊಳ್ಳುತ್ತಾರೆ. ಇದರಂತೆ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸ್ವಾಗತಿಸಲ ಬಂದ ಪ್ರಧಾನಿ ಮೋದಿ ಅಲ್ಲೆ ಬಿದ್ದಿದ್ದ ಕಸವನ್ನು ಗಮನಿಸಿದ್ದಾರೆ. ಬಳಿಕ ಈ ಕಸ ಹೆಕ್ಕಿದ ಮೋದಿ, ಭದ್ರತಾ ಪಡೆ ಕೈಗೆ ನೀಡಿದ ವಿಡಿಯೋ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.

ಗಣರಾಜ್ಯೋತ್ಸವ ದಿನಾಚರಣೆಗೆ ಮೋದಿ ಹಳದಿ ಹಾಗೂ ಕೆಂಪು ಬಣ್ಣದ ಟರ್ಬನ್ ಧರಿಸಿ ಆಗಮಿಸಿದ್ದರು. ಮೋದಿ ಆಗಮಿಸಿದ ಬಳಿಕ ಉಪರಾಷ್ಟ್ರಪತಿ ಜಗದೀಪ್ ದನ್ಕರ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ. ಉಪರಾಷ್ಟ್ರಪತಿಗಳನ್ನು ಬರಮಾಡಿಕೊಳ್ಳಲು ಪ್ರಧಾನಿ ಮೋದಿ ಕರ್ತವ್ಯಪಥಕ್ಕೆ ಆಗಮಿಸಿದ್ದಾರೆ. 

ರಿಬ್ಬನ್ ಬಿಚ್ಚಿ ಜೇಬಿನಲ್ಲಿಟ್ಟು ಅಂಚೆ ಚೀಟಿ ಬಿಡುಗಡೆ, ಮೋದಿ ಸ್ವಚ್ಚ ಭಾರತ ನಡೆಗೆ ಭಾರಿ ಮೆಚ್ಚುಗೆ!

ಒಂದೆಡೆಯಿಂದ ಜಗದೀಪ್ ಧನ್ಕರ್ ಕಾರಿನ ಮೂಲಕ ಆಗಮಿಸುತ್ತಿದ್ದಂತೆ ಬರಮಾಡಿಕೊಳ್ಳಲು ಮೋದಿ ಕರ್ತ್ಯವ್ಯ ಪಥಕ್ಕೆ ಆಗಮಿಸಿದ್ದಾರೆ. ಈ ವೇಳೆ ಕಸ ಬಿದ್ದಿರುವುದನ್ನು ನೋಡಿದ ಮೋದಿ ತಕ್ಷಣೇ ಸ್ವಚ್ಚಗೊಳಿಸಿದ್ದಾರೆ. ಬಿದ್ದಿರುವ ಕಸವನ್ನು ಹೆಕ್ಕಿ ಭದ್ರತಾ ಸಿಬ್ಬಂಧಿಯಲ್ಲಿ ಕೈಯಲ್ಲಿ ನೀಡಿದ್ದಾರೆ. ಬಳಿಕ ಮೋದಿ ಜಗದೀಪ್ ಧನ್ಕರ್ ಸ್ವಾಗಸಲು ತೆರಳಿದ್ದಾರೆ. ಕೆಲವೇ ಸೆಕೆಂಡ್‌ನಲ್ಲಿ ಜಗದೀಪ್ ಧನ್ಕರ್ ಆಗಮಿಸಿದ್ದಾರೆ. ಉಪರಾಷ್ಟ್ರಪತಿಗಳ ಸ್ವಾಗತಿಸಿದ ಮೋದಿ, ಕಾರ್ಯಕ್ರಮಕ್ಕೆ ಬರಮಾಡಿಕೊಂಡಿದ್ದಾರೆ. ಇತ್ತ ಮೋದಿ ನೀಡಿದ ಕಸವನ್ನು ಭದ್ರತಾ ಸಿಬ್ಬಂದಿ ತನ್ನ ಜೇಬಿಗೆ ಹಾಕಿದ್ದಾರೆ. 

 

 

ಮೋದಿಯ ಸ್ವಚ್ಚ ಭಾರತ ನಡೆಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಈ ವಿಡಿಯೋಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೋದಿ ಸ್ವಚ್ಚ ಭಾರತದ ರಾಯಭಾರಿ ಎಂದು ಹಲವರು ಶ್ಲಾಘಿಸಿದ್ದಾರೆ. ಮೋದಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಮೋದಿಯ ಈ ನಡೆ ದೇಶಕ್ಕೆ ನೀಡಿದ ಸಂದೇಶವಾಗಿದೆ. ಸ್ವಚ್ಚತೆಯ ಅಭಿಯಾನದಲ್ಲಿ ಮೋದಿಯ ಈ ಸಂದೇಶ ಅತ್ಯಂತ ಪರಿಣಾಮಕಾರಿಯಾಗಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸ್ವಚ್ಚ ಭಾರತ ಕುರಿತು ಮೋದಿ ಅತೀವ ಗಮನಹರಿಸುತ್ತಾರೆ. ಹಲವು ಬಾರಿ ವೇದಿಕೆಗಳಲ್ಲಿ ಕಸವನ್ನು ಮೋದಿ ಹೆಕ್ಕಿದ್ದಾರೆ. ಇಷ್ಟೇ ಉದ್ಘಾಟನೆ, ಬಿಡುಗಡೆ ವೇಳೆ ಅಲಂಕಾರಿ ಕಸಗಳನ್ನು ಮೋದಿ ತಮ್ಮ ಜೇಬಿಗೆ ಹಾಕಿಕೊಳ್ಳುತ್ತಾರೆ. ಬಳಿಕ ಕಸದ ಬುಟ್ಟಿಯಲ್ಲಿ ಹಾಕುತ್ತಾರೆ. ಈ ರೀತಿ ಮೋದಿ ಸ್ವಚ್ಚತೆ ಕುರಿತು ಪ್ರತಿ ವೇದಿಕೆಗಳಲ್ಲಿ ತಮ್ಮ ನಡತೆಯಿಂದಲೇ ಮಹತ್ವದ ಸಂದೇಶ ನೀಡಿದ್ದಾರೆ.

ಮೋದಿ ನಿಮಗಿಂತ ಉತ್ತಮ ನಟ, ಕಾಪಿ ಸಾಧ್ಯವಿಲ್ಲ; ಸುರೇಶ್ ಗೋಪಿ ಸ್ಚಚ್ಚ ಅಭಿಯಾನಕ್ಕೆ ಕಾಂಗ್ರೆಸ್ ವ್ಯಂಗ್ಯ!
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರೈತರಿಗಾಗಿ ಮಸೂದೆ ಮಂಡಿಸಿದ ಸಂಸದ ಡಾ.ಕೆ.ಸುಧಾಕರ್: ಹೈನುಗಾರರು-ಹೂವು ಬೆಳೆಗಾರರಿಗೆ ದೊಡ್ಡ ಆಶಾಕಿರಣ
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!