ಮೊದಲ ಬಾರಿ ಮೋದಿ ಮನ್‌ ಕೀ ಬಾತ್‌ಗೆ ಭಾರೀ Dislikes!

By Suvarna NewsFirst Published Aug 31, 2020, 12:24 PM IST
Highlights

ಮೋದಿ ಮನ್‌ ಕೀ ಭಾರೀ Dislike| ಸಮಸ್ಯೆಗಳ ನಿವಾರಣೆ ಬಗ್ಗೆ ಮಾತನಾಡಿ ಎಂದು ಆಕ್ರೋಶ| ಎಷ್ಟು ಮಂದಿ ಇಷ್ಟಪಟ್ಟಿದ್ದಾರೆ?  Dislike ಮಾಡಿದ್ದಾರೆ? ಇಲ್ಲಿದೆ ವಿವರ

ನವದೆಹಲಿ(ಆ.31): ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ 68ನೇ ಆವೃತ್ತಿಯ ಮನ್‌ ಕೀ ಬಾತ್‌ ರೇಡಿಯೋ ಕಾರ್ಯಕ್ರಮ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ಮನ್‌ ಕೀ ಬಾತ್‌ ಕಾರ್ಯಕ್ರಮದ ಈ ವಿಡಿಯೋವನ್ನು ಬಿಜೆಪಿಯ ಯೂ ಟ್ಯೂಬ್‌ ಖಾತೆಯ್ಲೂ ರಿಲೀಸ್ ಮಾಡಲಾಗಿದ್ದು, ಈವರೆಗೂ 12 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಆದರೆ ಅಚ್ಚರಿ ಮೂಡಿಸುವ ವಿಚಾರವೆಂದರೆ ಈ ವಿಡಿಯೋವನ್ನು ಇಷ್ಟಪಟ್ಟವರಿಗಿಂತ ಅಧಿಕ ಮಂದಿ  Dislike ಮಾಡಿದ್ದಾರೆ.

ಹೌದು ಪಿಎಂ ಮೋದಿಯ ಮನ್‌ ಕೀ ಬಾತ್‌ ಕಾರ್ಯಕ್ರಮಕ್ಕೆ ಇದೇ ಮೊದ ಬಾರಿ ಭಾರೀ ಪ್ರಮಾಣದಲ್ಲಿ Dislike ಮಾಡಲಾಗಿದೆ. ಕೇವಲ 57 ಸಾವಿರ ಮಂದಿ ಇದನ್ನು Like ಮಾಡಿದ್ದು, 4 ಲಕ್ಷದ 15 ಸಾವಿರಕ್ಕೂ ಅಧಿಕ ಮಂದಿ Dislike ಮಾಡಿದ್ದಾರೆ. ಇಷ್ಟೇ ಅಲ್ಲದೇ ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್‌ಗಳ ಮೂಲಕ ಮನ್‌ ಕೀ ಬಾತ್‌ ಕಾರ್ಯಕ್ರಮ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೋದಿ ವಿಡಿಯೋಗೆ ಯಾಕಿಷ್ಟು Dislikes?

ವಿಡಿಯೋಗೆ ಬಂದ ಕಮೆಂಟ್‌ಗಳನ್ನು ನೋಡಿದರೆ ಮೋದಿ ಕೆಲ ವಿಚಾರಗಳನ್ನು ಈ ಕಾರ್ಯಕ್ರಮದಲ್ಲಿ ಪ್ರಸ್ತಾಪಿಸದಿರುವುದೇ ಪ್ರಮುಖ ಕಾರಣವೆಂಬುವುದು ಸ್ಪಷ್ಟವಾಗಿದೆ. ಕೆಲವರು ನೀಟ್ ಹಾಗೂ ಜೆಇಇ ಪರೀಕ್ಷೆ ಬಗ್ಗೆ ಮಾತನಾಡದೆ ಆಟಿಕೆಗಳ ಬಗ್ಗೆ ಮಾತನಾಡಿದ್ದೀರೆಂದು ಕಿಟಿ ಕಾರಿದರೆ, ಇನ್ನು ಕೆಲವರು ದಿನೇ ದಿನೇ ಹೆಚ್ಚುತ್ತಿರುವ ನಿರುದ್ಯೋಗ ಸಮಸ್ಯೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನಿರುದ್ಯೋಗ ದೇಶದಲ್ಲಿರುವ ಬಹುದೊಡ್ಡ ಸಮಸ್ಯೆ ಆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇನ್ನು ಪ್ರಧಾನ ಮಂತ್ರಿ ಮೋದಿ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಲೋಕಲ್‌ ಆಟಿಕೆಗಳ ನಿರ್ಮಾಣಕ್ಕೆ ಕರೆ ನೀಡಿದ್ದರು. ಇದಾದ ಬಳಿಕ ಮೋದಿ ಆಟಿಕೆಗಳ ಬಗ್ಗೆ ಪ್ರಸ್ತಾಪಿಸಿ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ ಎಂದು ಟ್ವಿಟರ್‌ನಲ್ಲೂ #Mann_Ki_Nahi_Student_Ki_Baat ಹ್ಯಾಷ್ ಟ್ಯಾಗ್ ಮೂಲಕ ಅಭಿಯಾನ ಆರಂಭವಾಗಿತ್ತು.

ಕಳೆದ ಮನ್‌ ಕೀ ಬಾತ್‌ನಲ್ಲಿ ಪ್ರಧಾನಿ ಮೋದಿ ಹೇಳಿದ್ದೇನು?

"

 

click me!