ಪ್ರಧಾನಿ ಮೋದಿಗಾಗಿ ರಾಂಪಾಲ್ ಕಶ್ಯಪ್ ಶಪಥ ಮಾಡಿದ್ದರು. ಇದರಂತೆ ಕಳೆದ 14 ವರ್ಷದಿಂದ ಚಪ್ಪಲಿ ಧರಿಸದೆ ಬರಿಗಾಲಲ್ಲೇ ಓಡಾಡುತ್ತಿದ್ದ ಕಶ್ಯಪ್ ಭೇಟಿಯಾದ ಮೋದಿ ಹೊಸ ಶೂ ಕೊಡಿಸಿದ್ದಾರೆ. ಈ ಮೂಲಕ ಕಶ್ಯಪ್ ಶಪಥ ಅಂತ್ಯಗೊಳಿಸಿದ್ದಾರೆ. ಪ್ರಧಾನಿಯೊಬ್ಬರು ಸಾಮಾನ್ಯ ವ್ಯಕ್ತಿಗೆ ಶೂ ಕೊಟ್ಟ ವಿಡಿಯೋ ಭಾರಿ ವೈರಲ್ ಆಗುತ್ತಿದೆ.
ಹರ್ಯಾಣ(ಏ.14) ನರೇಂದ್ರ ಮೋದಿ ಪ್ರಧಾನಿಯಾಗಲು ಬಿಜೆಪಿ ಕಾರ್ಯಕರ್ತರು ಹಗಳಿರುಳು ಶ್ರಮಿಸಿದ್ದಾರೆ. ಇದರ ಜೊತೆಗೆ ಮೋದಿ ಅಭಿಮಾನಿಗಳೂ ದುಡಿದಿದ್ದಾರೆ. ಇದರ ನಡುವೆ ಹಲವರು ಮೋದಿಗಾಗಿ ಹಲವು ಶಪಥ, ವೃತ ಕೈಗೊಂಡಿದ್ದಾರೆ. ಹಲವು ದೇವಸ್ಥಾನ ಸಂದರ್ಶಿಸಿದ್ದಾರೆ, ಪೂಜೆ, ಚಂಡಿಕಾಯಾಗ ನಡೆಸಿದ್ದಾರೆ. ಈ ಪೈಕಿ ಮೋದಿ ಅಭಿಮಾನಿ ರಾಂಪಾಲ್ ಕಶ್ಯಪ್. ಮೋದಿಗಾಗಿ ಶಪಥ ಮಾಡಿದ್ದ ರಾಂಪಾಲ್ ಕಶ್ಯಪ್ ಚಪ್ಪಲಿ ಧರಿಸದೆ ಬರಿಗಾಲಲ್ಲೇ ಓಡಾಡುತ್ತಿದ್ದರು. ಕಳೆದ 14 ವರ್ಷಗಳಿಂದ ಕಶ್ಯಪ್ ಇದೇ ಪಾಲಿಸಿಕೊಂಡು ಬಂದಿದ್ದಾರೆ. ಇದೀಗ ಪ್ರಧಾನಿ ಮೋದಿ ರಾಂಪಾಲ್ ಕಶ್ಯಪ್ ಭೇಟಿಯಾಗಿದ್ದಾರೆ. ಈ ವೇಳೆ ಮೋದಿ ಹೊಸ ಶೂ ಕೊಡಿಸಿ ಧರಿಸುವಂತೆ ಸೂಚಿಸಿದ್ದಾರೆ. ಮೋದಿ ಕೈಯಾರೆ ಕೊಟ್ಟ ಶೂ ಧರಿಸಿದ ರಾಂಪಾಲ್ ಶಪಥ ಅಂತ್ಯಗೊಳಿಸಿದ್ದಾರೆ.
14 ವರ್ಷಗಳ ಶಪಥ
14 ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗಬೇಕು ಎಂದು ರಾಂಪಾಲ್ ಕಶ್ಯಪ್ ಅತೀ ದೊಡ್ಡ ಶಪಥ ಮಾಡಿದ್ದರು. ಕಾಲಿಗೆ ಚಪ್ಪಲಿ ಧರಿಸದೆ ಬರಿಗಾಲಲ್ಲಿ ಓಡಾಡುವುದಾಗಿ ಶಪಥ ಮಾಡಿದ್ದರು. ಮೋದಿ ಮೂರನೇ ಬಾರಿಗೆ ಪ್ರಧಾನಿಯಾದರೂ ರಾಂಪಾಲ್ ಕಶ್ಯಪ್ ಶಪಥ ಹಾಗೇ ಮುಂದುವರಿಸಿದ್ದರು. ಮೋದಿ ಪ್ರಧಾನಿಯಾಗಿ ಮತ್ತಷ್ಟು ಕಾಲ ಆಡಳಿತ ನಡೆಸಬೇಕು, ಅಭಿವೃದ್ಧಿ ಮಾಡಬೇಕು ಅನ್ನೋದು ರಾಂಪಲ್ ಮನದಾಸೆಯಾಗಿದೆ. ಹೀಗಾಗಿ ಬರಿಗಾಲಲ್ಲೇ ಓಡಾಡುತ್ತಿದ್ದ ರಾಂಪಾಲ್‌ನನ್ನು ಇಂದು ಮೋದಿ ಭೇಟಿಯಾಗಿದ್ದಾರೆ.
ಮೋದಿ-ಅಮಿತ್ ಶಾ ದೋಸ್ತಿ ರಹಸ್ಯ, ದಶಕ ಕಳೆದರೂ ಸ್ನೇಹ ಗಟ್ಟಿಯಾಗಿರೋದು ಹೇಗೆ ?
ರಾಂಪಾಲ್ ಕಶ್ಯಪ್ ನೋಡಿದ ಕೂಡಲೇ ಪ್ರಧಾನಿ ಮೋದಿ ಕೇಳಿದ ಮೊದಲ ಪ್ರಶ್ನೆ, ಯಾಕೇ ರೀತಿ ಮಾಡಿದ್ದೀರಿ, ನಿಮಗೆ ನೀವು ಯಾಕೆ ಈ ರೀತಿ ಕಷ್ಟ ಕೊಡುತ್ತೀರಿ ಎಂದು ಮೋದಿ ಕೇಳಿದ್ದಾರೆ. ಒಂದು ಕ್ಷಣ ಏನು ಉತ್ತರಿಸಬೇಕು ಅನ್ನೋದೇ ತಿಳಿಯದ ರಾಂಪಾಲ್ ಕಶ್ಯಪ್, ನೀವು ಪ್ರಧಾನಿಯಾಗಬೇಕು, ಅಧಿಕಾರ ನಡೆಸಬೇಕು ಅನ್ನೋ ಹಂಬಲದಲ್ಲಿ ಈ ಶಪಥ ಮಾಡಿದ್ದೇನೆ. ನೀವು ಪ್ರಧಾನಿಗಿರಬೇಕು ಎಂದು ರಾಂಪಾಲ್ ಕಶ್ಯಪ್ ಉತ್ತರಿಸಿದ್ದಾರೆ.
ಹರ್ಯಾಣ: 14 ವರ್ಷಗಳ ಹಿಂದೆ ಮೋದಿ ಪ್ರಧಾನಿಯಾಗುವವರೆಗೂ ಪಾದರಕ್ಷೆಗಳನ್ನು ಧರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೈತಾಲ್‌ನ ರಾಂಪಾಲ್ ಕಶ್ಯಪ್ ಭೇಟಿಯಾದ ಮೋದಿ pic.twitter.com/bMEwDyBYiH
— Asianet Suvarna News (@AsianetNewsSN)
ಮೋದಿ ಕೈಯಾರೆ ಕೊಟ್ಟ ಶೂ ಧರಿಸಿ ಶಪಥ ಅಂತ್ಯ
ರಾಂಪಾಲ್ ಕಶ್ಯಪ್ ಕೈಕುಲುಕಿ ಸ್ವಾಗತಿಸಿದ ಮೋದಿ, ಬಳಿಕ ಸೋಫಾದಲ್ಲಿ ಕುಳಿತುಕೊಳ್ಳಳು ಸೂಚಿಸಿದ್ದಾರೆ. ಇದೇ ವೇಳೆ ನೀವು ಇಷ್ಟು ದಿನ ಶಪಥ ಮಾಡಿ ಬರಿಗಾಲಲ್ಲೇ ಓಡಾಡಿದ್ದೀರಿ. ಇಂದು ನಾವು ನಿಮ್ಮ ಶಪಥ ಅಂತ್ಯಗೊಳಿಸುತ್ತಿದ್ದೇವೆ ಎಂದು ಹೇಳಿದ ಮೋದಿ, ಹೊಸ ಶೂ ಕೊಟ್ಟಿದ್ದಾರೆ. ರಾಂಪಲ್ ಕಶ್ಯಪ್ ಕಾಲ ಬಳಿ ಶೂ ಇಟ್ಟು ಧರಿಸುವಂತೆ ಸೂಚಿಸಿದ್ದಾರೆ. ಪ್ರಧಾನಿಯೊಬ್ಬರು ತನ್ನ ಕಾಲ ಬಳಿ ಶೂ ಇಟ್ಟು ಧರಿಸುವಂತೆ ಸೂಚಿಸಿದ ಸಂತಸದಲ್ಲಿ ರಾಂಪಾಲ್ ಕಶ್ಯಪ್, ತಮ್ಮ ಶಪಥ ಅಂತ್ಯಗೊಳಿಸಿದ್ದಾರೆ. ಪ್ರಧಾನಿ ಮೋದಿ ನೀಡಿದ ಶೂ ಧರಿಸಿದ್ದಾರೆ.
ಇನ್ನೆಂದು ಈ ರೀತಿ ಶಪಥ ಮಾಡಬೇಡಿ
ಶಪಥ ಅಂತ್ಯಗೊಳಿಸಿದ ರಾಂಪಾಲ್ ಕಶ್ಯಪ್ ಜೊತೆ ಮೋದಿ ಕೆಲ ಹೊತ್ತು ಮಾತನಾಡಿದ್ದಾರೆ. ಮುಂದೆ ಈ ರೀತಿ ಯಾವುದೇ ಶಪಥ ಮಾಡದಂತೆ ಮನವಿ ಮಾಡಿದ್ದಾರೆ. ಇಷ್ಟೇ ಅಲ್ಲ ಶಪಥ ನೀವು ಕೆಲಸದ ಮೂಲಕ ಮಾಡಬೇಕು. ಅಭಿವೃದ್ಧಿಗಾಗಿ, ನಿಮ್ಮ ಶ್ರೇಯೋಭಿವೃದ್ದಿಗಾಗಿ, ಪ್ರಗತಿಗಾಗಿ ಮಾಡಬೇಕು. ಈ ರೀತಿಯ ಕಠಿಣ ಶಪಥಗಳಿಂದ ದೇಹವನ್ನುದಂಡಿಸಬಾರದು ಎಂದು ಮೋದಿ ಮನವಿ ಮಾಡಿದ್ದಾರೆ. ಮೋದಿ ಮುಂದೆ ಮತ್ತೆ ಈ ರೀತಿ ಶಪಥ ಮಾಡುವುದಿಲ್ಲ ಎಂದು ರಾಂಪಾಲ್ ಕಶ್ಯಪ್ ಮಾತುಕೊಟ್ಟಿದ್ದಾರೆ.
ಪ್ರಧಾನಿ ಮೋದಿಯ ಸಹಾಯ ಮರೆಯಲಾರೆ: ಭಾವುಕರಾದ ಪವನ್ ಕಲ್ಯಾಣ್!