
ನವದೆಹಲಿ(ಜು.30): ಭಾರತ ಈ ಬಾರಿ ತನ್ನ 75 ನೇ ಸ್ವಾತಂತ್ರ್ಯೋವವನ್ನು ಆಚರಿಸುತ್ತಿದೆ. ಈ ಬಾರಿ ಪ್ರಧಾನಿ ಮೋದಿ ಕೆಂಪು ಕೋಟೆಯಿಂದ ದೇಶವನ್ನುದ್ದೆಶಿಸಿ ಮಾಡಲಿರುವ ಭಾಷಣ ಹೊಸದೊಂದು ವಿಚಾರಕ್ಕೆ ಸಾಕ್ಷಿಯಾಗಲಿದೆ.
ಹೌದು ಈ ಬಾರಿ ದೇಶದ ಜನರ ಸಲಹೆ ಹಾಗೂ ಆಲೋಚನೆಗಳನ್ನು ಪ್ರಧಾನಿಯವರ ಭಾಷಣದಲ್ಲಿ ಸೇರಿಸಲು ಯೋಚಿಸಲಾಗಿದ್ದು, ಜನಸಾಮಾನ್ಯರಿಗೆ ಸಲಹೆ ನೀಡುವಂತೆ ಕರೆ ಕೊಡಲಾಗಿದೆ. ಈ ನಿಟ್ಟಿನಲ್ಲಿ PMO ಜನರಿಂದ ಆಗಸ್ಟ್ 14, ರಾತ್ರಿ 11.45 ರವರೆಗೆ ಸಲಹೆ, ಯೋಚನೆಗಳನ್ನು ಸಂಗ್ರಹಿಸಲಿದೆ.
ನಿಮ್ಮ ಸಲಹೆ, ಯೋಚನೆಗಳನ್ನು ಹೀಗೆ ತಿಳಿಸಿ
ಇದಕ್ಕಾಗಿ ನೀವು www.mygov.in ವೆಬ್‌ಸೈಟ್‌ಗೆ ಭೇಟಿ ನೀಡಿ, ಇಲ್ಲಿ Login to Participate ಮೇಲೆ ಕ್ಲಿಕ್ ಮಾಡಿ. ಬಳಿಕ ನೀವು ನಿಮ್ಮ ಸಲಹೆ ಹಾಗೂ ಯೋಚನೆಗಳನ್ನು ತಿಳಿಸಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ