ರಾಜಧಾನಿಗೂ ‘ನಮೋ ಭಾರತ್‌’ ರೈಲು ಪ್ರವೇಶ: ಪ್ರಧಾನಿ ಮೋದಿ ಚಾಲನೆ

By Kannadaprabha News  |  First Published Jan 6, 2025, 5:37 AM IST

ಈ ಮುಂಚೆ ಉತ್ತರ ಪ್ರದೇಶದಲ್ಲಿ ಉದ್ಘಾಟನೆ ಆಗಿದ್ದ ನಮೋ ಭಾರತ್‌ ರೈಲು ಈಗ ದಿಲ್ಲಿಗೂ ಪ್ರವೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ- ಮೇರಠ್‌ ಮಾರ್ಗದ ಆರ್‌ಆರ್‌ಟಿಎಸ್‌ ಕಾರಿಡಾರ್‌ನಲ್ಲಿ ನಮೋ ಭಾರತ್‌ ರೈಲಿಗೆ ಭಾನುವಾರ ಚಾಲನೆ ನೀಡಿದ್ದಾರೆ. 


ನವದೆಹಲಿ (ಜ.06): ಈ ಮುಂಚೆ ಉತ್ತರ ಪ್ರದೇಶದಲ್ಲಿ ಉದ್ಘಾಟನೆ ಆಗಿದ್ದ ನಮೋ ಭಾರತ್‌ ರೈಲು ಈಗ ದಿಲ್ಲಿಗೂ ಪ್ರವೇಶಿಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿ- ಮೇರಠ್‌ ಮಾರ್ಗದ ಆರ್‌ಆರ್‌ಟಿಎಸ್‌ ಕಾರಿಡಾರ್‌ನಲ್ಲಿ ನಮೋ ಭಾರತ್‌ ರೈಲಿಗೆ ಭಾನುವಾರ ಚಾಲನೆ ನೀಡಿದ್ದಾರೆ. ಕಳೆದ ವರ್ಷ ದುಹಾಯಿಯಿಂದ ಸಾಹಿಬಾಬಾದ್‌ಗೆ ಕಳೆದ ವರ್ಷ ನಮೋ ಭಾರತ್‌ ರೈಲಿಗೆ ಮೋದಿ ಚಾಲನೆ ನೀಡಿದ್ದರು. ಈಗ ಸಾಹಿಬಾಬಾದ್‌ನಿಂದ ದಿಲ್ಲಿಯ ನ್ಯೂ ಅಶೋಕನಗರಕ್ಕೆ ಸಂಪರ್ಕ ಕಲ್ಪಿಸುವ 13 ಕಿ.ಮೀ. ಆರ್‌ಆರ್‌ಟಿಎಸ್‌ ಮಾರ್ಗದಲ್ಲಿ ಈ ರೈಲು ವಿಸ್ತರಣೆ ಆಗಿದ್ದು, ಇದಕ್ಕೆ ಮೋದಿ ಹಸಿರು ನಿಶಾನೆ ತೋರಿಸಿದರು.

40 ನಿಮಿಷದಲ್ಲಿ ದಿಲ್ಲಿ-ಮೇರಠ್‌ ಸಂಚಾರ: ಸಾಮಾನ್ಯ ರೈಲುಗಳು ದಿಲ್ಲಿಯಿಂದ ಮೇರಠ್‌ ತಲುಪಲು 2 ತಾಸು ತೆಗೆದುಕೊಳ್ಳುತ್ತವೆ. ಆದರೆ ಪ್ರಾದೇಶಿಕ ರ್‍ಯಾಪಿಡ್‌ ಟ್ರಾನ್ಸಿಟ್ ಸಿಸ್ಟಮ್ (ಆರ್‌ಆರ್‌ಟಿಎಸ್‌) ದೆಹಲಿ ವಿಭಾಗದ ಉದ್ಘಾಟನೆಯಿಂದಾಗಿ ಪ್ರಯಾಣಿಕರು ನೇರವಾಗಿ ದೆಹಲಿಯಿಂದ ಕೇವಲ 40 ನಿಮಿಷದಲ್ಲಿ ಮೇರಠ್‌ ದಕ್ಷಿಣ ತಲುಪಬಹುದು. ನ್ಯೂ ಅಶೋಕ್ ನಗರ ಮತ್ತು ದಕ್ಷಿಣ ಮೇರಠ್‌ ನಡುವಿನ 55 ಕಿ.ಮೀ ಉದ್ದದ ಈ ಆರ್‌ಆರ್‌ಟಿಎಸ್‌ ಕಾರಿಡಾರ್‌ 11 ವಿಭಾಗಗಳು ಕಾರ್ಯ ನಿರ್ವಹಿಸಲಿದ್ದು, 15 ನಿಮಿಷಗಳಿಗೊಮ್ಮೆ ರೈಲುಗಳು ಓಡಾಟ ನಡೆಸಲಿವೆ.

Tap to resize

Latest Videos

13 ಕಿ.ಮೀ ಮಾರ್ಗದಲ್ಲಿ ಆನಂದ್‌ ವಿಹಾರ ಸೇರಿದಂತೆ 6 ಕಿಮೀ ಮಾರ್ಗ ಅಂಡರ್‌ಗ್ರೌಂಡ್‌ ಆಗಿದೆ. ನಮೋ ಭಾರತ್‌ ರೈಲು ಅಂಡರ್‌ಗ್ರೌಂಡ್‌ನಲ್ಲಿ ಸಂಚರಿಸುತ್ತಿರುವುದು ಇದೇ ಮೊದಲು. ಸ್ಟ್ಯಾಂಡರ್ಡ್‌ ಕೋಚ್‌ಗಳಲ್ಲಿ 150 ರು. ದರ ನಿಗದಿಯಾಗಿದ್ದು, ಪ್ರೀಮಿಯಂ ಕೋಚ್‌ಗಳಿಗೆ 225ರು. ಇರಲಿದೆ. ಇದುವರೆಗೆ ನಮೋ ಭಾರತ್‌ ರೈಲು 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ. ನಮೋ ಭಾರತ್‌ ರೈಲು ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿಯವರು ರೈಲಿನಲ್ಲಿ ಸಂಚಾರ ನಡೆಸಿದರು. ಸಾಹಿಬಾಬಾದ್‌ನಿಂದ ನ್ಯೂ ಅಶೋಕ್ ನಗರದ ತನಕ ಪ್ರಯಾಣಿಸಿದರು. ಈ ಸಂದರ್ಭದಲ್ಲಿ ಮಕ್ಕಳು, ಸಾರ್ವಜನಿಕರ ಜೊತೆಗೆ ಮಾತು ಸಂವಾದ ನಡೆಸಿದರು.

ಅಜ್ಮೇರ್‌ ದರ್ಗಾಗೆ ಪ್ರಧಾನಿ ಮೋದಿ, ಮಲ್ಲಿಕಾರ್ಜುನ ಖರ್ಗೆ ಚಾದರ ಅರ್ಪಣೆ

ಅನ್ನದಾತರಿಗೆ ಬಂಪರ್‌ ಕೊಡುಗೆ: 2025ರ ಹೊಸ ವರ್ಷದ ಮೊದಲ ದಿನವೇ ಕೇಂದ್ರ ಸರ್ಕಾರ ದೇಶದ ಕೋಟ್ಯಂತರ ರೈತಾಪಿ ಸಮುದಾಯಕ್ಕೆ ಮೂರು ಬಂಪರ್ ಕೊಡುಗೆ ಪ್ರಕಟಿಸಿದೆ. ಎರಡು ಕೃಷಿ ವಿಮಾ ಯೋಜನೆಗಳ ಅವಧಿಯನ್ನು ಮತ್ತೆ ಒಂದು ವಿಸ್ತರಣೆ ಮಾಡಿದ್ದರೆ, ಸಬ್ಸಿಡಿ ದರದಲ್ಲಿ ಡಿಎಪಿ ಗೊಬ್ಬರ ವಿತರಿಸುವ ಯೋಜನೆಯನ್ನು ಇನ್ನೂ ಒಂದು ವರ್ಷ  ವಿಸ್ತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.  ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ಇಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಕುರಿತಾದ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಸಂಪುಟ ಸಭೆಯ ಬೆನ್ನಲ್ಲೇ ಈ ಕುರಿತು ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ, 'ಸರ್ಕಾರದ ಹೊಸ ವರ್ಷದ ಮೊದಲ ನಿರ್ಣಯವು ದೇಶದ ಕೋಟಿ ಕೋಟಿ ರೈತ ಸಹೋದರ ಸಹೋದರಿಯರಿಗೆ ಸಮರ್ಪಣೆ' ಎಂದಿದ್ದಾರೆ.

click me!