ಕ್ರಿಪ್ಟೋಕರೆನ್ಸಿ ದುರ್ಬಳಕೆ ತಡೆಯಿರಿ : ಮೋದಿ ಕರೆ

Kannadaprabha News   | Asianet News
Published : Nov 19, 2021, 07:17 AM ISTUpdated : Nov 19, 2021, 07:28 AM IST
ಕ್ರಿಪ್ಟೋಕರೆನ್ಸಿ ದುರ್ಬಳಕೆ ತಡೆಯಿರಿ : ಮೋದಿ ಕರೆ

ಸಾರಾಂಶ

ದೇಶದಲ್ಲಿ ಬಿಟ್‌ಕಾಯಿನ್‌ನಂತಹ ಕ್ರಿಪ್ಟೋಕರೆನ್ಸಿಗಳ ಬಗ್ಗೆ ಭಾರಿ ಚರ್ಚೆ  ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿ ಈ ಡಿಜಿಟಲ್‌ ಕರೆನ್ಸಿಯ ಸುರಕ್ಷತೆಯ ಕುರಿತು ಮಾತು

 ನವದೆಹಲಿ (ನ.19):  ದೇಶದಲ್ಲಿ ಬಿಟ್‌ ಕಾಯಿನ್‌ನಂತಹ (Bit coin) ಕ್ರಿಪ್ಟೋ ಕರೆನ್ಸಿಗಳ (Cryptocurrency) ಬಗ್ಗೆ ಭಾರಿ ಚರ್ಚೆ ನಡೆಯುತ್ತಿರುವಾಗಲೇ ಪ್ರಧಾನಿ ನರೇಂದ್ರ ಮೋದಿ (Prime Narendra modi) ಇದೇ ಮೊದಲ ಬಾರಿ ಈ ಡಿಜಿಟಲ್‌ ಕರೆನ್ಸಿಯ (Digital Currency) ಸುರಕ್ಷತೆಯ ಕುರಿತು ಮಾತನಾಡಿದ್ದು, ಪ್ರಜಾಪ್ರಭುತ್ವ ರಾಷ್ಟ್ರಗಳೆಲ್ಲ ಸೇರಿ ಒಟ್ಟಾಗಿ ಕ್ರಿಪ್ಟೋ ಕರೆನ್ಸಿಗಳು ಕೆಟ್ಟಕೈಗಳಿಗೆ ಸಿಗದಂತೆ ನೋಡಿಕೊಳ್ಳಬೇಕು ಎಂದಿದ್ದಾರೆ.

ಇಂದು ತಂತ್ರಜ್ಞಾನ ಮತ್ತು ದತ್ತಾಂಶಗಳು ಹೊಸ ಅಸ್ತ್ರಗಳಾಗುತ್ತಿವೆ. ತಂತ್ರ ಜ್ಞಾನದಿಂದ ಲಭಿಸುವ ಶಕ್ತಿಯು ದೇಶ ದೇಶಗಳ ನಡುವೆ ಸಹಕಾರದ ಸಾಧನವಾಗುತ್ತದೆಯೋ ಅಥವಾ ಸಂಘರ್ಷದ ಸಾಧನ ವಾಗುತ್ತದೆಯೋ ಎಂಬುದು ನಾವು ಅದನ್ನು ಹೇಗೆ ಬಳಸಿ ಕೊಳ್ಳುತ್ತೇವೆ ಎಂಬುದರ ಮೇಲೆ ನಿಂತಿದೆ. ನಾವೆಲ್ಲ ಒಟ್ಟಾಗಿ ಭವಿಷ್ಯದ (Future) ತಂತ್ರಜ್ಞಾನದಲ್ಲಿ ಹೂಡಿಕೆ ಮಾಡಿ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಯತ್ನಿಸಬೇಕು. ಕ್ರಿಪ್ಟೋ ಕರೆನ್ಸಿ ಮುಂತಾದ ಹೊಸ ತಂತ್ರಜ್ಞಾನಗಳು ತಪ್ಪು ಕೈಗಳಿಗೆ ಸೇರದಂತೆ ವಿಶ್ವಾಸಾರ್ಹ ಉತ್ಪಾದನೆ ಮತ್ತು ಪೂರೈಕೆಯ ವ್ಯವಸ್ಥೆಯನ್ನು ಸೃಷ್ಟಿಸಿಕೊಳ್ಳಬೇಕು. ಏಕೆಂದರೆ ಇಂತಹ ತಂತ್ರಜ್ಞಾನಗಳು ನಮ್ಮ ಯುವಕರನ್ನು ಹಾಳು ಮಾಡಬಲ್ಲವು ಎಂದು ಹೇಳಿದ್ದಾರೆ.

‘ಸಿಡ್ನಿ ಡೈಲಾಗ್‌’ ಶೃಂಗದಲ್ಲಿ ಗುರುವಾರ ವರ್ಚುವಲ್‌ ಆಗಿ ಪಾಲ್ಗೊಂಡು ಮಾತನಾಡಿದ ಅವರು ದೇಶದಲ್ಲಿ ಇತ್ತೀಚೆಗೆ ಕ್ರಿಪ್ಟೋ ಕರೆನ್ಸಿಯ ಕುರಿತು ಯುವಜನರಲ್ಲಿ ಎದ್ದಿರುವ ಹೊಸ ಆಸಕ್ತಿಯನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭ ಬರುತ್ತದೆ ಎಂಬ ದಾರಿ ತಪ್ಪಿಸುವ ಪ್ರಚಾರ, ಕ್ರಿಪ್ಟೋ ಕರೆನ್ಸಿಯನ್ನು ಹವಾಲಾಕ್ಕೆ ಅಥವಾ ಭಯೋತ್ಪಾದನೆಗೆ ಬಳಸಿಕೊಳ್ಳುವುದು ಮುಂತಾದ ಆತಂಕಗಳ ಕುರಿತು ಕಳೆದ ವಾರವಷ್ಟೇ ಮೋದಿ (Modi) ಅವರು ಉನ್ನತ ಮಟ್ಟದ ಸಭೆ ನಡೆಸಿದ್ದರು. ಇದೀಗ ಮೊದಲ ಬಾರಿ ಪ್ರಜಾಪ್ರಭುತ್ವ ರಾಷ್ಟ್ರಗಳು ಒಟ್ಟಾಗಿ ಈ ದಿಸೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿರುವುದು ಮಹತ್ವ ಪಡೆದಿದೆ.

ತಂತ್ರಜ್ಞಾನದಲ್ಲಿ ಭಾರತದ ಹೂಡಿಕೆ:  ಭಾರತವು (India) ಸ್ವದೇಶಿ 5ಜಿ ಮ್ತು 6ಜಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲು ಭಾರಿ ಹೂಡಿಕೆ ಮಾಡುತ್ತಿದೆ. ಕೃತಕ ಬುದ್ಧಿಮತ್ತೆ ಕುರಿತ ಸಂಶೋಧನೆ, ಮಷಿನ್‌ ಲರ್ನಿಂಗ್‌, ಮಾನವ ಕೇಂದ್ರಿತ ಯಾಂತ್ರಿಕ ಕಲಿಕೆ ಹಾಗೂ ಕೃತಕ ಬುದ್ಧಿಮತ್ತೆಯ ನೈತಿಕ ಬಳಕೆಯ ವಿಷಯದಲ್ಲಿ ಭಾರತವು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ದೇಶ ದೇಶಗಳ ನಡುವಿನ ಸ್ಪರ್ಧೆಯಲ್ಲಿ ತಂತ್ರಜ್ಞಾನವು ಈಗಾಗಲೇ ಪ್ರಮುಖ ಸಾಧನವಾಗಿದೆ. ಭವಿಷ್ಯದ ಜಗತ್ತನ್ನು ರೂಪಿಸುವಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸಲಿದೆ ಎಂದು ಮೋದಿ ಹೇಳಿದರು.

ಮೋದಿ ಜೊತೆ ನೀರವ್ ಮೋದಿ ಫೊಟೊ : 

ಬಿಟ್ ಕಾಯಿನ್ ಹಗರಣ (Bitcoin Scam) ರಾಜ್ಯದಲ್ಲಿ ಅನೇಕ ಗೊಂದಲ, ತಿರುವುಗಳನ್ನು ನೀಡುತ್ತಿದೆ. ದಿನದಿಂದ ದಿನಕ್ಕೆ ಈ ಪ್ರಕರಣದಲ್ಲಿ ರಾಜಕಾರಣಿಗಳು ಆರೋಪಗಳನ್ನು ಮಾಡುತ್ತಲೇ ಬಂದಿದ್ದಾರೆ. ಸದ್ಯ ಬಿಟ್ ಕಾಯಿನ್ ವಿಷಯದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು (Siddaramaiah) ಬಿಜೆಪಿ (BJP) ಟಾರ್ಗೆಟ್ ಮಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್(Tweet) ಮಾಡಿದೆ. 

ಒಂದಷ್ಟು ಚಿತ್ರಗಳಿವೆ, ಅದನ್ನು ಹಂತ ಹಂತವಾಗಿ ಬಿಡುಗಡೆ ಮಾಡುತ್ತೇವೆ' ಎಂದಿರುವ ಬಿಜೆಪಿ ಸಿದ್ದರಾಮಯ್ಯ ಪುತ್ರ ದಿವಂಗತ ರಾಕೇಶ್ ಸಿದ್ದರಾಮಯ್ಯ (Rakesh Siddaramaiah) ಅವರು ಕೆಲವರ ಜೊತೆಗೆ ಇದ್ದ ಫೋಟೋಗಳನ್ನು ಬಿಡುಗಡೆ ಮಾಡಿದೆ. ಇದಕ್ಕೆ ಇದೀಗ ಸಿದ್ದರಾಮಯ್ಯ ಸಹ ಪ್ರತಿಕ್ರಿಯಿಸಿದ್ದು, ಅವರು ಸಹ ಒಂದು ಫೋಟೋ ಬಿಟ್ಟು ತಿರುಗೇಟು ಕೊಟ್ಟಿದ್ದಾರೆ. 

ಬಿಟ್‌ ಕಾಯಿನ್ ಹಗರಣ ಆರೋಪಿ ಜತೆ ರಾಕೇಶ್ ಸಿದ್ದರಾಮಯ್ಯ: ಫೋಟೋ ಬಿಡುಗಡೆ ಮಾಡಿದ ಬಿಜೆಪಿ

ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ (facebook) ನರೇಂದ್ರ ಮೋದಿ (Narendra Modi) ಜತೆಗಿರೋ ಒಬ್ಬ ವ್ಯಕ್ತಿಯ ಫೋಟೋವನ್ನು ಮಾರ್ಕ್‌ ಮಾಡಿ ಹಂಚಿಕೊಂಡು, ಕೆಲ ಅಂಶಗಳನ್ನ ಹಂಚಿಕೊಂಡಿದ್ದಾರೆ. ಅದು ಈ ಕೆಳಗಿನಂತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ