ನಿಧನರಾಗಿರುವ ನನ್ನ ತಾಯಿಯನ್ನು ಇವರು ಬಿಡುತ್ತಿಲ್ಲ, ಭಾವುಕರಾದ ಪ್ರಧಾನಿ ಮೋದಿ

Published : Sep 02, 2025, 05:33 PM IST
Narendra Modi Mother Heeraben

ಸಾರಾಂಶ

ನಿಧನರಾಗಿರುವ ತಾಯಿ ಹೀರಾಬೆನ್ ಮೋದಿಯನ್ನು ಇವರು ಬಿಡುತ್ತಿಲ್ಲ ಎಂದು ಪ್ರಧಾನಿ ಮೋದಿ ಭಾವುಕರಾಗಿದ್ದಾರೆ. ಕಾಂಗ್ರೆಸ್ ವೋಟರ್ ಅಧಿಕಾರ್ ಯಾತ್ರೆ ಪ್ರತಿಭಟನೆಯಲ್ಲಿ ಮೋದಿ ತಾಯಿ ವಿರುದ್ದ ಬಳಸಿದ ಕೀಳು ಪದಗಳಿಂದ ಮೋದಿ ಭಾವುಕರಾಗಿ ಉತ್ತರಿಸಿದ್ದಾರೆ.

ನವದೆಹಲಿ (ಸೆ.02) ನಿಧನರಾಗಿರುವ ನನ್ನ ತಾಯಿ ಹೀರಾಬೆನ್ ಮೋದಿಗೆ ಕಾಂಗ್ರೆಸ್ ಆರ್‌ಜೆಡಿ ಪ್ರತಿಭಟನಾ ವೇದಿಕೆಯಲ್ಲಿ ಅವಮಾನ ಮಾಡಿದ್ದಾರೆ. ನನ್ನ ತಾಯಿ ರಾಜಕೀಯದಲ್ಲಿ ಇದ್ದವರಲ್ಲ, ಆದರೂ ಅವರ ವಿರುದ್ಧ ಅತ್ಯಂತ ಕೀಳು ಭಾಷೆಯನ್ನು ಬಳಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ. ತಾಯಿ ಹೀರಾಬೆನ್ ಮೋದಿ ಕುರಿತು ಕಾಂಗ್ರೆಸ್ ಪ್ರತಿಭಟನೆಯಲ್ಲಿ ಆಡಿದ ಮಾತುಗಳು ಮೋದಿಗೆ ತೀವ್ರ ನೋವುಂಟು ಮಾಡಿದೆ. ಈ ಕುರಿತು ಮೋದಿ ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ.

ಕಾಂಗ್ರೆಸ್-ಆರ್‌ಜೆಡಿ ವೇದಿಕೆಯಲ್ಲಿ ಮೋದಿ ತಾಯಿಗೆ ಅವಮಾನ

ಬಿಹಾರದ ದರ್ಬಾಂಗ್‌ನಲ್ಲಿ ಕಾಂಗ್ರೆಸ್ ಹಾಗೂ ಆರ್‌ಜೆಡಿ ವೋಟ್ ಅದಿಕಾರ್ ಯಾತ್ರೆ ಆಯೋಜಿಸಿತ್ತು. ಪ್ರಧಾನಿ ಮೋದಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಮತಗಳ್ಳತನ ಆರೋಪ ಮಾಡಿರುವ ರಾಹುಲ್ ಗಾಂಧಿ ಆಯೋಜಿಸಿದ ಪ್ರಮುಖ ಯಾತ್ರೆ ಇದು. ಈ ಯಾತ್ರೆಯ ವೇದಿಕೆಯಲ್ಲಿ ಪ್ರಧಾನಿ ಮೋದಿ ತಾಯಿ ವಿರುದ್ದ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಲಾಗಿದೆ. ದರ್ಬಾಂಗ್‌ನಲ್ಲಿನ ಬೃಹತ್ ಸಮಾವೇಷದಲ್ಲಿ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಪಾಲ್ಗೊಂಡಿದ್ದರು. ಇವರು ಮೋಟಾರ್‌ಸೈಕಲ್ ಯಾತ್ರೆ ಆರಂಭಿಸಿದ ಬೆನ್ನಲ್ಲೇ ವೇದಿಕೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಮೋದಿ ತಾಯಿ ವಿರುದ್ದ ಕೀಳು ಪದಗಳನ್ನು ಬಳಕೆ ಮಾಡಿದ್ದ. ಈ ಕಾರ್ಯಕರ್ತನನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.

SCO ಶೃಂಗಸಭೆಯಲ್ಲಿ 3 ರಾಷ್ಟ್ರಕ್ಕೆ ಮೋದಿ 3 ಸಿಗ್ನಲ್:ಟ್ರಂಪ್‌ಗೆ ಸಂದೇಶ, ಚೀನಾ ನೆನಪಿಸಿ ಪಾಕ್‌ಗೆ ಎಚ್ಚರಿಕೆ

ಭಾವುಕರಾಗಿ ಮಾತನಾಡಿದ ಮೋದಿ

ಈ ರೀತಿ ಪದ ಬಳಕೆ, ಈ ಮಾತುಗಳು ತೀವ್ರ ನೋವು ತರಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ನನ್ನ ತಾಯಿ ಹೀರಾಬೆನ್ ಮೋದಿ ನಿಧನರಾಗಿದ್ದಾರೆ. ಅವರು ಯಾವುದೇ ರಾಜಕೀಯಕ್ಕೆ ಬಂದವರಲ್ಲ. ರಾಜಕೀಯಕ್ಕೂ ಅವರಿಗೂ ಯಾವುದೇ ಸಂಬಂಧವೂ ಇಲ್ಲ. ಆದರೆ ಅವರ ವಿರುದ್ಧ ಈ ರೀತಿ ಪದ ಬಳಕೆ ಮಾಡುತ್ತಿದ್ದಾರೆ. ಅವರೇನು ಮಾಡಿದರು ಎಂದು ಬಿಹಾರದ ಅಭಿವೃದ್ಧಿ ಕಾರ್ಯಕ್ರಮಗಳ ವಿಡಿಯೋ ಕಾನ್ಫರೆನ್ಸ್ ಮೂಲಕ ಮೋದಿ ಭಾವುಕರಾಗಿ ಪ್ರಶ್ನಿಸಿದ್ದಾರೆ.

 

 

ದೇಶಕ್ಕೆ ಮಾಡಿದ ಅಪಮಾನ ಇದು

ನಮಗೆ ತಾಯಿಯೇ ಜಗತ್ತು. ತಾಯಿ ಎಂದರೆ ನಮಗೆ ಆತ್ಮಗೌರವ. ಆದರೆ ಬಿಹಾರದ ಕಾಂಗ್ರೆಸ್ ಆರ್‌ಜೆಡಿ ವೇದಿಕೆಯಲ್ಲಿ ನನ್ನ ತಾಯಿ ವಿರುದ್ಧ ಬಳಕೆ ಮಾಡಿರುವ ಪದಗಳು ಊಹಿಸಲೂ ಸಾಧ್ಯವಿಲ್ಲ. ಇದು ಕೇವಲ ನನ್ನ ತಾಯಿಗೆ ಮಾಡಿದ ಅಪಮಾನವಲ್ಲ, ಇದು ದೇಶದ ಹಾಗೂ ಬಿಹಾರದ ತಾಯಿ, ಸಹೋದರಿ, ಮಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಮೋದಿ ಹೇಳಿದ್ದಾರೆ. ಈ ಮಾತುಗಳನ್ನು ಕೇಳಿಸಿಕೊಂಡ ತಾಯಂದರಿಗೆ ಎಷ್ಟು ನೋವಾಗುತ್ತದೆ? ಈ ನೋವು ನನ್ನ ಮನಸ್ಸು ಹೃದಯದಲ್ಲಿದೆ. ಈ ನೋವು ಬಿಹಾರದ ಜನತೆಯಲ್ಲೂ ಇದೆ ಎಂದು ಮೋದಿ ಹೇಳಿದ್ದಾರೆ.

ಪುಟಿನ್ ಜೊತೆಗೆ ಲಿಮೋಸಿನ್ ಕಾರಿನಲ್ಲಿ ಮೋದಿ ಪಯಣ, 6200 ಕೆಜಿ ತೂಕದ ಈ ವಾಹನದಲ್ಲಿದೆ ಗರಿಷ್ಠ ಭದ್ರತೆ

ತಾಯಿ ಬಗ್ಗೆ ಈ ರೀತಿ ಪದ ಬಳಕೆ, ಕೀಳು ಮಟ್ಟದ ಭಾಷೆ ಬಳಕೆ ಮಾಡುವ ಕಾಂಗ್ರೆಸ್ ಹಾಗೂ ಆರ್‌ಜೆಡಿಯಿಂದ ಮಹಿಳೆಯರಿಗೆ ಸುರಕ್ಷತೆಗೆ ಸಿಗಲು ಸಾಧ್ಯವೇ? ಇವರ ಸರ್ಕಾರ ಮಹಿಳೆಯರಿಗೆ ನೀಡಿದ ಗೌರವ ಇದು ಎಂದು ಮೋದಿ ಹೇಳಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು