ಕೊರೋನಾ ಸಭೆ ಬಳಿಕ ಮಹತ್ವದ ಸೂಚನೆ ನೀಡಿದ ಪ್ರಧಾನಿ ಮೋದಿ!

By Suvarna News  |  First Published Apr 17, 2021, 10:14 PM IST

ಕೊರೋನಾ ವೈರಸ್ ರಣಕೇಕೆ ಮುಂದುವರಿದಿರುವ ಕಾರಣ ಪ್ರಧಾನಿ ನರೇಂದ್ರ ಮಹತ್ವದ ಸಭೆ ನಡೆಸಿದ್ದಾರೆ. ಅಧಿಕಾರಿಗಳು, ತಜ್ಞರು ಹಾಗೂ ಪ್ರಮುಖ ಸಚಿವರ ಜೊತೆ ಸಭೆ ನಡೆಸಿದ ಮೋದಿ, ಮಹತ್ವದ ಸೂಚನೆ ನೀಡಿದ್ದಾರೆ.


ನವದೆಹಲಿ(ಏ.17): ದೇಶದಲ್ಲಿ ಅತೀಯಾಗುತ್ತಿರುವ ಕೊರೋನಾ ವೈರಸ್ ಪ್ರಕರಣ, ಕೋವಿಡ್ ನಿಯಂತ್ರಣ ಹಾಗೂ ಲಸಿಕೆ ವಿತರಣೆ ಕುರಿತ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ತ್ರಿಬಲ್ ಟಿ ಸೂತ್ರವನ್ನು ಮೋದಿ ಪುನರುಚ್ಚಿಸಿದ್ದಾರೆ. ತ್ರಿಟಿ ಸೂತ್ರ ಪಾಲಿಸಿದರೆ ಮಾತ್ರ ವೇಗವಾಗಿ ಕೊರೋನಾ ನಿಯಂತ್ರಣ ಸಾಧ್ಯ ಎಂದಿದ್ದಾರೆ.

ಆತಂಕ ಬೇಡ, ಟೆಸ್ಟ್, ಟ್ರಾಕ್, ಟ್ರೀಟ್ಮೆಂಟ್ ಅಗತ್ಯ; ಮುಖ್ಯಮಂತ್ರಿಗಳಿಗೆ ಮೋದಿ ಮಹತ್ವದ ಸೂಚನೆ!

Tap to resize

Latest Videos

undefined

ಟೆಸ್ಟ್, ಟ್ರಾಕ್, ಹಾಗೂ ಟ್ರೀಟ್ಮೆಂಟ್. ಇದು ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಹೇಳಿದ ತ್ರಿಬಲ್ ಟಿ ಸೂತ್ರ. ಇದೀಗ ಮತ್ತೆ ಮೋದಿ ಇದೇ ಸೂತ್ರ ಪರಿಣಾಮಕಾರಿಯಾಗಿ ಬಳಸಲು ಮನವಿ ಮಾಡಿದ್ದಾರೆ. ಇದೇ ವೇಳೆ ಸ್ಥಳೀಯ ಆಡಳಿತ ಹೆಚ್ಚು ಸಕ್ರೀಯವಾಗಿ ತೊಡಗಿಸಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಕೊರೋನಾ ಸೋಂಕಿತರಿಗ ಆಸ್ಪತ್ರೆ, ಬೆಡ್, ವೆಂಟಿಲೇಟರ್, ಆಕ್ಸಿನ್ ಸೇರಿದಂತೆ ವೈದ್ಯಕೀಯ ಸೌಲಭ್ಯ ಸರಿಯಾಗಿ ಪೂರೈಕೆಯಾಗುವಂತೆ ಹಾಗೂ ಸಿಗುವಂತೆ ನೋಡಿಕೊಳ್ಳಬೇಕು ಎಂದು ರಾಜ್ಯಕ್ಕೆ ಸೂಚನೆ ನೀಡಿದ್ದಾರೆ. ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಆರೈಕೆಗೆ ಸರಿಯಾದ ಕೋವಿಡ್ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಮೋದಿ ಹೇಳಿದ್ದಾರೆ.

ಇನ್ನು ಲಸಿಕೆ ವಿತರಣೆ ಕುರಿತು ಮಾಹಿತಿ ಪಡೆದುಕೊಂಡ ಮೋದಿ, ರೆಮ್ಡಿಸಿವಿರ್ ಸೇರಿದಂತೆ ಇತರ ಲಸಿಕೆ ಪೂರೈಕೆ ಅಭಾವ ಬಗೆ ಹರಿಸಲು ತೆಗೆದುಕೊಂಡ ಕ್ರಮಗಳ ಕುರಿತು ವರದಿ ಪಡೆದುಕೊಂಡಿದ್ದಾರೆ. ರೆಮ್ಡಿಸಿವಿರ್ ಸೇರಿದಂತೆ ಸ್ಥಳೀಯ ಲಸಿಕೆ ಉತ್ಪಾದನೆಯನ್ನು ಭಾರತ ಸರ್ಕಾರ ಹೆಚ್ಚಿಸಿದೆ. ಈ ಕುರಿತ ಮೋದಿ ವಿವರಗಳನ್ನು ಪಡೆದುಕೊಂಡಿದ್ದಾರೆ.

ಆಕ್ಸಿಜನ್ ಕೊರತೆಯಾಗದಂತೆ ನೋಡಿಕೊಳ್ಳಲು ಮೋದಿ ಸೂಚನೆ ನೀಡಿದ್ದಾರೆ.  ಪಿಎಂ ಕೇರ್ಸ್‌ನಿಂದ 32 ರಾಜ್ಯಗಳು  ಹಾಗೂ ಕೇಂದ್ರಾಡಳಿತ ಪ್ರದೇಶಗಳು 162 PSA ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. 1 ಲಕ್ಷ ಸಿಲಿಂಡರ್‌ಗಳನ್ನು ಸಂಗ್ರಹಿಸಿ,  ಶೀಘ್ರದಲ್ಲೇ  ಎಲ್ಲಾ ರಾಜ್ಯಗಳಿಗೆ ಸರಬರಾಜು ಮಾಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೆಚ್ಚಾಯ್ತು ಕೊರೋನಾ ಆತಂಕ; ರಾತ್ರಿ 8 ಗಂಟೆಗೆ ಮಹತ್ವದ ಸಭೆ ಕರೆದ ಪ್ರಧಾನಿ ಮೋದಿ!

click me!