ಕೋವಿಡ್ ಪರಿಸ್ಥಿತಿ ಕುರಿತು ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ, ಅಧಿಕಾರಿಗಳಿಗೆ ಮಹತ್ವದ ಸೂಚನೆ!

By Suvarna NewsFirst Published Mar 22, 2023, 8:14 PM IST
Highlights

ಕೋವಿಡ್ ಹಾಗೂ h3n2 ಪ್ರಕರಣ ಏರಿಕೆಯಿಂದ ಸಭೆ ನಡೆಸಿದ ಪ್ರಧಾನಿ ಮೋದಿ, ಜೀನೋಮ್ ಸೀಕ್ರೆನ್ಸ್ ಪರೀಕ್ಷೆ ಹೆಚ್ಚಳ ಸೇರಿದಂತೆ ಮಹತ್ವದ ಸೂಚನೆ ನೀಡಿದ್ದಾರೆ. ಮೋದಿ ಸಭೆಯ ಸಂಪೂರ್ಣ ಮಾಹಿತಿ ಇಲ್ಲಿದೆ.
 

ನವದೆಹಲಿ(ಮಾ.22) ದೇಶದಲ್ಲಿ ಕೋವಿಡ್ ಹಾಗೂ h3n2 ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ದೆಹಲಿಯಲ್ಲಿ ನಡೆದ ಈ ಸಭೆಯಲ್ಲಿ ದೇಶದಲ್ಲಿನ ಪ್ರಕರಣ, ಕೈಗೊಂಡಿರುವ ಮುನ್ನಚ್ಚೆರಿಕೆ ಕ್ರಮಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಇದೇ ವೇಳೆ ಕೋವಿಡ್ ಹಾಗೂ h3n2 ಪ್ರಕರಣ ಎದುರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮೋದಿ ಸೂಚನೆ ನೀಡಿದ್ದಾರೆ. ಪ್ರಮುಖವಾಗಿ ಮಾದರಿಗಳನ್ನು ಜಿನೋಮ್ ಸೀಕ್ರೆನ್ಸ್ ಪರೀಕ್ಷೆ ಮಾಡಿಸಲು ಸೂಚಿಸಲಾಗಿದೆ. ಹೆಚ್ಚು ಪರೀಕ್ಷೆಗಳನ್ನು ಮಾಡಿ ಮೂಲ ಪತ್ತೆ ಹಚ್ಚಲು ಸೂಚಿಸಲಾಗಿದೆ. ಇದೇ ವೇಳೆ ಆಸ್ಪತ್ರೆ ಆವರಣಗಳಲ್ಲಿ ಸಿಬ್ಬಂದಿಗಳು ಹಾಗೂ ಆಸ್ಪತ್ರೆಗೆ ಆಗಮಿಸುವ ಎಲ್ಲರೂ ಮಾಸ್ಕ್ ಧರಿಸುವಂತೆ ಸೂಚನೆ ನೀಡಿದ್ದಾರೆ. 

ಭಾರತದಲ್ಲಿ ಪ್ರತಿ ದಿನ ಸರಾಸರಿ 888 ಪ್ರಕರಣಗಳು ದಾಖಲಾಗುತ್ತಿದೆ ಎಂದು ಅಧಿಕಾರಿಗಳು ಮೋದಿಗೆ ಮಾಹಿತಿ ನೀಡಿದ್ದಾರೆ. ವಾರದ ಪಾಸಿಟಿವಿಟಿ ರೇಟ್ ಶೇಕಡಾ 0.98%. ಮಾರ್ಚ್ 22ರ ವಾರಾಂತ್ಯಕ್ಕೆ ವಿಶ್ವದಲ್ಲಿ ಪ್ರತಿದಿನ 1.08 ಲಕ್ಷ ಸರಾಸರಿ ಪ್ರಕರ ದಾಖಲಾಗುತ್ತಿದೆ. ಆರೋಗ್ಯ ಕೇಂದ್ರಗಳಿಗೆ ಸೂಕ್ತ ಔಷಧಿಗಳನ್ನು ಪೂರೈಕೆ ಮಾಡಿರುವ ಮಾಹಿತಿಯನ್ನು ಅಧಿಕಾರಿಗಳು ಮೋದಿಗೆ ನೀಡಿದ್ದಾರೆ. ಕೋವಿಡ್ ಹಾಗೂ  h3n2 ಪ್ರಕರಣ, ದೇಶದಲ್ಲಿನ ಪರಿಸ್ಥಿತಿ ಅವಲೋಕಿಸಿದ ಮೋದಿ, ಅಧಿಕಾರಿಗಳಿಗೆ ಮಹತ್ವದ ಸೂಚನೆ ನೀಡಿದರು.

Covid New Variant: ಭಾರತದಲ್ಲಿ ಹೊಸ ಕೋವಿಡ್ ರೂಪಾಂತರ XBB 1.16: 76 ಮಾದರಿಗಳು ಪತ್ತೆ

ಹಿರಿಯ ನಾಗರೀಕರು, ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಮಾಸ್ಕ್ ಧರಿಸುವುದರ ಮೂಲಕ ಸಮಸ್ಯೆಯಿಂದ ದೂರವಿರಲು ಸಾಧ್ಯ. ಈ ನಿಟ್ಟಿನ ಅಧಿಕಾರಿಗಳುು ಕಾರ್ಯಪ್ರವೃತ್ತರಾಗಬೇಕು ಎಂದಿದ್ದಾರೆ. ಇದೇ ವೇಳೆ ಟೆಸ್ಟ್, ಟ್ರಾಕ್ ಹಾಗೂ ಟ್ರೀಟ್ಮೆಂಟ್ ಕುರಿತು ಮೋದಿ ಒತ್ತಿ ಹೇಳಿದ್ದಾರೆ. ಎಲ್ಲರಿಗೂ ಲಸಿಕೆ ತಲುಪಿಸಬೇಕು. ಲಸಿಕೆ ಪಡೆಯದೇ ಇರುವವರಿಗೆ ಜಾಗೃತಿ ಮೂಡಿಸಬೇಕು. ಕೋವಿಡ್ ಭಾರತದಲ್ಲಿ ನಿಯಂತ್ರಣದಲ್ಲಿದೆ. ಆದರೆ ಈಗಿನಿಂದಲೇ ಎಚ್ಚರಿಕೆವಹಿಸಬೇಕು ಎಂದು ಮೋದಿ ಸೂಚನೆ ನೀಡಿದ್ದಾರೆ.

Covid Cases: ಸೋಂಕು ಹೆಚ್ಚಳ, ಕರ್ನಾಟಕ ಸೇರಿ 6 ರಾಜ್ಯಗಳಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ಪ್ರತಿಯೊಬ್ಬನಿಗೆ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಸಿಗುವಂತಾಗಬೇಕು. ಕೋವಿಡ್ ಕುರಿತು ಯಾರು ಆತಂಕ ಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ಅಗತ್ಯ ಎಂದು ಮೋದಿ ಒತ್ತಿ ಹೇಳಿದ್ದಾರೆ. ಹೆಚ್ಚು ಜನಸಂದಣಿ ಇರುವ ಪ್ರದೇಶದಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಅಗತ್ಯ ಎಂದು ಮೋದಿ ಸೂಚಿಸಿದ್ದಾರೆ.

click me!