ಮೋದಿ ಫೋನ್‌ ಕರೆಗೆ ಮಣಿದ ಫಡ್ನವೀಸ್‌, ಸಿಎಂ ಪಟ್ಟ ಬಿಟ್ಟುಕೊಟ್ಟ ರಹಸ್ಯ ಹೀಗಿದೆ!

Published : Jul 03, 2022, 11:09 AM IST
ಮೋದಿ ಫೋನ್‌ ಕರೆಗೆ ಮಣಿದ ಫಡ್ನವೀಸ್‌, ಸಿಎಂ ಪಟ್ಟ ಬಿಟ್ಟುಕೊಟ್ಟ ರಹಸ್ಯ ಹೀಗಿದೆ!

ಸಾರಾಂಶ

* ಉದ್ಧವ್‌ ಠಾಕ್ರೆ ಸರ್ಕಾರ ಪತನಗೊಂಡ ಬಳಿಕ ಶಿಂಧೆ ಸಿಎಂ * ಮೋದಿ 2 ಬಾರಿ ಕರೆ ಮಾಡಿದ ಮೇಲೆ ಡಿಸಿಎಂ ಆಗಲು ಒಪ್ಪಿಗೆ * ಸರ್ಕಾರದಲ್ಲಿ ಭಾಗಿಯಾಗದ ನಿರ್ಧಾರ ಬಿಜೆಪಿಯಲ್ಲಿ ಇನ್ನಾರಿಗೂ ಗೊತ್ತಿರಲಿಲ್ಲ

ನವದೆಹಲಿ(ಜು.03): ಉದ್ಧವ್‌ ಠಾಕ್ರೆ ಸರ್ಕಾರ ಪತನಗೊಂಡ ನಂತರ ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಂಡಾಯ ನಾಯಕ ಏಕನಾಥ್‌ ಶಿಂಧೆ ಮುಖ್ಯಮಂತ್ರಿಯಾಗುತ್ತಾರೆ ಎಂದು ಪ್ರಕಟಿಸಿದ ಬಿಜೆಪಿ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಪ್ರಧಾನಿ ನರೇಂದ್ರ ಮೋದಿ ಎರಡೆರಡು ಬಾರಿ ಕರೆ ಮಾಡಿದ ಮೇಲೆ ಉಪ ಮುಖ್ಯಮಂತ್ರಿಯಾಗಲು ಒಪ್ಪಿದರು ಎಂದು ಮೂಲಗಳು ಹೇಳಿವೆ.

ಉದ್ಧವ್‌ ರಾಜೀನಾಮೆ ನೀಡಿದ ನಂತರ ಫಡ್ನವೀಸ್‌ ಅವರೇ ಮುಖ್ಯಮಂತ್ರಿಯಾಗುತ್ತಾರೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರೇ ಅಚ್ಚರಿಯೆಂಬಂತೆ ಶಿಂಧೆ ಮುಖ್ಯಮಂತ್ರಿಯಾಗುತ್ತಾರೆಂದೂ, ತಾವು ಸರ್ಕಾರದಲ್ಲಿ ಭಾಗಿಯಾಗುವುದಿಲ್ಲವೆಂದೂ ಪ್ರಕಟಿಸಿದ್ದರು. ನಂತರ ಸ್ವತಃ ಪ್ರಧಾನಿ ಮೋದಿ ಅವರು ಫಡ್ನವೀಸ್‌ಗೆ ಎರಡೆರಡು ಬಾರಿ ಕರೆ ಮಾಡಿ ಉಪ ಮುಖ್ಯಮಂತ್ರಿಯಾಗಲು ಸೂಚಿಸಿದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಹಾಗೂ ಗೃಹ ಸಚಿವ ಅಮಿತ್‌ ಶಾ ಕೂಡ ಟ್ವೀಟರ್‌ನಲ್ಲಿ ಫಡ್ನವೀಸ್‌ಗೆ ಸರ್ಕಾರದ ಭಾಗವಾಗಲು ಮನವಿ ಮಾಡಿದರು. ನಂತರವಷ್ಟೇ ಅವರು ಉಪ ಮುಖ್ಯಮಂತ್ರಿಯಾಗಲು ಒಪ್ಪಿದರು ಎಂದು ಮೂಲಗಳು ತಿಳಿಸಿವೆ.

‘ಇನ್ನು, ಮಹಾರಾಷ್ಟ್ರದ ಎಲ್ಲಾ ರಾಜಕೀಯ ಬೆಳವಣಿಗೆಗಳೂ ಫಡ್ನವೀಸ್‌ ಅವರಿಗೆ ತಿಳಿದಿತ್ತು. ಅವರಿಲ್ಲದೆ ಉದ್ಧವ್‌ ಸರ್ಕಾರ ಪತನಗೊಳ್ಳುತ್ತಲೇ ಇರಲಿಲ್ಲ. ತಾವು ಸರ್ಕಾರದಲ್ಲಿ ಭಾಗಿಯಾಗುವುದಿಲ್ಲ ಎಂದು ಅವರು ಪ್ರಕಟಿಸುವವರೆಗೂ ಆ ನಿರ್ಧಾರ ಇನ್ನಾರಿಗೂ ತಿಳಿದಿರಲಿಲ್ಲ. ಹಾಗೆ ಪ್ರಕಟಿಸುವಂತೆ ಅವರಿಗೆ ಯಾರೂ ಸೂಚನೆ ನೀಡಿರಲಿಲ್ಲ’ ಎಂದೂ ಮೂಲಗಳು ಸ್ಪಷ್ಟಪಡಿಸಿವೆ.

‘ರಾಜ್ಯದಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಗಮನ ಹರಿಸುವುದಕ್ಕೆಂದೇ ಅವರು ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಗೆ ತೆರಳಿಲ್ಲ’ ಎಂದು ತಿಳಿದುಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್