'ಪ್ರಧಾನಿ ಮೋದಿಯಿಂದ ಭಾರತದ ಪರಿಕಲ್ಪನೆ ನಾಶ'

By Suvarna News  |  First Published Sep 30, 2021, 11:49 AM IST

* ಭಾರತವನ್ನು ತಾವೊಬ್ಬರೇ ಬಲ್ಲೆ ಎಂಬ ಅಹಂಕಾರ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ 

* ಪ್ರಧಾನಿ ಮೋದಿಯಿಂದ ಭಾರತದ ಪರಿಕಲ್ಪನೆ ನಾಶ


ಮಲಪ್ಪುರಂ(ಸೆ.30): ಭಾರತವನ್ನು ತಾವೊಬ್ಬರೇ ಬಲ್ಲೆ ಎಂಬ ಅಹಂಕಾರ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಈ ದೇಶದ ಜನರ ನಡುವಿನ ಸಂಬಂಧ ಮತ್ತು ಸಂಪರ್ಕವನ್ನು ಮುರಿಯುತ್ತಿದ್ದಾರೆ. ತನ್ಮೂಲಕ ಭಾರತದ ಪರಿಕಲ್ಪನೆಯನ್ನು ನಾಶ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಪ್ರಧಾನಿ(Rahul Gandhi) ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ನಿರ್ಮಾಣವಾಗಿರುವ ಡಯಾಲಿಸಿಸ್‌ ಕೇಂದ್ರ ಉದ್ಘಾಟಿಸಿ ಮಾತನಾಡಿದ ಸ್ಥಳೀಯ ಸಂಸದರೂ ಆಗಿರುವ ರಾಹುಲ್‌ ಗಾಂಧಿ(Rahul gandhi), ‘ವಿವಿಧ ರಾಜ್ಯಗಳು ಮತ್ತು ಧಾರ್ಮಿಕ ಜನರ ಆಚಾರ ವಿಚಾರಗಳು, ಸಂಸ್ಕೃತಿ, ಭಾಷೆ, ಜೀವನ ಪದ್ಧತಿ ಮತ್ತು ಅವರ ಸಮಸ್ಯೆಗಳ ಬಗ್ಗೆ ಏನೂ ಗೊತ್ತಿಲ್ಲದ ಪ್ರಧಾನಿ ನರೇಂದ್ರ ಮೋದಿ ಅವರು, ಎಲ್ಲವೂ ತಮಗೆ ಮಾತ್ರವೇ ಗೊತ್ತು. ಬೇರೆಯವರಿಗೆ ಈ ದೇಶದ ಬಗ್ಗೆ ಏನೂ ಗೊತ್ತಿಲ್ಲ ಎಂಬ ಅಹಂಕಾರದಲ್ಲಿದ್ದಾರೆ’ ಎಂದು ದೂರಿದರು.

जुमला- “घर में घुस के मारेंगे।”

सच- चीन हमारे देश में घुस के मार रहा है। pic.twitter.com/PvJDv2RIwX

— Rahul Gandhi (@RahulGandhi)

Tap to resize

Latest Videos

ಭಾರತವು(India) ಕೇವಲ ಭೌಗೋಳಿಕ ಪ್ರದೇಶವಲ್ಲ. ಈ ನೆಲದಲ್ಲಿರುವ ಪ್ರತಿಯೊಬ್ಬರು ಆ ಪ್ರದೇಶಗಳೊಂದಿಗೆ ಹೊಂದಿರುವ ಸಂಬಂಧವಾಗಿದೆ. ಈ ಸಂಬಂಧವನ್ನು ಪ್ರಧಾನಿ ಅವರು ಮುರಿಯುತ್ತಿದ್ದಾರೆ. ಭಾರತೀಯರ ಸಂಬಂಧಗಳನ್ನು ಮುರಿಯುವ ಮುಖಾಂತರ ಮೋದಿ ಅವರು ಭಾರತ ಎಂಬ ಪರಿಕಲ್ಪನೆಯನ್ನು ನಾಶ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ನಾನು ಮೋದಿ ಅವರನ್ನು ವಿರೋಧಿಸುತ್ತೇನೆ ಎಂದು ಹೇಳಿದರು.

click me!