ಪ್ರಧಾನಿ ವೈದ್ಯಕೀಯ ವೆಚ್ಚ ತಾವೇ ಭರಿಸಿರುವ ಮೋದಿ, RTI ಅಡಿ ಮಾಹಿತಿ ಬಹಿರಂಗ!

By Suvarna News  |  First Published Jan 9, 2023, 3:55 PM IST

ಪ್ರಧಾನಿ ನರೇಂದ್ರ ಮೋದಿ ನಿಲುವು, ನಿರ್ಧಾರಗಳು ಎಲ್ಲರಿಗಿಂತ ಭಿನ್ನ. ಇಷ್ಟೇ ಅಲ್ಲ ಮಾದರಿ. ಇದೀಗ ಆರ್‌ಟಿಐನಡಿ ಮಾಹಿತಿಯೊಂದು ಬಿಡುಗಡೆಯಾಗಿದೆ. 2014ರಿಂದ ಇಲ್ಲೀವರಗೆ ಪ್ರಧಾನಿ ಮೋದಿ ವೈದ್ಯಕೀಯ ವೆಚ್ಚವನ್ನು ತಾವೇ ಭರಿಸಿದ್ದಾರೆ. ಒಂದೂ ರೂಪಾಯಿಯನ್ನು ಸರ್ಕಾರದಿಂದ ತೆಗೆದುಕೊಂಡಿಲ್ಲ.


ನವದೆಹಲಿ(ಜ.09): ವಿಶ್ವದ್ಲೇ ಪ್ರಧಾನಿ ನರೇಂದ್ರ ಮೋದಿಗೆ ಅತೀ ಹೆಚ್ಚಿನ ಮನ್ನಣೆ ಇದೆ. ಮೋದಿ ಮಾತಿಗೆ ನಾಯಕರು ಕಾಯುತ್ತಾರೆ. ವಿಶ್ವಮಟ್ಟದ ಕಾರ್ಯಕ್ರಮದಲ್ಲಿ ಮೋದಿ ಉಪಸ್ಥಿತಿಯನ್ನು ಎಲ್ಲಾ ನಾಯಕರು ಬಯಸುತ್ತಾರೆ. ಜನಪ್ರಿಯ ನಾಯಕರ ಪೈಕಿ ಮೊದಲ ಸ್ಥಾನದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ನಿರ್ಧಾರ, ನಿಲುವು ಹಾಗೂ ಅವರ ನಡೆ ಮಾದರಿಯಾಗಿದೆ. ಇದೀಗ ಪ್ರಧಾನಿ ಮೋದಿಯ ಮತ್ತೊಂದು ಕುತೂಹಲಕರ ಮಾಹಿತಿ ಬಿಡುಗಡೆಯಾಗಿದೆ. 2014ರಿಂದ ಇಲ್ಲೀವರೆಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ವೈದ್ಯಕೀಯ ವೆಚ್ಚಕ್ಕಾಗಿ ಒಂದು ರೂಪಾಯಿಯನ್ನು ಸರ್ಕಾರದಿಂದ ಪಡೆದಿಲ್ಲ. ಎಲ್ಲಾ ವೆಚ್ಚವನ್ನು ತಾವೇ ಭರಿಸಿದ್ದಾರೆ. ಈ ಕುರಿತು ಪುಣೆ ಮೂಲದ ಸಾಮಾಜಿಕ ಕಾರ್ಯಕರ್ತ ಪ್ರಫುಲ್ಲ ಸರ್ದಾ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ಪ್ರಧಾನಿ ಕಾರ್ಯಾಲಯ ಉತ್ತರ ನೀಡಿದೆ.

ಪ್ರಧಾನಿ, ಸಚಿವ, ಸಂಸದರಿಂದ ಸರ್ಕಾರದಿಂದ ಹಲವು ಭತ್ಯೆಗಳು, ಸವಲತ್ತುಗಳಿವೆ. ಪ್ರಮುಖವಾಗಿ ಪ್ರಧಾನಿ ಸ್ಥಾನದಲ್ಲಿರುವವರಿಗೆ ಆಹಾರ, ವೈದ್ಯಕೀಯ, ಪ್ರಯಾಣ ಸೇರಿದಂತೆ ಎಲ್ಲಾ ವೆಚ್ಚವು ಸರ್ಕಾರ ಭರಿಸಲಿದೆ. ಆದರೆ ಪ್ರಧಾನಿ ಮೋದಿ(PM Modi) ತಮ್ಮ ಆಹಾರಕ್ಕೆ ಸರ್ಕಾರದಿಂದ ಹಣ ಪಡೆದಿಲ್ಲ ಅನ್ನೋದು ಈಗಾಗಲೇ ಆರ್‌ಟಿಐನಡಿ(RTI) ಬಹಿರಂಗವಾಗಿತ್ತು. ಇದೀಗ ಮೋದಿ ಇದುವರೆಗೂ ಮೋದಿ ತಮ್ಮ ವೈದ್ಯಕೀಯ ವೆಚ್ಚವನ್ನು ಸರ್ಕಾರದಿಂದ(Central Government) ಪಡೆದಿಲ್ಲ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ.

Tap to resize

Latest Videos

ಜಗತ್ತಿನ ಅಭಿವೃದ್ಧಿಯ ಇಂಜಿನ್‌ ಆಗುವ ಶಕ್ತಿ ಭಾರತಕ್ಕಿದೆ: ಪ್ರಧಾನಿ ನರೇಂದ್ರ ಮೋದಿ

ಭಾರತದಲ್ಲಿ ಮಾತ್ರವಲ್ಲ, ಪ್ರಧಾನಿ ಮೋದಿ ವಿದೇಶಿ ಪ್ರವಾಸದಲ್ಲಿ ಆರೋಗ್ಯ(Medical Expenses) ತಪಾಸಣೆ ಸೇರಿದಂತೆ ಎಲ್ಲಾ ವೈದ್ಯಕೀಯ ವೆಚ್ಚವನ್ನು ಮೋದಿಯೇ ಭರಿಸಿದ್ದಾರೆ. ಪ್ರತಿ ಪ್ರವಾಸಕ್ಕೂ ಮುನ್ನ, ಉದ್ದೇಶಿತ ರಾಷ್ಟ್ರ ತಲುಪಿದ ಬಳಿಕ ಪ್ರಧಾನಿ ಮೋದಿ ಆರೋಗ್ಯ ತಪಾಸಣೆ ನಡೆಯಲಾಗುತ್ತದೆ. ಈ ತಪಾಸಣೆ, ಆರೋಗ್ಯ ಕುರಿತು ಯಾವುದೇ ವೈದ್ಯಕೀಯ ವೆಚ್ಚಗಳಿಗೆ ಮೋದಿ ಸರ್ಕಾರದಿಂದ ಹಣ ಮಂಜೂರು ಮಾಡಿಸಿಲಿಲ್ಲ.

ಆರೋಗ್ಯ ಕುರಿತು ಮೋದಿ ಕಾಳಜಿ ವಹಿಸುತ್ತಾರೆ. ಮೋದಿ ಆರೋಗ್ಯ ಕಾರಣದಿಂದ ಕೆಲಸಕ್ಕೆ ರಜೆ ಹಾಕಿಲ್ಲ. ಇದರ ಜೊತೆಗೆ ದೇಶದ ಜನತೆಗೂ ಆರೋಗ್ಯ ಕಾಳಜಿ ಕುರಿತು ಜಾಗೃತಿ ಮೂಡಿಸಿದ್ದಾರೆ. ದೇಶದಲ್ಲಿ ಫಿಟ್ ಇಂಡಿಯಾ(Fit India) ಆಂದೋಲನ ಮೂಲಕ ಸದೃಢ ಆರೋಗ್ಯಕ್ಕೆ ಒತ್ತು ನೀಡಿದ್ದಾರೆ. 

ಈ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡಿದ ಸಾಮಾಜಿಕ ಕಾರ್ಯಕರ್ತ ಪ್ರಫುಲ್ಲ ಸರ್ದಾ, ಅಚ್ಚರಿ ಜೊತೆಗೆ ಸಂತಸ ವ್ಯಕ್ತಪಡಿಸಿದ್ದಾರೆ.  ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿ ಸರ್ಕಾರದಿಂದ ವೈದ್ಯಕೀಯ ವೆಚ್ಚಕ್ಕಾಗಿ ಯಾವುದೇ ಹಣ ಖರ್ಚು ಮಾಡಿಲ್ಲ. ಇದು ದೇಶದ ಇತರರ ಸಂಸದರು, ಸಚಿವರಿಗೆ ಮಾದರಿಯಾಗಿದೆ. ಇತರ ನಾಯಕರು ಮೋದಿ ದಾರಿ ಅನುಸರಿಸಬೇಕು. ಈ ರೀತಿಯ ಬೆಳವಣಿಗೆ ಪ್ರಧಾನಿಯಿಂದಲೇ ಆಗಿರುವುದು ಎಲ್ಲರಿಗೂ ಮಾದರಿಯಾಗಿದೆ. ಪ್ರಧಾನಿ ಮೋದಿ ನಡೆಯನ್ನು ಎಲ್ಲಾ ರಾಜಕೀಯ ನಾಯಕರು ಅನುಸರಿಸಬೇಕು ಎಂದು ಪ್ರಫುಲ್ಲಾ ಸರ್ದಾ ಮನವಿ ಮಾಡಿದ್ದಾರೆ.

click me!