PM Modi in Lucknow: ಹಿರಿಯ ಪೋಲಿಸ್‌ ಅಧಿಕಾರಿಗಳ ಸಮ್ಮೇಳನದಲ್ಲಿ ಮೋದಿ, ಅಮಿತ್ ಶಾ, ದೋವಲ್ ಭಾಗಿ!

By Suvarna News  |  First Published Nov 20, 2021, 12:23 PM IST

*ಲಕ್ನೌದಲ್ಲಿ ಹಿರಿಯ ಪೋಲಿಸ್‌ ಅಧಿಕಾರಿಗಳ ಸಮ್ಮೇಳನ
*ಪ್ರಧಾನಿ ಮೋದಿ, ಶಾ, ಅಜಿತ್‌ ದೋವಲ್‌ ಭಾಗಿ
*ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳ ಚರ್ಚೆ
*ಎಲ್ಲ ರಾಜ್ಯಗಳ ಹಿರಿಯ ಪೋಲಿಸ್‌ ಜತೆ ಸಂವಾದ!


ಲಕ್ನೋ(ನ.20): ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amith shah) ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಇಂದು (ಶನಿವಾರ ನ.20)  ಲಕ್ನೋದಲ್ಲಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕರು (DGP) ಮತ್ತು ಪೊಲೀಸ್ ಮಹಾನಿರೀಕ್ಷಕರ (IGP) 56 ನೇ ಸಮ್ಮೇಳನದಲ್ಲಿ ಭಾಗವಹಿಸಿದರು. ಇಂದು ಮತ್ತು ನಾಳೆ ಸಭೆ ಈ  ನಡೆಯಲಿದ್ದು ಪ್ರಧಾನಿ, ಗ್ರಹ ಸಚಿವ ಹಾಗೂ ಭದ್ರತಾ ಸಲಹೆಗಾರ ಎಲ್ಲ ರಾಜ್ಯಗಳ ಹಿರಿಯ ಪೋಲಿಸ್‌ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. 

ಭಯೋತ್ಪಾದನೆ ಸೇರಿದಂತೆ ಹಲವು ವಿಷಯಗಳ ಚರ್ಚೆ!

Latest Videos

undefined

ಎರಡು ದಿನಗಳ ಸಮ್ಮೇಳನವನ್ನು ಹೈಬ್ರಿಡ್ (Hybrid) ಮಾದರಿಯಲ್ಲಿ ನಡೆಸಲಾಗುತ್ತಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಉನ್ನತ ಪೊಲೀಸರು , ಡಿಜಿಪಿಗಳು, ಹಾಗೆಯೇ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (Central armed police forces) ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ ಮುಖ್ಯಸ್ಥರು ಲಕ್ನೋದಲ್ಲಿ ನಡೆಯುವ ಸ್ಥಳದಲ್ಲಿ ಭೌತಿಕವಾಗಿ ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ. ಉಳಿದ ಆಹ್ವಾನಿತರು IB/SIB ಪ್ರಧಾನ ಕಛೇರಿಯಲ್ಲಿ 37 ವಿವಿಧ ಸ್ಥಳಗಳಿಂದ ಆನಲೈನ್‌ (Virtual Meet) ಮೂಲಕ ಭಾಗವಹಿಸುತ್ತಿದ್ದಾರೆ.

Aatmanirbhar Bharat: ಮೋದಿಯಿಂದ ಸೇನೆಗೆ 'ಮೇಡ್‌ ಇನ್ ಇಂಡಿಯಾ' ಶಸ್ತ್ರಾಸ್ತ್ರ ಹಸ್ತಾಂತರ!

ಲಕ್ನೋದಲ್ಲಿ ನಡೆಯುತ್ತಿರುವ ಉನ್ನತ ಭದ್ರತಾ ಸಮಾವೇಶದಲ್ಲಿ ಗೃಹ ಸಚಿವ ಅಮಿತ್ ಶಾ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಕೂಡ ಭಾಗವಹಿಸಿದ್ದರು. ಸಮ್ಮೇಳನದಲ್ಲಿ ಸೈಬರ್ ಅಪರಾಧ (Cyber Crime), ಡಿಜಿಟಲ್ ಆಡಳಿತ (Digital) , ಭಯೋತ್ಪಾದನೆ (Terrorism) ನಿಗ್ರಹಕ್ಕಿರುವ ಸವಾಲುಗಳು, ಎಡಪಂಥೀಯ ಉಗ್ರವಾದ (Left wing extremism), ಮಾದಕವಸ್ತು (Narcotics) ಕಳ್ಳಸಾಗಣೆ, ಜೈಲುಗಳ (Jail) ಸುಧಾರಣೆಗಳು ಸೇರಿದಂತೆ ಮುಂತಾದ ವಿಷಯಗಳನ್ನು ಚರ್ಚಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

2014ರಿಂದ ಡಿಜಿಪಿಗಳ ಸಮಾವೇಶದಲ್ಲಿ ಪ್ರಧಾನಿ ತೀವ್ರ ಆಸಕ್ತಿ ವಹಿಸಿದ್ದಾರೆ. ಈ  ಹಿಂದೇ ಕೇವಲ ಸಾಂಕೇತಿಕ ಉಪಸ್ಥಿತಿ ಮೂಲಕ  ಅಧಿಕಾರಿಗಳ ಸಭೆ ನಡೆಯುತಿತ್ತು. ಆದರೆ ಇದಕ್ಕೆ ಭಿನ್ನವಾಗಿ, ಪಿಎಂ ಮೋದಿ ಅವರು ಸಮ್ಮೇಳನದ ಎಲ್ಲಾ ಸೆಷನ್‌ಗಳಿಗೆ (Session) ಹಾಜರಾಗುತ್ತಿದ್ದಾರೆ. ಈ ಮೂಲಕ ದೇಶದ ಮೇಲೆ ಪರಿಣಾಮ ಬೀರುವ ಪ್ರಮುಖ ಪೋಲೀಸಿಂಗ್ (Polocing) ಮತ್ತು ಆಂತರಿಕ ಭದ್ರತಾ (Internal security) ಸಮಸ್ಯೆಗಳ ಬಗ್ಗೆ ಪ್ರಧಾನ ಮಂತ್ರಿಗೆ ನೇರವಾಗಿ ತಿಳಿಸಲು ಉನ್ನತ ಪೊಲೀಸ್ ಅಧಿಕಾರಿಗಳಿಗೆ ಅವಕಾಶವನ್ನು ಒದಗಿಸಿದ್ದಾರೆ. ಜತೆಗೆ ಪೋಲಿಸ್‌ ಅಧಿಕಾರಗಳ ಅನೌಪಚಾರಿಕ ಚರ್ಚೆಗಳನ್ನು ಪ್ರಧಾನಿ ಪ್ರೋತ್ಸಾಹಿಸುತ್ತಾರೆ.

2014 ರಿಂದ ವಿವಧ ರಾಜ್ಯಗಳಲ್ಲಿ ಸಮ್ಮೇಳನ ಆಯೋಜನೇ!

ಪ್ರಧಾನಮಂತ್ರಿಯವರ ಆದೇಶದ ಪ್ರಕಾರ,  ದೆಹಲಿಯಲ್ಲಿ ಆಯೋಜಿಸಲಾಗುತ್ತಿದ್ದ ವಾರ್ಷಿಕ ಸಮ್ಮೇಳನಗಳನ್ನು 2014 ರಿಂದ ದೆಹಲಿಯ ಹೊರಗೆ ಆಯೋಜಿಸಲಾಗಿದೆ. 2020ರಲ್ಲಿ ಮಾತ್ರ  ಸಮ್ಮೇಳನವನ್ನು  ವರ್ಚುವಲ್‌ ಸಭೆ (Virtual Meet) ಮೂಲಕ ನಡೆಸಲಾಗಿತ್ತು.

Farm Laws: ಒಂದೇ ಏಟಿಗೆ ವಿಪಕ್ಷಗಳ ಅಸ್ತ್ರ ನಿಷ್ಕ್ರಿಯ; ಬಿಜೆಪಿ ಯೂ-ಟರ್ನ್ ಹೊಡೆದಿದ್ದೇಕೆ?

2014 ರಲ್ಲಿ ಸಮ್ಮೇಳನವನ್ನು  ಗುವಾಹಟಿಯಲ್ಲಿ (Guwahati) ಆಯೋಜಿಸಲಾಗಿತ್ತು. 2015 ರಲ್ಲಿ ಧೋರ್ಡೊ (Dhordo), ರಾನ್ ಆಫ್ ಕಚ್ (Rann of Kutch ) ಹಾಗೂ 2016 ರಲ್ಲಿ ರಾಷ್ಟ್ರೀಯ ಪೊಲೀಸ್ ಅಕಾಡೆಮಿ, ಹೈದರಾಬಾದ್ (Hyderbad) ನಲ್ಲಿ ನಡೆಸಲಾಗಿತ್ತು. 2017 ರಲ್ಲಿ BSF ಅಕಾಡೆಮಿ,  ತೆಕನ್‌ಪುರ (Tekanpur) ; 2018 ರಲ್ಲಿ ಕೆವಾಡಿಯಾ(Kevadiya) ; ಮತ್ತು 2019 ರಲ್ಲಿ IISER ಪುಣೆ ಯಲ್ಲಿ (Pune) ಸಮ್ಮೇಳನ ನಡೆದಿತ್ತು. ಈ ಬಾರಿ ಲಕ್ನೋದಲ್ಲಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸಮ್ಮೇಳನ ನಡೆಯುತ್ತಿದೆ.

click me!