ಎಲೆಕ್ಟ್ರಾನಿಕ್ಸ್ ಉತ್ಪಾದನಾ ವ್ಯವಸ್ಥೆ ವಿಸ್ತರಣೆ, ಗೂಗಲ್‌ ಸಿಇಒ ಸುಂದರ್‌ ಪಿಚೈ ಜೊತೆ ಪ್ರಧಾನಿ ಮೋದಿ ಮಾತು

Published : Oct 16, 2023, 10:39 PM IST
ಎಲೆಕ್ಟ್ರಾನಿಕ್ಸ್ ಉತ್ಪಾದನಾ ವ್ಯವಸ್ಥೆ ವಿಸ್ತರಣೆ, ಗೂಗಲ್‌ ಸಿಇಒ ಸುಂದರ್‌ ಪಿಚೈ ಜೊತೆ ಪ್ರಧಾನಿ ಮೋದಿ ಮಾತು

ಸಾರಾಂಶ

ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗೂಗಲ್‌ ಹಾಗೂ ಆಲ್ಫಾಬೆಟ್‌ ಕಂಪನಿಯ ಮುಖ್ಯವ್ಯವಸ್ಥಾಪಕ ಅಧಿಕಾರಿ ಭಾರತೀಯ ಮೂಲದ ಸುಂದರ್‌ ಪಿಚೈ ಅವರೊಂದಿಗೆ ವರ್ಚುವಲ್‌ ಆಗಿ ಮಾತುಕತೆ ನಡೆಸಿದ್ದಾರೆ.  

ನವದೆಹಲಿ (ಅ.16): ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗ್ಗೆ ಗೂಗಲ್ ಮತ್ತು ಆಲ್ಫಾಬೆಟ್ ಸಿಇಒ ಭಾರತೀಯ ಮೂಲದ ಸುಂದರ್ ಪಿಚೈ ಅವರೊಂದಿಗೆ ವರ್ಚುವಲ್‌ ಆಗಿ ಸಂವಾದ ನಡೆಸಿದ್ದಾರೆ. ಸಂವಾದದ ಸಮಯದಲ್ಲಿ, ಪ್ರಧಾನ ಮಂತ್ರಿ ಮತ್ತು ಪಿಚೈ ಅವರು ಭಾರತದಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ವಿಸ್ತರಿಸುವಲ್ಲಿ ಭಾಗವಹಿಸುವ ಗೂಗಲ್‌ನ  ಯೋಜನೆಗಳ ಬಗ್ಗೆ ಚರ್ಚೆ ಮಾಡಿದ್ದರೆ. ಭಾರತದಲ್ಲಿ ಕ್ರೋಮ್‌ಬುಕ್‌ ಲ್ಯಾಪಟ್‌ಟಾಪ್‌ಗಳನ್ನು ತಯಾರಿಸುವ ನಿಟ್ಟಿಲ್ಲಿ  ಎಚ್‌ಪಿ ಕಂಪನಿಯೊಂದಿಗೆ ಗೂಗಲ್‌ನ ಪಾಲುದಾರಿಕೆಯನ್ನು ಪ್ರಧಾನಮಂತ್ರಿ ಈ ವೇಳೆ ಶ್ಲಾಘಿಸಿದ್ದಾರೆ. ನರೇಂದ್ರ ಮೋದಿ ಈ ಹಂತದಲ್ಲಿ ಗೂಗಲ್‌ನ 100 ಭಾಷೆಗಳ ಉಪಕ್ರಮವನ್ನು ಮೆಚ್ಚಿಕೊಂಡಿದ್ದಾರೆ ಮತ್ತು ಭಾರತೀಯ ಭಾಷೆಗಳಲ್ಲಿ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌  ಉತ್ಪನ್ನಗಳು ಲಭ್ಯವಾಗುವಂತೆ ಮಾಡುವ ಪ್ರಯತ್ನಗಳನ್ನು ಪ್ರೋತ್ಸಾಹಿಸಿದರು. ಉತ್ತಮ ಆಡಳಿತಕ್ಕಾಗಿ ಎಐ ಟೂಲ್‌ಗಳಲ್ಲಿ ಕೆಲಸ ಮಾಡಲು ಗೂಗಲ್‌ ಅವರಿಗೆ ಪ್ರೋತ್ಸಾಹ ನೀಡಿದ್ದಾರೆ.

ಗಾಂಧಿನಗರದಲ್ಲಿರುವ ಗುಜರಾತ್ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿಯಲ್ಲಿ (GIFT) ತನ್ನ ಜಾಗತಿಕ ಫಿನ್‌ಟೆಕ್ ಕಾರ್ಯಾಚರಣೆ ಕೇಂದ್ರವನ್ನು ತೆರೆಯುವ ಗೂಗಲ್‌ನ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದಾರೆ. ಜಿಪೇ ಮತ್ತು ಯುಪಿಐಯ ಸಾಮರ್ಥ್ಯ ಮತ್ತು ವ್ಯಾಪ್ತಿಯನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಭಾರತದಲ್ಲಿ ಆರ್ಥಿಕ ಸೇರ್ಪಡೆಯನ್ನು ಸುಧಾರಿಸುವ ಗೂಗಲ್‌ನ ಯೋಜನೆಗಳ ಕುರಿತು ಸುಂದರ್‌ ಪಿಚೈ ಅವರು ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ. ಭಾರತದ ಅಭಿವೃದ್ಧಿ ಪಥಕ್ಕೆ ಕೊಡುಗೆ ನೀಡಲು ಗೂಗಲ್‌ನ ಸದಾಕಾಲ ಬದ್ಧವಾಗಿರಲಿದೆ ಎಂದು ತಿಳಿಸಿದೆ.

ಶ್ರೀಮಂತಿಕೆಯಲ್ಲಿ ಸುಂದರ್‌ ಪಿಚೈ, ಸತ್ಯ ನಾಡೆಲ್ಲಾರನ್ನು ಹಿಂದಿಕ್ಕಿದ ಭಾರತೀಯ ಮೂಲದ ಮಹಿಳಾ ಉದ್ಯಮಿ!

2023 ರ ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ಭಾರತವು ಆಯೋಜಿಸುವ ಎಐ ಶೃಂಗಸಭೆಯಲ್ಲಿ ಮುಂಬರುವ ಜಾಗತಿಕ ಪಾಲುದಾರಿಕೆಗೆ ಕೊಡುಗೆ ನೀಡುವಂತೆ ಪ್ರಧಾನ ಮಂತ್ರಿ ಗೂಗಲ್‌ಗೆ ಆಹ್ವಾನ ನೀಡಿದರು.

25 ವರ್ಷಗಳ ಹಿಂದೆ ಗ್ಯಾರೇಜ್‌ನಲ್ಲಿ ಆರಂಭವಾದ ಗೂಗಲ್‌ ಹುಟ್ಟಿನ ಬಗ್ಗೆ ಕುತೂಹಲಕಾರಿ ವಿಷಯಗಳಿವು!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌