ಸಲಿಂಗ ವಿವಾಹ ವಿಚಾರದಲ್ಲಿ ಅ.17ಕ್ಕೆ ಸುಪ್ರೀಂ ಕೋರ್ಟ್‌ ತೀರ್ಪು

Published : Oct 16, 2023, 07:03 PM IST
ಸಲಿಂಗ ವಿವಾಹ ವಿಚಾರದಲ್ಲಿ ಅ.17ಕ್ಕೆ ಸುಪ್ರೀಂ ಕೋರ್ಟ್‌ ತೀರ್ಪು

ಸಾರಾಂಶ

ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಸಂವಿಧಾನ ಪೀಠವು ಹತ್ತು ದಿನಗಳ ವಿಚಾರಣೆಯ ನಂತರ ಈ ವರ್ಷ ಮೇ 11 ರಂದು ಈ ಸಲಿಂಗ ವಿವಾಹ ಪ್ರಕರಣದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.

ನವದೆಹಲಿ (ಅ.16): ಭಾರತದಲ್ಲಿ ಸಲಿಂಗ ವಿವಾಹಗಳನ್ನು ಕಾನೂನು ಬದ್ಧಗೊಳಿಸಬೇಕೇ  ಎಂಬ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ನೀಡಲಿದೆ. ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ನೇತೃತ್ವದ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಎಸ್ ರವೀಂದ್ರ ಭಟ್, ಹಿಮಾ ಕೊಹ್ಲಿ ಮತ್ತು ಪಿಎಸ್ ನರಸಿಂಹ ಅವರನ್ನೊಳಗೊಂಡ ಸಂವಿಧಾನ ಪೀಠವು ಹತ್ತು ದಿನಗಳ ವಿಚಾರಣೆಯ ನಂತರ ಈ ವರ್ಷ ಮೇ 11 ರಂದು ತೀರ್ಪನ್ನು ಕಾಯ್ದಿರಿಸಿತ್ತು.  ಭಾರತದಲ್ಲಿ ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಹಾಕಲಾಗಿದ್ದ ಅರ್ಜಿಗಳ ಬ್ಯಾಚ್‌ಅನ್ನು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ರಚನೆ ಮಾಡಿತ್ತು. "ನಮ್ಮಲ್ಲಿ ನಿರಂತರವಾಗಿ ಉಳಿದಿರುವ ಸಾಂವಿಧಾನಿಕ ಸಿದ್ಧಾಂತವಿದೆ. ನಾವು ಶಾಸನವನ್ನು ಮಾಡಲು ಸಾಧ್ಯವಿಲ್ಲ, ನಾವು ನೀತಿಯನ್ನು ರೂಪಿಸಲು ಸಾಧ್ಯವಿಲ್ಲ, ನಾವು ನೀತಿ ರಚನೆಯ ಕ್ಷೇತ್ರವನ್ನು ಪ್ರವೇಶಿಸಲು ಸಾಧ್ಯವಿಲ್ಲ" ಎಂದು ಪೀಠದ ಭಾಗವಾಗಿದ್ದ ನ್ಯಾಯಮೂರ್ತಿ ಎಸ್ ಆರ್ ಭಟ್ ತಿಳಿಸಿದ್ದರು.

ಮದುವೆಯು ಹಲವಾರು ಹಕ್ಕುಗಳು, ಸವಲತ್ತುಗಳು ಮತ್ತು ಕಟ್ಟುಪಾಡುಗಳನ್ನು "ಕಾನೂನಿಂದ ಪಾಲಿಸಲಾಗಿದೆ ಮತ್ತು ರಕ್ಷಿಸುತ್ತದೆ" ಎಂದು ಅರ್ಜಿಗಳು ವಾದಿಸಿದವು. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ದೆಹಲಿ ಆಯೋಗವು (DCPCR) ಈ ರೀತಿಯ ಮದುವೆಗಳನ್ನು ಗುರುತಿಸುವಂತೆ ತಿಳಿಸಿದೆ. ಮಕ್ಕಳ ಮೇಲೆ ಈಂಥ ವಿವಾಹಗಳ ಪ್ರಭಾವದ ಕುರಿತು ನ್ಯಾಯಾಲಯಕ್ಕೆ ಸಹಾಯ ಮಾಡಲು ಮಧ್ಯಸ್ಥಿಕೆ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು.

ನೆರೆಮನೆಯ ಆಂಟಿ ಜೊತೆ ಲವ್‌, ಮಾರ್ಕೆಟ್‌ನಲ್ಲಿ ಗಂಡನನ್ನು ಬಿಟ್ಟು ಎಸ್ಕೇಪ್‌ ಆದ ಪತ್ನಿ!

ಮತ್ತೊಂದೆಡೆ, ಕೇಂದ್ರ ಸರ್ಕಾರ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂಸ್ಥೆ ಎನ್‌ಸಿಪಿಸಿಆರ್ ಮತ್ತು ಜಮಿಯತ್-ಉಲಾಮಾ-ಐ-ಹಿಂದ್ ಎಂಬ ಇಸ್ಲಾಮಿಕ್ ವಿದ್ವಾಂಸರ ಮಂಡಳಿ ಸೇರಿದಂತೆ ಪ್ರತಿವಾದಿಗಳು ಅರ್ಜಿಗಳನ್ನು ವಿರೋಧಿಸಿದರು.

ಪ್ರೀತಿ ಮುಖ್ಯ, ಲಿಂಗ-ಗಾತ್ರವಲ್ಲ: ಮಕ್ಕಳಿಗೆ ಸಲಿಂಗಿ ಮದ್ವೆ ಕುರಿತು ಕರೀನಾ ಕಪೂರ್‌ ಪಾಠ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?