
ನೋಯ್ಡಾ (ಆ.15) ಪತಿ-ಪತ್ನಿ ಹಾಗೂ ಮಗು ಕ್ಯಾಬ್ ಪ್ರಯಾಣದ ಭಯಾನಕತೆ ಬಿಚ್ಚಿಟ್ಟಿದ್ದಾರೆ. ತನ್ನ ನಿರ್ಲಕ್ಷ್ಯದ ಡ್ರೈವಿಂಗ್‌ನಿಂದ ವಾಹನಕ್ಕೆ ಡಿಕ್ಕಿ ಹೊಡೆದ ಕ್ಯಾಬ್ ಚಾಲಕ ಬಳಿಕ ಪೊಲೀಸರು ನಿಲ್ಲಿಸಲು ಸೂಚಿಸಿದರೂ ನಿಲ್ಲಿಸಿಲ್ಲ. ಅತೀ ವೇಗದಿಂದ ರ್ಯಾಶ್ ಡ್ರೈವಿಂಗ್ ಮಾಡುತ್ತಾ ಸಾಗಿದ್ದಾನೆ. ಈ ಕ್ಯಾಬ್‌ನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬ ಪರಿಪರಿಯಾಗಿ ಚಾಲಕನ ಬಳಿ ಬೇಡಿಕೊಂಡಿದೆ. ಪೊಲೀಸರ ಜೊತೆ ನಾನು ಮಾತನಾಡುತ್ತೇನೆ. ಮಗುವಿಗೆ ಭಯಗೊಂಡು ಅಳುತ್ತಿದೆ. ದಯವಿಟ್ಟು ನಮ್ಮನ್ನು ಇಲ್ಲಿ ಇಳಿಸಿಬಿಡು ಎಂದರೂ ಕೇಳದ ಕ್ಯಾಬ್ ಚ್ಯಾಲಕ ಮತ್ತಷ್ಟು ವೇಗವಾಗಿ, ನಿರ್ಲಕ್ಷ್ಯದಿಂದ ಡ್ರೈವಿಂಗ್ ಮಾಡಿದ ಘಟನೆ ವರದಿಯಾಗಿದೆ. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಕ್ಯಾಬ್ ಚಾಲನಕ ಪೊಲೀಸರು ಬಂಧಿಸಿದ್ದಾರೆ.
ಮಗುವಿನ ಜೊತೆ ಪತಿ ಹಾಗೂ ಪತ್ನಿ ಗ್ರೇಟರ್ ನೋಯ್ಡಾದಿಂದ ದೆಹಲಿಯ ಕನೌಟ್ ಪ್ಲೇಸ್‌ಗೆ ತೆರಳಲು ಕ್ಯಾಬ್ ಬುಕ್ ಮಾಡಿದ್ದಾರೆ. ಕ್ಯಾಬ್ ಹತ್ತಿ ಕುಳಿತ ಬೆನ್ನಲ್ಲೇ ಚಾಲಕನ ರ್ಯಾಶ್ ಡ್ರೈವಿಂಗ್ ಆರಂಭಗೊಂಡಿದೆ. ಸಂಧಿ, ಸಿಗ್ನಲ್ ಜಂಪ್ ಮಾಡುತ್ತಾ, ರಾಂಗ್ ಸೈಡ್ ಮೂಲಕ ಸಾಗುತ್ತಾ ಚಾಲಕ ಡ್ರೈವಿಂಗ್ ಮಾಡಿದ್ದಾನೆ. ಇದರ ನಡುವೆ ಬೇರೆ ವಾಹನಕ್ಕೆ ಸಣ್ಣದಾಗಿ ಡಿಕ್ಕಿ ಹೊಡೆದಿದೆ. ಬಳಿಕ ಈತ ನಿಲ್ಲಿಸಿಲ್ಲ. ವೇಗವಾಗಿ ಸಾಗುತ್ತಿದ್ದ ಈ ಕಾರನ್ನು ಟ್ರಾಫಿಕ್ ಪೊಲೀಸರು ನಿಲ್ಲಿಸಲು ಸೂಚಿಸಿದ್ದಾರೆ.
ಪೊಲೀಸರು ನಿಲ್ಲಿಸಲು ಸೂಚಿಸಿದರೂ ಕ್ಯಾಬ್ ಚಾಲಕ ಕಾರು ನಿಲ್ಲಿಸಿಲ್ಲ. ಮತ್ತಷ್ಟು ವೇಗವಾಗಿ ರ್ಯಾಶ್ ಡ್ರೈವಿಂಗ್ ಮಾಡಿದ್ದಾನೆ. ಪರಿಸ್ಥಿತಿ ಕೈಮೀರು ಹಂತಕ್ಕೆ ಹೋಗಿದೆ. ಪೊಲೀಸರು ತನ್ನನ್ನು ಹಿಂಬಾಸಿಕೊಂಡು ಬಂದರೂ ಸಿಗಬಾರದು ಎಂದು ಅತೀ ವೇಗವಾಗಿ ಕಾರು ಡ್ರೈವಿಂಗ್ ಮಾಡಿದ್ದಾನೆ. ಸಿಕ್ಕ ಸಿಕ್ಕ ಕಡೆಯಿಂದ ಕಾರು ಚಲಾಯಿಸಿಕೊಂಡು ಸಾಗಿದ್ದಾನೆ. ಇತ್ತ ಪತಿ ಪತ್ನಿ ಹಾಗೂ ಮಗು ಭಯಭೀತಗೊಂಡಿದ್ದಾರೆ. ಮಗು ಅಳಲು ಆರಂಭಿಸಿದೆ.ಇತ್ತ ಪ್ರಯಾಣಿಕ ಕಾರು ಚಾಲಕನ ಬಳಿ ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.ತಾನು ಪೊಲೀಸರ ಜೊತೆ ಮಾತನಾಡುತ್ತೇನೆ. ದಂಡ ಬೇಕಿದ್ದರೆ ಕಟ್ಟುತ್ತೇನೆ. ಮಗು ಭಯಗೊಂಡಿದೆ.ಈ ರೀತಿ ರ್ಯಾಶ್ ಡ್ರೈವಿಂಗ್ ಮಾಡಬೇಡಿ ಎಂದು ಮನವಿ ಮಾಡಿದರೂ ಚಾಲಕ ಕೇಳಿಲ್ಲ.
ಚಾಲಕನ ರ್ಯಾಶ್ ಡ್ರೈವಿಂಗ್ ಪ್ರಯಾಣಿಕರ ಆತಂಕ ಹೆಚ್ಚಿಸಿದೆ. ತಮ್ಮನ್ನು ಇಳಿಸಿ ಬಿಡು ಎಂದು ಚಾಲಕನ ಬಳಿ ಮನವಿ ಮಾಡಿದ್ದಾರೆ. ನಿಮ್ಮನ್ನು ಇಳಿಸಿದರೆ ನಾನು ಪೊಲೀಸರಿಗೆ ಸಿಕ್ಕಿ ಬೀಳುತ್ತೇನೆ ಎಂದು ಚಾಲಕನ ಮತ್ತಷ್ಟು ವೇಗವಾಗಿ ತೆರಳಿದ್ದಾನೆ. ಅದೆಷ್ಟೇ ಬೇಡಿಕೊಂಡರು ಪ್ರಯೋಜವಾಗಿಲ್ಲ. ಈ ಕ್ಯಾಬ್ ಪ್ರಯಾಣ ನೆನೆಸಿಕೊಂಡರೂ ಈ ಕುಟುಂಬ ಬೆಚ್ಚಿ ಬೀಳುತ್ತಿದೆ.
ಈ ಘಟನೆಯ ಕೆಲ ವಿಡಿಯೋವನ್ನು ಕುಟುಂಬ ರೆಕಾರ್ಡ್ ಮಾಡಿದೆ. ಈ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದೆ. ಈ ವಿಡಿಯೋ ಕೆಲವೇ ಕ್ಷಣದಲ್ಲಿ ಭಾರಿ ವೈರಲ್ ಆಗಿದೆ. ವಿಡಿಯೋ ಮಾಹಿತಿ ಸಿಗುತ್ತಿದ್ದಂತೆ ಪೋಲೀಸರು ಕಾರ್ಯಪ್ರವೃತ್ತರಾಗಿದ್ದಾರೆ. ತಕ್ಷಣವೇ ಕ್ಯಾಬ್ ಪತ್ತೆ ಹಚ್ಚಿ ಚಾಲಕನ ವಶಕ್ಕೆ ಪಡೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ