ಭಾರತದಿಂದ ಹೊರಟ ವಿಮಾನ ಅಫ್ಘಾನಿಸ್ತಾನದಲ್ಲಿ ಪತನ: ನಾಗರಿಕ ವಿಮಾನ ಸಚಿವಾಲಯ ಹೇಳಿದ್ದೇನು..

By BK AshwinFirst Published Jan 21, 2024, 4:41 PM IST
Highlights

ಇಂದು ಬೆಳಗ್ಗೆ ಅಫ್ಘಾನಿಸ್ತಾನದಲ್ಲಿ ಪತನಗೊಂಡ ವಿಮಾನವು ಭಾರತೀಯ ವಿಮಾನವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸ್ಪಷ್ಟನೆ ನೀಡಿದೆ. 

ನವದೆಹಲಿ (ಜನವರಿ 21, 2024): ದೆಹಲಿಯಿಂದ ಮಾಸ್ಕೋಗೆ ಹೊರಟಿದ್ದ ಎಂದು ಹೇಳಲಾದ ವಿಮಾನವೊಂದು ಅಫ್ಘಾನಿಸ್ತಾನದಲ್ಲಿ ಪತನವಾಗಿದೆ. ಹಾಗೂ, ಈ ವಿಮಾನ ಭಾರತದ್ದೆಂದು ಅಫ್ಘಾನಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದವು. ಈ ಸಂಬಂಧ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

ಇಂದು ಬೆಳಗ್ಗೆ ಅಫ್ಘಾನಿಸ್ತಾನದಲ್ಲಿ ಪತನಗೊಂಡ ವಿಮಾನವು ಭಾರತೀಯ ವಿಮಾನವಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ. ಅಫ್ಘಾನಿಸ್ತಾನದಲ್ಲಿ ಇದೀಗ ಸಂಭವಿಸಿದ ದುರದೃಷ್ಟಕರ ವಿಮಾನ ಅಪಘಾತವು ಭಾರತೀಯ ನಿಗದಿತ ವಿಮಾನ ಅಥವಾ ನಿಗದಿತವಲ್ಲದ (NSOP) / ಚಾರ್ಟರ್ ವಿಮಾನವಲ್ಲ. ಇದು ಮೊರಕ್ಕನ್ ನೋಂದಾಯಿತ ಸಣ್ಣ ವಿಮಾನವಾಗಿದೆ. ಹಾಗೂ, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ ಎಂದು X ನಲ್ಲಿನ ಪೋಸ್ಟ್ ಮೂಲಕ ಸ್ಪಷ್ಟನೆ ನೀಡಿದೆ.

ಇದನ್ನು ಓದಿ: ನಿಮಗೆ ಗೊತ್ತೇ? ವಿಮಾನ 2 ಗಂಟೆ ತಡವಾದರೆ ಊಟ, 24 ಗಂಟೆ ತಡವಾದರೆ ವಸತಿ ಕೊಡಬೇಕು!

ಈ ಮಧ್ಯೆ, ರಷ್ಯಾದ ವಾಯುಯಾನ ಅಧಿಕಾರಿಗಳು 6 ಜನರುಳ್ಳ ರಷ್ಯಾದ - ನೋಂದಾಯಿತ ವಿಮಾನವಾಗಿದ್ದು, ಹಿಂದಿನ ರಾತ್ರಿ ಅಫ್ಘಾನಿಸ್ತಾನದ ಮೇಲಿನ ರಾಡಾರ್‌ನಿಂದ ಕಣ್ಮರೆಯಾಗಿತ್ತು. ಈ ಬಗ್ಗೆ ಸ್ಥಳೀಯ ಅಫ್ಘಾನ್ ಪೊಲೀಸರು ಅಪಘಾತದ ವರದಿಗಳು ಬಂದಿವೆ ಎಂದು ತಿಳಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

1978 ರಲ್ಲಿ ತಯಾರಿಸಲಾದ ಫ್ರೆಂಚ್ ನಿರ್ಮಿತ ಡಸಾಲ್ಟ್ ಫಾಲ್ಕನ್ 10 ಜೆಟ್‌ನಲ್ಲಿ ಭಾರತದಿಂದ ಉಜ್ಬೇಕಿಸ್ತಾನ್ ಮೂಲಕ ಮಾಸ್ಕೋಗೆ ಪ್ರಯಾಣಿಸುತ್ತಿದ್ದ ವಿಮಾನವು ಚಾರ್ಟರ್ ಆಂಬ್ಯುಲೆನ್ಸ್ ವಿಮಾನವಾಗಿದೆ ಎಂದು ರಷ್ಯಾದ ವಾಯುಯಾನ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ

ಭಾರತದ ಮೇಲೆ ಯಾಕಿಷ್ಟು ದ್ವೇಷ? HAL ವಿಮಾನ ನಿರಾಕರಿಸಿದ ಮುಯಿಝು; ಹಾರಿಹೋದ ಮಾಲ್ಡೀವ್ಸ್‌ ಬಾಲಕನ ಪ್ರಾಣ ಪಕ್ಷಿ

ಚೀನಾ, ತಜಕಿಸ್ತಾನ್ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಬಡಾಕ್ಷನ್ ಪ್ರಾಂತ್ಯದಲ್ಲಿ ವಿಮಾನವು ಪತನಗೊಂಡಿದೆ. ಆದರೆ ಅಪಘಾತದ ನಿಖರವಾದ ಸ್ಥಳ ತಿಳಿದಿಲ್ಲ ಎಂದು ಸ್ಥಳೀಯ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ AFP ವರದಿ ಮಾಡಿದೆ.

ವಿಮಾನ ಪತನಗೊಂಡಿದೆ, ಆದರೆ ಸ್ಥಳ ಇನ್ನೂ ತಿಳಿದಿಲ್ಲ. ನಾವು ತಂಡಗಳನ್ನು ಕಳುಹಿಸಿದ್ದೇವೆ, ಆದರೆ ಅವರು ಇನ್ನೂ ವಾಪಸ್‌ ಬಂದಿಲ್ಲ ಎಂದು ಪ್ರಾಂತೀಯ ಮಾಹಿತಿ ವಿಭಾಗದ ಮುಖ್ಯಸ್ಥ ಜಬಿಹುಲ್ಲಾ ಅಮಿರಿ ಹೆಚ್ಚಿನ ವಿವರಗಳನ್ನು ನೀಡದೆ AFP ಗೆ ತಿಳಿಸಿದ್ದು, ಬೆಳಿಗ್ಗೆ ಸ್ಥಳೀಯ ಜನರು ನಮಗೆ ಮಾಹಿತಿ ನೀಡಿದರು ಎಂದೂ ಹೇಳಿದ್ದಾರೆ.

ಹಿಂದೂ ಕುಶ್‌ ಪರ್ವತ ಶ್ರೇಣಿಗೆ ಸೇರಿದ ಪ್ರದೇಶದಲ್ಲಿ ಘಟನೆ ನಡೆದಿದೆ ಎಂದೂ ಹೇಳಲಾಗಿದೆ.  

click me!