ಏರ್‌ ಇಂಡಿಯಾ ಅಪಘಾತಕ್ಕೆ ಪೈಲಟ್‌ ಹೊಣೆಯಲ್ಲ: ಸುಪ್ರೀಂ

Kannadaprabha News   | Kannada Prabha
Published : Nov 08, 2025, 04:47 AM IST
Air India

ಸಾರಾಂಶ

ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್‌ಗಳು ಕಾರಣರಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಜೊತೆಗೆ ಪೈಲಟ್‌ ಸುಮಿತ್‌ ಸಬರ್ವಾಲ್‌ ಅವರ ತಂದೆ 91 ವರ್ಷದ ಪುಷ್ಕರಾಜ್‌ ಅವರಿಗೆ, ದೂಷಣೆಯ ಭಾರವನ್ನು ನೀವು ಹೊರಬೇಡಿ ಎಂದು ಸಾಂತ್ವನ ಹೇಳಿದೆ.

ನವದೆಹಲಿ : ಜೂನ್‌ನಲ್ಲಿ ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತಕ್ಕೆ ಪೈಲಟ್‌ಗಳು ಕಾರಣರಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಜೊತೆಗೆ ಪೈಲಟ್‌ ಸುಮಿತ್‌ ಸಬರ್ವಾಲ್‌ ಅವರ ತಂದೆ 91 ವರ್ಷದ ಪುಷ್ಕರಾಜ್‌ ಸಭರ್ವಾಲ್‌ ಅವರಿಗೆ, ದೂಷಣೆಯ ಭಾರವನ್ನು ನೀವು ಹೊರಬೇಡಿ ಎಂದು ಸಾಂತ್ವನ ಹೇಳಿದೆ.

ಸಾಂತ್ವನ ಏಕೆ?:

ದುರಂತ ಬಳಿಕ ಪ್ರಾಥಮಿಕ ತನಿಖಾ ವರದಿಯನ್ನು ಆಧರಿಸಿ ಅಮೆರಿಕದ ವಾಲ್‌ ಸ್ಟ್ರೀಟ್‌ ಜರ್ನಲ್‌ ಪತ್ರಿಕೆಯು ಅಪಘಾತಕ್ಕೆ ಪೈಲಟ್‌ ಕಾರಣ ಎಂದು ವರದಿ ಪ್ರಕಟಿಸಿದ್ದನ್ನು ಸುಮೀತ್‌ ಅವರ ತಂದೆ ಸುಪ್ರೀಂ ಗಮನಕ್ಕೆ ತಂದರು.

ಅಮೆರಿಕದ ವರದಿ ಭಾರತದ ವಿರುದ್ಧ ಪೂರ್ವಗ್ರಹಪೀಡಿತ

ಇದಕ್ಕೆ ಪ್ರತಿಕ್ರಿಯಿಸಿದ ದ್ವಿಸದಸ್ಯ ಪೀಠ, ‘ಅಮೆರಿಕದ ವರದಿ ಭಾರತದ ವಿರುದ್ಧ ಪೂರ್ವಗ್ರಹಪೀಡಿತವಾಗಿದೆ. ಎಎಐಬಿ ನಡೆಸಿದ ತನಿಖೆಯಲ್ಲಿ ಪೈಲಟ್‌ ಕಾರಣ ಎಂದು ಎಲ್ಲಿಯೂ ಹೇಳಿಲ್ಲ. ಅಲ್ಲದೇ ಅಲ್ಲಿ ಪೈಲಟ್‌ಗಳ ಸಂಭಾಷಣೆಯನ್ನು ಮಾತ್ರವೇ ತಿಳಿಸಿದೆ. ಅಲ್ಲದೇ ಇದೊಂದು ಅಪಘಾತ. ಇದು ಉದ್ದೇಶಪೂರ್ವಕ ಕೃತ್ಯವಲ್ಲ. ಪೈಲಟ್‌ಗಳು ಕಾರಣರಲ್ಲ, ಇದರ ದೂಷನೆಯನ್ನು ನೀವು ಹೊರಬೇಡಿ’ ಎಂದು ಸಮಾಧಾನ ಮಾಡಿತು. ಜೊತೆಗೆ ಕೇಂದ್ರ ಸರ್ಕಾರ, ಡಿಜಿಸಿಎ ಮತ್ತು ಎಎಐಬಿಗೆ ನೋಟಿಸ್‌ ನೀಡಿತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುರುಷರ ಈ ವರ್ತನೆ ಬಗ್ಗೆ ಹೆಣ್ಣಿಗೆ ಮಾತ್ರವಲ್ಲ ಮನೆಯ ಸಾಕು ಬೆಕ್ಕಿಗೂ ಗೊತ್ತು....!
ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ