
ಜಕಾರ್ತಾ(ಮಾ.11) ಕಾರು ಪ್ರಯಾಣದ ವೇಳೆ ಒಂದು ಸೆಕೆಂಡ್ ನಿದ್ದೆಗೆ ಜಾರಿದರೂ ಅಪಾಯದ ತೀವ್ರತೆ ಊಹಿಸಲು ಅಸಾಧ್ಯ. ಇದೀಗ 153 ಪ್ರಯಾಣಿಕರನ್ನು ಹೊತ್ತ ವಿಮಾನ ಟೇಕ್ ಆಪ್ 36 ಸಾವಿರ ಅಡಿಗಳ ಎತ್ತರದಲ್ಲಿ ಸಾಗುತ್ತಿತ್ತು. ಈ ವೇಳೆ ಪೈಲೆಟ್ ಹಾಗೂ ಕೋ ಪೈಲೆಟ್ ಇಬ್ಬರೂ ನಿದ್ದೆಗೆ ಜಾರಿದ್ದಾರೆ. ಇತ್ತ ವಿಮಾನದ ಇತರ ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಇದರ ಸುಳಿವೇ ಇಲ್ಲ. ವಿಮಾನ ಸಾಗಿದೆ. ಬರೋಬ್ಬರಿ 28 ನಿಮಿಷಗಳ ಬಳಿಕ ಇಬ್ಬರಿಗೂ ಎಚ್ಚರವಾಗಿದೆ. ತಕ್ಷಣವೇ ಗಾಬರಿಗೊಂಡಿದ್ದಾರೆ. ಅಷ್ಟರಲ್ಲೆ ವಿಮಾನ ಮಾರ್ಗ ಬದಲಿಸಿದೆ. ಯಾವುದೋ ದಿಕ್ಕಿನಲ್ಲಿ ಇಳಿಮುಖವಾಗಿ ಸಾಗುತ್ತಿದ್ದ ವಿಮಾನವನ್ನು ತಕ್ಷಣಕ್ಕೆ ನಿಯಂತ್ರಣಕ್ಕೆ ತೆಗೆದು ಲ್ಯಾಂಡಿಂಗ್ ಮಾಡಿದ ಘಟನೆ ಇಂಡೋನೇಷಿಯಾದ ಜಕಾರ್ತದಲ್ಲಿ ನಡೆದಿದೆ. ಈ ಘಟನೆ ಕುರಿತು ಇಂಡೋನೇಷಿಯಾ ಸರ್ಕಾರ ತನಿಖೆಗೆ ಆದೇಶಿಸಿದೆ.
ಇಂಡೋನೇಷಿಯಾದ BTK6723 ವಿಮಾನ ಪ್ರಯಾಣಿಕರನ್ನು ಹೊತ್ತು ಸೌತ್‌ವಸ್ಟ್ ಸುಲವಾಸಿಯ ಕೆಂದಾರಿಯಿಂದ ಟೇಕ್ ಆಫ್ ಆಗಿತ್ತು. ವಿಮಾನ 36 ಸಾವಿರ ಅಡಿ ಎತ್ತರದಲ್ಲಿ ಸಾಗುತ್ತಿತ್ತು. ಇಂಡೋನೇಷಿಯಾ ರಾಜಧಾನಿ ಜಕಾರ್ತದಲ್ಲಿ ಲ್ಯಾಂಡ್ ಆಗಬೇಕಿತ್ತು. ವಿಮಾನ ಸಾಗುತ್ತಿದ್ದಂತೆ ಕೋ ಪೈಲೆಟ್ 30 ನಿಮಿಷ ನಿದ್ದೆ ಮಾಡುವುದಾಗಿ ಪೈಲೆಟ್‌ಗೆ ತಿಳಿಸಿದ್ದಾನೆ. ಇದಕ್ಕೆ ಪೈಲೆಟ್ ಒಪ್ಪಿಗೆ ಸೂಚಿಸಿದ್ದಾನೆ. ಆದರೆ ಕೋ ಪೈಲೆಟ್ ನಿದ್ದಿಗೆ ಜಾರಿದ 2 ನಿಮಿಷದಲ್ಲಿ ಪೈಲೆಟ್‌ಗೂ ನಿದ್ದೆ ಆವರಿಸಿದೆ.
MH370 ವಿಮಾನ ನಾಪತ್ತೆಯಲ್ಲ, ಸಾಮೂಹಿಕ ಹತ್ಯೆಗೆ ಪೈಲೆಟ್ ಝಾಹರಿ ಅಹಮ್ಮದ್ ನಡೆಸಿದ ಕೃತ್ಯ; ತಜ್ಞರು
ಜಕಾರ್ತ ಕಡೆಗೆ ಸಾಗುತ್ತಿದ್ದ ವಿಮಾನ ಬೇರೆ ದಿಕ್ಕಿನಲ್ಲಿ ಸಾಗಿದೆ. 36 ಸಾವಿರ ಅಡಿ ಎತ್ತರಿಂದ ವಿಮಾ ಇಳಿಮುಖವಾಗಿ ಸಾಗತೊಡಗಿದೆ. 28 ನಿಮಿಷಗಳ ಬಳಿಕ ಪೈಲೆಟ್ ಎಚ್ಚರಗೊಂಡಿದ್ದಾನೆ. ಈ ವೇಳೆ ವಿಮಾನ ರೂಟ್ ಬೇರೆ ಎಂದು ಗೊತ್ತಾಗಿದೆ. ವಿಮಾನ ಇಳಿಮುಖವಾಗುತ್ತಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾನೆ. ಇತ್ತ ಕೋ ಪೈಲೆಟ್ ಕೂಡ ಎಚ್ಚರಗೊಂಡಿದ್ದಾನೆ.
2 ಗಂಟೆ 35 ನಿಮಿಷಗಳ ಬಳಿಕ ವಿಮಾನ ಜಕಾರ್ತದಲ್ಲಿ ಲ್ಯಾಂಡ್ ಮಾಡಲಾಗಿದೆ. ವಿಮಾನ ಸಿಬ್ಬಂದಿ ಸೇರಿದಂತೆ 153 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಸರಿಸುಮಾರು ಅರ್ಧಗಂಟೆ ವಿಮಾನ ತನ್ನಷ್ಟಕ್ಕೆ ಆಗಸದಲ್ಲಿ ಹಾರಾಡಿದೆ. ಈ ವೇಳೆ ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ. ಈ ಘಟನೆ ಜನವರಿ 25 ರಂದು ನಡೆದಿತ್ತು. ವಿಮಾನ ಲ್ಯಾಂಡ್ ಆದ ಬೆನ್ನಲ್ಲೇ ಸರ್ಕಾರ ತನಿಖೆಗೆ ಆದೇಶಿಸಿತ್ತು. ಇದೀಗ ತನಿಖಾ ವರದಿ ಬಹಿರಂಗವಾಗಿದೆ.
ಇಂಡಿಗೋ ಪೈಲಟ್‌ಗೆ ಹಲ್ಲೆ ಮಾಡಿದ ವ್ಯಕ್ತಿ ಹನಿಮೂನ್‌ಗಾಗಿ ಗೋವಾಗೆ ಹೋಗ್ತಿದ್ದ!
ಪತ್ನಿ ಮಗುವಿಗೆ ಜನ್ಮ ನೀಡಿದ್ದ ಕಾರಣ ಪೈಲೆಟ್ ಆಸ್ಪತ್ರೆಯಲ್ಲಿ ನಿದ್ದೆ ಇಲ್ಲದೆ ಕಳೆದಿದ್ದಾನೆ. ಮಗು ರಾತ್ರಿ ಎಚ್ಚರವಾಗುತ್ತಿದ್ದ ಕಾರಣ ಪತಿ ನೋಡಿಕೊಂಡಿದ್ದಾನೆ. ಹೀಗಾಗಿ ಕೆಲ ದಿನಗಳಿಂದ ನಿದ್ದೆ ಇಲ್ಲದೆ ವಿಮಾನ ಪ್ರಯಾಣದಲ್ಲಿ ನಿದ್ದೆಗೆ ಜಾರಿದ್ದಾನೆ ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ