ಪಾಠ ಮಾಡ್ತಾರಾ ಧೋನಿ ? MSDಗೆ ಟೀಚರ್ ಜಾಬ್..?

By Suvarna News  |  First Published Jul 3, 2021, 5:51 PM IST
  • ಶಾರ್ಟ್‌ಲಿಸ್ಟ್‌ನಲ್ಲಿ ಎಂ.ಎಸ್ ಧೋನಿ ಹೆಸರು
  • ಪಾಠ ಮಾಡ್ತಾರಾ ಧೋನಿ ?

ರಾಯ್‌ಪುರ(ಜು.03): ಛತ್ತೀಸ್‌ಗಡದಲ್ಲಿ 14850 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು ಅಭ್ಯರ್ಥಿಗಳು ಆಕ್ರೋಶಗೊಂಡಿದ್ದಾರೆ. ರಾಜ್ಯದ ರಾಜಧಾನಿ ರಾಯ್‌ಪುರದಲ್ಲಿ ಪ್ರತಿಭಟನೆಗಳು ನಡೆದಿವೆ. ಹಾಗೆಯೇ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಜನರು ಒತ್ತಾಯಿಸಿದ್ದಾರೆ.

ಇದರ ನಡುವೆ ಒಂದು ವಿಚಿತ್ರ ಪ್ರಕರಣವೂ ಮುನ್ನೆಲೆಗೆ ಬಂದಿದೆ. ಮಹೇಂದ್ರ ಸಿಂಗ್ ಧೋನಿ ರಾಯ್‌ಪುರದಲ್ಲಿ ಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಅದೂ ಸಾಲದೆಂಬಂತೆ ಅರ್ಜಿದಾರನು ತನ್ನ ತಂದೆಯ ಹೆಸರನ್ನು ಸಚಿನ್ ತೆಂಡೂಲ್ಕರ್ ನೀಡಿದ್ದಾನೆ.

Latest Videos

undefined

ಕಷ್ಟಪಟ್ಟು ಕೆಲ್ಸ ಮಾಡಿ, ಸರ್ಕಾರ ಎಲ್ಲವನ್ನೂ ಕೊಡೋಕಾಗಲ್ಲ: ಹೈಕೋರ್ಟ್

ಒಂದು ಕುಟುಂಬದಲ್ಲಿ ಇಬ್ಬರು ಹೆಸರಾಂತ ಕ್ರಿಕೆಟ್ ತಾರೆಗಳ ಹೆಸರುಗಳು ಹೊಂದಿಕೆಯಾಗುವುದರಿಂದ ಅಪ್ಲಿಕೇಶನ್ ನಕಲಿ ಎಂಬುದು ಸ್ಪಷ್ಟವಾಗಿದೆ. ಮಹೇಂದ್ರ ಸಿಂಗ್ ಧೋನಿ ಎಂದು ಕರೆಯಲ್ಪಡುವವರನ್ನು ಸಂದರ್ಶನಕ್ಕಾಗಿ ಅಧಿಕಾರಿಗಳು ಆಯ್ಕೆ ಮಾಡಿದ್ದಾರೆ. ಅರ್ಜಿದಾರರು ಸಂದರ್ಶನಕ್ಕೆ ಹಾಜರಾಗದಿದ್ದಾಗ ಈ ವಿಷಯವು ಹೆಚ್ಚಿನ ಗಮನ ಸೆಳೆದಿದೆ.

ಆಯ್ದ 15 ಅರ್ಜಿದಾರರನ್ನು ಶುಕ್ರವಾರ (ಜೂನ್ 2) ಸಂದರ್ಶಿಸಬೇಕಾಗಿತ್ತು. ಮಹೇಂದ್ರ ಸಿಂಗ್ ಧೋನಿ ತಲುಪದಿದ್ದಾಗ ಅಧಿಕಾರಿಗಳಿಗೆ ಅನುಮಾನ ಬಂತು. ಇದು ಅಪ್ಲಿಕೇಶನ್‌ನಲ್ಲಿ ನೀಡಲಾದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದರೂ ಕಾಲ್ ಸಿಕ್ಕಿರಲಿಲ್ಲ. ಇದರಿಂದಾಗಿ ಅಧಿಕಾರಿಗಳಿಗೆ ಇದು ನಕಲಿ ಎಂದು ಸ್ಪಷ್ಟವಾಗಿದೆ.

ನಕಲಿ ‘ಎಂ.ಎಸ್.ಧೋನಿ’ ವಿರುದ್ಧ ಎಫ್‌ಐಆರ್ :

ಅರ್ಜಿಯ ಪ್ರಕಾರ, ಧೋನಿ ದುರ್ಗ್ ಜಿಲ್ಲೆಯ ಸಿಎಸ್‌ವಿಟಿಯು ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿ. ನಕಲಿ ಅರ್ಜಿದಾರರ ವಿರುದ್ಧ ಎಫ್ಐಆರ್ ದಾಖಲಿಸಲು ಅಧಿಕಾರಿಗಳು ಈಗ ಯೋಜಿಸುತ್ತಿದ್ದಾರೆ.

click me!