ನಿಷೇಧವಾದ್ರೂ ಚಿಂತೆ ಇಲ್ಲ, ಇದೇ ನೋಡಿ ಪಿಎಫ್ಐ ಸಂಸ್ಥೆಯ ಪ್ಲ್ಯಾನ್‌ ಬಿ!

By Santosh Naik  |  First Published Sep 22, 2022, 6:53 PM IST

ಪಿಎಫ್‌ಐಗೆ ಸಂಬಂಧಿಸಿದ ವ್ಯಕ್ತಿಗಳು ಮತ್ತು ಅವರ ಸ್ಥಳಗಳ ಮೇಲೆ ಎನ್‌ಐಎ ಗುರುವಾರ ದೊಡ್ಡ ಮಟ್ಟದ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಎನ್ ಐಎ ಮಾತ್ರವಲ್ಲದೆ ಇತರ ತನಿಖಾ ಸಂಸ್ಥೆಗಳೂ ಭಾಗಿಯಾಗಿವೆ. ಈ ಸಂದರ್ಭದಲ್ಲಿ 106 ಮಂದಿಯನ್ನು ಬಂಧಿಸಲಾಗಿದೆ. ಕೇರಳದಿಂದ ಇದುವರೆಗೆ ಗರಿಷ್ಠ 22 ಜನರನ್ನು ಬಂಧಿಸಲಾಗಿದೆ.
 


ನವದೆಹಲಿ (ಸೆ. 22): ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಜೊತೆ ಸಂಬಂಧ ಹೊಂದಿರುವ ಜನರು ಮತ್ತು ದೇಶಾದ್ಯಂತ ಅವರ ಸ್ಥಳಗಳ ಮೇಲೆ ಗುರುವಾರ ದೊಡ್ಡ ಮಟ್ಟದ ದಾಳಿ ನಡೆಸಿದೆ. ಈ ಕಾರ್ಯಾಚರಣೆಯಲ್ಲಿ ಎನ್ ಐಎ ಮಾತ್ರವಲ್ಲದೆ ಇತರ ತನಿಖಾ ಸಂಸ್ಥೆಗಳೂ ಭಾಗಿಯಾಗಿವೆ. ಈ ಕಾರ್ಯಾಚರಣೆಯ ಸಂದರ್ಭದಲ್ಲಿ, ಇದುವರೆಗೆ ಕೇರಳದಿಂದ 106 ಜನರನ್ನು ಬಂಧಿಸಲಾಗಿದೆ. ಇದೇ ವೇಳೆ ಪಿಎಫ್‌ಐನ ಪ್ಲಾನ್ ಬಿ ಕೂಡ ಬಹಿರಂಗವಾಗಿದೆ. ಹಾಗೇನಾದರೂ ಕೇಂದ್ರ ಸರ್ಕಾರ ಅಥವಾ ದೇಶದ ಕೋರ್ಟ್‌ಗಳು ಸಂಘಟನೆಯನ್ನು ಬ್ಯಾನ್‌ ಮಾಡಿದರೂ, ಈ ಸಂಸ್ಥೆಯ ನೀಚ ಯೋಜನೆಗಳು ಜನರಿಗೆ ತಲುಪಲು ಯಾವುದೇ ಸಮಸ್ಯೆ ಆಗಬಾರದು ಎನ್ನುವ ನಿಟ್ಟಿನಲ್ಲಿ ತನ್ನೆಲ್ಲಾ ಶ್ರಮವನ್ನು ಈಗಾಗಲೇ ವಹಿಸಿದೆ. ಹೊಸ ಹೊಸ ಯೋಚನೆ ಹಾಗೂ ಯೋಜನೆಗಳ ಮೂಲದ ದೇಶದಲ್ಲಿ ತನ್ನ ಪಿತೂರಿಗಳನ್ನ ನಡೆಸುತ್ತಲೇ ಇರಲು ಪ್ಲ್ಯಾನ್‌ ರೂಪಿಸಿದೆ. ಒಂದಲ್ಲಾ ಒಂದು ದಿನ ದೇಶದಲ್ಲಿ ಸಂಘಟನೆಯನ್ನು ಬ್ಯಾನ್‌ ಮಾಡಿಯೇ ಮಾಡುತ್ತಾರೆ ಎನ್ನುವ ಅಂದಾಜಿನಲ್ಲಿರುವ ಪಿಎಫ್‌ಐ ರನ್ನ ಕಾರ್ಯಸೂಚಿಯನ್ನು ಮುಂದುವರಿಸಲು ಅನೇಖ ಇತರ ಸಂಘಟನೆಗಳನ್ನು ರಚನೆ ಮಾಡಿದೆ. ಈ ವಿಷಯ ತಿಳಿದಿರುವ ತನಿಖಾ ಸಂಸ್ಥೆಗಳು ಅ ಸಂಘಟನೆಗಳ ಲಿಂಕ್‌ಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಸಿಕ್ಕಿರುವ ಮಾಹಿತಿಯ ಪ್ರಕಾರ, ಪಿಎಫ್‌ಐ ಒಂದಲ್ಲ ಎರಡಲ್ಲ ಅರ್ಧ ಡಜನ್‌ಗಿಂತಲೂ ಹೆಚ್ಚು ಸಂಸ್ಥೆಗಳನ್ನು ರಚಿಸಿದೆ. ಆಂತರಿಕ ಭದ್ರತಾ ಕಚೇರಿಯ ಉನ್ನತ ಮಟ್ಟದ ದಾಖಲೆಗಳ ಪ್ರಕಾರ, ಸರ್ಕಾರಿ ಸಂಸ್ಥೆಗಳ ಮೇಲಿನ ನಿರ್ಬಂಧಗಳನ್ನು ತಪ್ಪಿಸಲು ಮತ್ತು ಭಯೋತ್ಪಾದಕ ಕಾರ್ಯಸೂಚಿಗಳನ್ನು ಹರಡಲು ಈ ಸಂಸ್ಥೆಗಳನ್ನು ರಚಿಸಲಾಗಿದೆ.


ಏಜೆನ್ಸಿಗಳ ಕಣ್ಗಾವಲು ತಪ್ಪಿಸಲು ಸಾಕಷ್ಟು ಭಿನ್ನ ವಿಂಗ್‌ಗಳು: ತನಿಖಾ ಸಂಸ್ಥೆಗಳ ಕಣ್ಗಾವಲು ತಪ್ಪಿಸಿಕೊಳ್ಳಲು ಪಿಎಫ್‌ಐ ಸಾಕಷ್ಟು ಭಿನ್ನ ವಿಂಗ್‌ಗಳನ್ನು ರಚನೆ ಮಾಡಿದೆ. ಅದರಲ್ಲಿ ಪ್ರಮುಖವಾದವೆಂದರೆ, ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ ಅಥವಾ ಎಸ್‌ಡಿಪಿಐ (Social Democratic Party of India), ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (CFI), ನ್ಯಾಷನಲ್‌ ವುಮನ್ಸ್‌ ಫ್ರಂಟ್‌ (NWF), ಆಲ್‌ ಇಂಡಿಯಾ ಇಮಾಮ್‌ ಕೌನ್ಸಿಲ್‌ (AIIC), ಆಲ್‌ ಇಂಡಿಯಾ ಲೀಗಲ್‌ ಕೌನ್ಸಿಲ್‌ (AILC), ರಿಹಾಬ್‌ ಇಂಡಿಯಾ ಫೌಂಡೇಷನ್‌ (RIF), ನ್ಯಾಷನಲ್‌ ಕಾನ್ಫಡರೇಷನ್‌ ಆಫ್‌ ಹ್ಯೂಮನ್‌ ರೈಟ್‌ ಆರ್ಗನೈಜೇಷನ್‌ (NCHRO), ಸೋಷಿಯಲ್‌ ಡೆಮಾಕ್ರಟಿಕ್‌ ಟ್ರೇಡ್‌ ಯೂನಿಯನ್‌ (SDTU) ಮತ್ತು ಎಚ್‌ಆರ್‌ಡಿಎಫ್‌ (HRDF) ಎನ್ನುವ ವಿಭಾಗಗಳನ್ನು ಹೊಂದಿದೆ.

ಕೇರಳದಲ್ಲಿ ಬಂದ್‌ಗೆ ಕರೆ ನೀಡಿದ ಪಿಎಫ್‌ಐ: ತನಿಖಾ ಸಂಸ್ಥೆಯ ದಾಳಿ ಮತ್ತು ಸದಸ್ಯರ ಬಂಧನಕ್ಕಾಗಿ ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕೇರಳದಲ್ಲಿ ಪಿಎಫ್‌ಐ ಮುಷ್ಕರಕ್ಕೆ ಕರೆ ನೀಡಿದೆ. ತಮ್ಮ ನಾಯಕರ ಬಂಧನವನ್ನು ವಿರೋಧಿಸಿ ರಾಜ್ಯದಲ್ಲಿ ಮುಷ್ಕರವನ್ನು ಘೋಷಿಸಲಾಗಿದೆ ಎಂದು ಪಿಎಫ್‌ಐ ನಾಯಕರು ಘೋಷಿಸಿದ್ದಾರೆ.

NIA Raid: ಪಿಎಫ್‌ಐ - ಉಗ್ರ ಸಂಘಟನೆಗಳ ನಂಟಿನ ಬಗ್ಗೆ ತನಿಖೆ: 30ಕ್ಕೂ ಹೆಚ್ಚು ಸ್ಥಳಗಳಲ್ಲಿ ಶೋಧ

ಅಪಾಯ ಏನು ಅನ್ನೋದನ್ನು ಸರ್ಕಾರ ತಿಳಿಸಬೇಕು: ಪಿಎಫ್‌ಐ ದಾಳಿಯ ಬಗ್ಗೆ ಸೀತಾರಾಂ ಯೆಚೂರಿ ಸರ್ಕಾರದ ವಿರುದ್ಧ ಟೀಕೆ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಯೆಚೂರಿ, ಈ ದಾಳಿ ಏಕೆ ಮಾಡಲಾಗುತ್ತಿದೆ? ಸರ್ಕಾರ ತಿಳಿಸಬೇಕು.  ಎನ್‌ಐಎ ದಾಳಿಗಳು ಸರಿ, ಆದರೆ ಏನು ಅಪಾಯ ಅನ್ನೋದನ್ನ ನಮಗೆ ಹೇಳಬೇಕು. ಪಿಎಫ್‌ಐನಿಂದ ಅಪಾಯ ಏನು ಎಂಬುದು ಯಾರಿಗೂ ತಿಳಿದಿಲ್ಲ. ಹೀಗಾಗಿ ಸರಕಾರ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದಿದ್ದಾರೆ.

Tap to resize

Latest Videos

ಜಂಟಿ ಆಕ್ಷನ್‌ ಟೀಮ್‌ ರಚನೆ, ವಿಧಾನಸಭೆ ಚುನಾವಣೆಗೂ ಮುನ್ನ ಪಿಎಫ್‌ಐ ಬ್ಯಾನ್‌?

ಪಿಎಫ್‌ಐನ ಕೊನೆಯ ಅಧ್ಯಾಯ: ಪಿಎಫ್‌ಐ ಕಚೇರಿಗಳ ಹಾಗೂ ಅವರ ಸದಸ್ಯರ ಮೇಲಿನ ಎನ್‌ಐಎ ದಾಳಿ ಹಾಗೂ ಬಂಧನಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಏರಿಕೆಯಾಗಿದೆ. ಪಿಎಫ್‌ಐ ದೇಶದಲ್ಲಿ ತನ್ನ ಸಂಘಟನೆಯನ್ನು ಮುಚ್ಚಬೇಕು ಅಲ್ಲಿಯವರೆಗೂ ಎನ್‌ಐಎ ಬಿಡುವುದಿಲ್ಲ ಎನ್ನುವ ಅಂಶ ಅದರ ಸಿದ್ಧತೆಗಳಿಂದಲೇ ಕೆಲವರಿಗೆ ಅರ್ಥವಾಗಿದೆ. ಪಿಎಫ್‌ಐ ಮೇಲೆ ಕ್ರಮ ಜರುಗಿದಾಗಲೆಲ್ಲಾ, ಅದೇ ರೀತಿಯ ಇನ್ನೊಂದು ಸಂಘಟನೆಯ ಮೂಲಕ ತನ್ನ ಮುಖವನ್ನು ತೋರುವ ಪ್ರಯತ್ನ ಮಾಡುತ್ತದೆ.  ಆದರೆ ಈಗ ತನಿಖಾ ಸಂಸ್ಥೆಯ ಬಳಿ ಅವರ ವಿರುದ್ಧ ಸಾಕಷ್ಟು ಪುರಾವೆಗಳಿವೆ. ಹಾಗಾಗಿ ದೊಡ್ಡ ಮಟ್ಟದಲ್ಲಿಯೇ ಸಂಘಟನೆಯನ್ನು ಬ್ಯಾನ್‌ ಮಾಡುವ ಪ್ರಯತ್ನ ನಡೆಯುತ್ತಿದೆ.

click me!