ತಮಿಳುನಾಡಲ್ಲಿ ಆ.14 ರಾತ್ರಿಯಿಂದ ಪೆಟ್ರೋಲ್‌ ಬೆಲೆ 3 ರು. ಇಳಿಕೆ

Published : Aug 14, 2021, 08:30 AM ISTUpdated : Aug 14, 2021, 08:37 AM IST
ತಮಿಳುನಾಡಲ್ಲಿ ಆ.14 ರಾತ್ರಿಯಿಂದ ಪೆಟ್ರೋಲ್‌ ಬೆಲೆ 3 ರು. ಇಳಿಕೆ

ಸಾರಾಂಶ

ಆಗಸ್ಟ್‌ 14ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಲೀಟರ್‌ಗೆ 3 ರು. ಕಡಿತ ಸರ್ಕಾರಕ್ಕೆ ವಾರ್ಷಿಕವಾಗಿ 1,160 ಕೋಟಿ ನಷ್ಟ

ಚೆನ್ನೈ(ಆ.14): ಪೆಟ್ರೋಲ್‌ ಬೆಲೆ 100 ರು. ದಾಟಿದ ಈ ಹೊತ್ತಿನಲ್ಲಿ ಜನಸಾಮಾನ್ಯರಿಗೆ ಅನುಕೂಲ ಒದಗಿಸಲು ತಮಿಳುನಾಡು ಸರ್ಕಾರ, ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಇದು ಆಗಸ್ಟ್‌ 14ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಲೀಟರ್‌ಗೆ 3 ರು. ಕಡಿತ ಮಾಡುವುದಾಗಿ ಸರ್ಕಾರ ಪ್ರಕಟಿಸಿದೆ.

ಶುಕ್ರವಾರ ತಮ್ಮ ಚೊಚ್ಚಲ ಬಜೆಟ್‌ ಮಂಡನೆ ವೇಳೆ ಈ ವಿಷಯ ಪ್ರಕಟಿಸಿದ ವಿತ್ತ ಮಂತ್ರಿ ಪಳನಿವೇಲ್‌ ತಂಗರಾಜನ್‌, ‘ನಮಮ್ಮ ಸರ್ಕಾರ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 3 ರು.ನಷ್ಟು ಕಡಿತಗೊಳಿಸಲಿದೆ. ಇದರಿಂದ ಪೆಟ್ರೋಲ್‌ ಬೆಲೆ ಲೀಟರ್‌ಗೆ 3 ರು. ಕಡಿಮೆಯಾಗಲಿದೆ. ಇದು ಕಾರ್ಮಿಕ ವರ್ಗಕ್ಕೆ ಹೆಚ್ಚಿನ ಅನುಕೂಲ ಒದಗಿಸಲಿದೆ. ಇದರಿಂದ ಸರ್ಕಾರಕ್ಕೆ ವಾರ್ಷಿಕವಾಗಿ 1,160 ಕೋಟಿ ನಷ್ಟವಾಗಲಿದೆ’ ಎಂದು ವಿವರಿಸಿದರು.

ದುಬೈನಿಂದ ಭಾರತದಲ್ಲಿರೋ ಮನೆ ನಿಯಂತ್ರಣ: ಪಾಲಿಕಾಬ್ HOHM ಅಟೋಮೇಶನ್‌ನಿಂದ ಸಾಕಾರ!

ಅಧಿಕಾರಕ್ಕೆ ಬಂದರೆ ಪೆಟ್ರೋಲ್‌ ಬೆಲೆ ಕಡಿಮೆ ಮಾಡುವುದಾಗಿ ಡಿಎಂಕೆ ಹೇಳಿತ್ತು. ಈ ವರ್ಷದ ಏಪ್ರಿಲ್‌ನಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಮುನ್ನಡೆ ಸಾಧಿಸಿದ ನಂತರ ಮುಖ್ಯಮಂತ್ರಿ ಎಂಕೆ ಸ್ಟಾಲಿನ್‌ರ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸರ್ಕಾರ ಮಂಡಿಸಿದ ಮೊದಲ ಬಜೆಟ್ ಇದಾಗಿದೆ.

ದೇಶಾದ್ಯಂತ ಇಂಧನ ಬೆಲೆಗಳು ಏರಿಕೆಯಾಗುತ್ತಿದ್ದು ಬಹುತೇಕ ರಾಜ್ಯಗಳಲ್ಲಿ ಪೆಟ್ರೋಲ್ ದರ 100 ರ ಗಡಿಯನ್ನು ದಾಟಿವೆ. ಸ್ಥಳೀಯ ತೆರಿಗೆಗಳಾದ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಮತ್ತು ಸರಕು ಶುಲ್ಕಗಳ ಆಧಾರದ ಮೇಲೆ ಇಂಧನ ಬೆಲೆ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ