ಸೋನಿಯಾಗೆ ಶಾಕ್‌ ಕೊಟ್ಟು ಕಾಂಗ್ರೆಸ್‌ ತೊರೆದ  ಹಿರಿಯ ನಾಯಕ

By Suvarna NewsFirst Published Mar 10, 2021, 6:28 PM IST
Highlights

ಕಾಂಗ್ರೆಸ್ ಗೆ ದೊಡ್ಡ ಆರಘಾತ/ ಪಕ್ಷ ತೊರೆದ ಪ್ರಮುಖ ನಾಯಕ/ ಕೇರಳ ವಿಧಾನಸಭೆ ಚುನಾವಣೆ ಸಮಯದಲ್ಲಿ ದೊಡ್ಡ ಶಾಕ್/ ಪಕ್ಷದಲ್ಲಿ ಗುಂಪುಗಾರಿಕೆ ಮನೆ ಮಾಡಿದೆ ಎಂದು ಆರೋಪಿಸಿ ಚಾಕೋ

ತಿರುವನಂತಪುರ/ ನವದೆಹಲಿ(ಮಾ. 10)  ಕೇರಳ ವಿಧಾನಸಭೆ ಚುನಾವಣೆ ಎದುರಿನಲ್ಲಿ ಇದ್ದು ಕಾಂಗ್ರೆಸ್ ಗೆ ದೊಡ್ಡ ಆಘಾತವಾಗಿದೆ. ಕೇರಳ ವಿಧಾನಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್ ಹಿರಿಯ ನಾಯಕ ಪಿಸಿ ಚಾಕೋ ಬುಧವಾರ ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ನಿರ್ಧಾರ ಪ್ರಕಟಿಸಿದ್ದಾರೆ.

ಉನ್ನತ ನಾಯಕರು ಗುಂಪುಗಾರಿಯಲ್ಲಿ ತೊಡಗಿದ್ದು ಪಕ್ಷ ತೊರೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ತಮ್ಮ ರಾಜೀನಾಮೆ ಪತ್ರ ಕಳುಹಿಸಿಕೊಟ್ಟಿದ್ದೇನೆ  ಎಂದು ಮಾಹಿತಿ ನೀಡಿದ್ದಾರೆ

ನಾನು ಕಳೆದ ಹಲವು ದಿನಗಳಿಂದ ಪಕ್ಷಕ್ಕೆ ರಾಜೀನಾಮೆ ನೀಡುವ ಬಗ್ಗೆ ಚಿಂತಿಸುತ್ತಿದ್ದೆ. ನಾನು ಕೇರಳದಿಂದ ಬಂದಿದ್ದೇನೆ, ಅಲ್ಲಿ ಯಾವುದೇ ಕಾಂಗ್ರೆಸ್ ಪಕ್ಷ ಇಲ್ಲ. ಕಾಂಗ್ರೆಸ್(ಐ) ಮತ್ತು ಕಾಂಗ್ರೆಸ್(ಎ) ಎಂಬ ಎರಡು ಪಕ್ಷಗಳಿದ್ದು, ಈ ಎರಡು ಪಕ್ಷಗಳ ಸಮನ್ವಯ ಸಮಿತಿಯಾಗಿದ್ದು ಕೆಪಿಸಿಸಿ ಕಾರ್ಯನಿರ್ವಹಿಸುತ್ತಿದೆ ಎಂದಿದ್ದಾರೆ.

ಬಿಜೆಪಿ 'ಪಾಲಿಟಿಕ್ಸ್'ನಲ್ಲಿ ಸಿಲುಕಿದ ದೀದಿ: ದೇವಸ್ಥಾನ ಭೇಟಿ ಬಳಿಕ ನಾಮಪತ್ರ ಸಲ್ಲಿಕೆ!

ಚಾಕೋ ಅವರು ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಮಾಜಿ ಸಂಸದ. ಈ ಹಿಂದೆ ದೆಹಲಿ ಕಾಂಗ್ರೆಸ್ ಉಸ್ತುವಾರಿಯಾಗಿ ಕಾರ್ಯಕನಿರ್ವಹಿಸಿದ್ದರು.   ಕೇರಳ ಕಾಂಗ್ರೆಸ್ ಮಟ್ಟಿಗೆ ಇದು ದೊಡ್ಡ ಹೊಡೆತವಾಗಿದೆ.  ರಾಹುಲ್ ಗಾಂಧಿ ಸಹ ಕೇರಳದ ವಯನಾಡ್  ಕ್ಷೇತ್ರವನ್ನೇ ಪ್ರತಿನಿಧಿಸುತ್ತಿದ್ದಾರೆ. 140 ಸದಸ್ಯ ಬಲದ ಕೇರಳ ವಿಧಾನಸಭೆಗೆ ಏಪ್ರಿಲ್ 6 ರಂದು ಚುನಾವಣೆ ನಡೆಯಲಿದೆ.

ಪಕ್ಷದಲ್ಲಿನ ಗುಂಪುಗಾರಿಕೆಯನ್ನು ಹೈಕಮಾಂಡ್ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ.  ಚುನಾವಣೆಗೆ ಅಭ್ಯರ್ಥಿಗಳನ್ನು ನಿರ್ಧರಿಸುವ ಸಮಿತಿಯ ಸದಸ್ಯರಾಗಿದ್ದಾಗ, ಯಾವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು ಎಂದು ತಿಳಿದಿರುವುದು ಉಮ್ಮನ್ ಚಾಂಡಿ ಮತ್ತು ರಮೇಶ್ ಚೆನ್ನಿಥಾಲಾ .  ಇಲ್ಲಿ ಯಾರ ಅಭಿಪ್ರಾಯಕ್ಕೂ  ಬೆಲೆ ನೀಡಲಾಗಿಲ್ಲ ಎಂದಿದ್ದಾರೆ.

ನಾವು 40-50 ವರ್ಷಗಳ ಹಿಂದೆ ಕಾಂಗ್ರೆಸ್ ಸೇರಿದ್ದು. ಅಂದಿನಿಂದ ಪರಿಸ್ಥಿತಿ ಹಾಗೆ ಇದೆ.  ಇನ್ನು ದಕ್ಷಿಣ ರಾಜ್ಯದಲ್ಲಿ ಬಿಜೆಪಿ ಯಾವುದೇ ವ್ಯತ್ಯಾಸವನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.

 ದುರದೃಷ್ಟವಶಾತ್, ಕಾಂಗ್ರೆಸ್ ಎಡಪಂಥೀಯರ ವಿರುದ್ಧ ಹೋರಾಡುತ್ತಿದೆ. ರಾಹುಲ್ ಗಾಂಧಿ ವಯನಾಡಿನಲ್ಲಿ ಎಡಪಂಥೀಯರ ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದಾಗ, ಎಡ ಮತ್ತು ಕಾಂಗ್ರೆಸ್ ಸೈದ್ಧಾಂತಿಕವಾಗಿ ಹೋಲುವ ಕಾರಣ ಮರುಪರಿಶೀಲಿಸುವಂತೆ ಕೇಳಲು ನಾನು ಅವರನ್ನು ಸಂಪರ್ಕಿಸಿದ್ದೆ ಎಂಬ ವಿಚಾರವನ್ನು ಹೇಳಲು ಮರೆಯಲಿಲ್ಲ.

I have quit Congress and sent my resignation to party's interim chief Sonia Gandhi: Senior Congress leader PC Chacko pic.twitter.com/YJsoZch1oE

— ANI (@ANI)
click me!