ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿದ್ದಾರೆ. ಈ ಮಸೂದೆ ಜಾರಿಗೂ ಮೊದಲೇ ಕ್ರಮ ಕೈಗೊಳ್ಳಲಾಗಿದೆ. 30 ವರ್ಷಗಳ ಹಳೇ ಅಕ್ರಮ ಮದರಸವನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಲಾಗಿದೆ.
ಪಾಟ್ನಾ(ಏ.13) ವಕ್ಫ್ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹಿ ಹಾಕಿದ್ದಾರೆ. ವಕ್ಫ್ ಕಾನೂನು ಜಾರಿ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಇದರ ನಡುವೆ ವಕ್ಫ್ ತಿದ್ದುಪಡಿ ಮಸೂದೆ ವಿರೋಧಿಸಿ ಸುಪ್ರೀಂ ಕೋರ್ಟ್‌ಗೆ 7ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದೆ. ದೇಶದ ಹಲವು ಭಾಗದಲ್ಲಿ ಭಾರಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಇದೀಗ ವಕ್ಫ್ ಹೊಸ ಕಾನೂನು ಅಡಿಯಲ್ಲಿ ಮೊದಲ ಕ್ರಮ ಕೈಗೊಳ್ಳಲಾಗಿದೆ. ಮಧ್ಯಪ್ರದೇಶದ ಪಾಟ್ನದಲ್ಲಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಅಕ್ರಮ ಮದರಸವನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಲಾಗಿದೆ.
ದೂರು ದಾಖಲಿಸಿದ್ದರೂ ಕ್ರಮ ವಿಳಂಬ
ಮಧ್ಯಪ್ರದೇಶದ ಪಾಟ್ನಾ ಜಿಲ್ಲೆಯ ಬಿಡಿ ಕಾಲೋನಿಯಲ್ಲಿ ಕಳೆದ 30 ವರ್ಷಗಳಿಂದ ಈ ಮದರಸಾ ಅಕ್ರವಾಗಿ ಕಾರ್ಯನಿರ್ವಹಿಸುತ್ತಿತ್ತು. ಈ ಕುರಿತು ದೂರು ದಾಖಲಾಗಿದ್ದರೂ ಯಾವುದೇ ಕ್ರಮ ಆಗಿರಲಿಲ್ಲ. ಆದರೆ ಕಳೆದ ವರ್ಷ ಈ ಪ್ರಕರಣವನ್ನು ಮಧ್ಯಪ್ರದೇಶ ಬಿಜೆಪಿ ಅಧ್ಯ ವಿಡಿ ಶರ್ಮಾ ಗಂಭೀರವಾಗಿ ಪರಿಗಣಿಸಿದ್ದರು. ಜೊತೆಗೆ ಕಾನೂನು ಹೋರಾಟವನ್ನು ಮಾಡಿದ್ದರು. ಇತ್ತ ಇದೇ ಬಿಡಿ ಕಾಲೋನಿಯ ಮುಸ್ಲಿಮ್ ಕುಟುಂಬವೊಂದು ಅಕ್ರಮ ಮಸೀದಿ ವಿರುದ್ದ ದೂರು ದಾಖಲಿಸಿತ್ತು. ಈ ದೂರಿನ ಆಧಾರದಲ್ಲಿ ಜಿಲ್ಲಾಧಿಕಾರಿಗಳು ಅಕ್ರಮ ಮದರಸಾಗೆ ಹಲವು ನೋಟಿಸ್ ನೀಡಿದ್ದರು.
ನಿಮಗೆ ಬೇಕಾದ ಉತ್ತರವನ್ನು ಕೇಂದ್ರ ಸರ್ಕಾರದಿಂದ ಪಡೆಯಬೇಕು: ಮಮತಾ ಬ್ಯಾನರ್ಜಿ
ಸುದೀರ್ಘ ಕಾನೂನು ಹೋರಾಟ
ಸರ್ಕಾರದ ಸ್ಥಳದಲ್ಲಿ ಈ ಮದರಸಾವನ್ನು ಅಕ್ರಮವಾಗಿ ನಿರ್ಮಾಣ ಮಾಡಲಾಗಿತ್ತು. ಸರ್ಕಾರದ ಜಮೀನಿನಲ್ಲಿ ಯಾವುದೇ ದಾಖಲೆ ಇಲ್ಲದೆ ಮದರಸಾ ನಿರ್ಮಾಣ ಮಾಡಿದ ವಿರುದ್ದ ಸುದೀರ್ಘ ಕಾನೂನು ಹೋರಾಟ ಕೂಡ ನಡೆದಿದೆ. ಪಂಚಾಯತ್ ಅನುಮತಿ ನೀಡಿದೆ, ಮುನ್ಸಿಪಲ್ ಕಾರ್ಪೋರೇಶನ್ ಅನುಮತಿ ನೀಡಿದೆ ಎಂದು ಹಲವು ವರ್ಷ ಪ್ರಕರಣ ಮುಂದೂಡಲಾಗಿತ್ತು. ಆದರೆ ಯಾವುದೇ ದಾಖಲೆ ಇಲ್ಲದೆ ಮದರಸ ಕಾರ್ಯನಿರ್ವಹಿಸುತ್ತಿತ್ತು.
ವಕ್ಫ್ ಮಸೂದೆ ಬೆನ್ನಲ್ಲೇ ಕ್ರಮ
ವಕ್ಫ್ ಮಸೂದೆಗೆ ರಾಷ್ಟ್ರಪತಿ ಅಂಕಿತ ಬೀಳುತ್ತಿದ್ದಂತೆ ಮದರಸಾ ನಿರ್ಮಾಣ ಮಾಡಿದ ಗುಂಪಿನಲ್ಲಿ ಆತಂಕ ಸೃಷ್ಟಿಯಾಗಿತ್ತು. ಹಳೇ ವಕ್ಫ್ ಕಾಯ್ದೆಯಡಿ ಜಮೀನು ಕಬ್ಜಾ ಮಾಡಲು ಅಸಾಧ್ಯವಾಗಿರುವ ಕಾರಣ ಮದರಸಾ ಅನಿವಾರ್ಯವಾಗಿ ಬಾಗಿಲು ಮುಚ್ಚಿದ್ದು ಮಾತ್ರವಲ್ಲ, ನೆಲಸಮ ಭೀತಿ ಎದುರಿಸಿತು. ಅಧಿಕಾರಿಗಳು ಈಗಾಗಲೇ ಹಲವು ನೋಟಿಸ್ ನೀಡಿದ ಕಾರಣ ಬುಲ್ಡೋಜರ್ ಮೂಲಕ ನೆಲಸಮಕ್ಕೆ ಮುಂದಾಗಿದ್ದರು.
वक्फ संशोधन अधिनियम का असर पन्ना में
अवैध रूप से बनी मदरसा को मदरसे संचालक ने स्वयं तोड़ने का काम चालू किया। pic.twitter.com/Wn90RkVYeG
ಸ್ವಯಂಪ್ರೇರಿತವಾಗಿ ಮದರಸಾ ನೆಲಸಮ
ಅಧಿಕಾರಿಗಳು ನೋಟಿಸ್ ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್. ಆದರೆ ವಕ್ಫ್ ಬಿಲ್ ಪಾಸ್ ಆದ ಬೆನ್ನಲ್ಲೇ ಮದರಸಾ ಸಮಿತಿಗೆ ಆತಂಕ ಎದುರಾಗಿತ್ತು. ಹೀಗಾಗಿ ಮದರಸಾ ಸಮಿತಿ ಸ್ವಯಂಪ್ರೇರಿತರಾಗಿ ಈ ಮದರಸಾವನ್ನು ಬುಲ್ಡೋಜರ್ ಮೂಲಕ ನೆಲಸಮಗೊಳಿಸಿದೆ.ಈ ಮೂಲಕ ಯಾವುದೇ ಅಡೆ ತಡೆ ಇಲ್ಲದೆ, ಸಂಘರ್ಷವಿಲ್ಲದೆ ಅಕ್ರಮ ಮದರಸಾ ನೆಲಸಮಗೊಂಡಿದೆ.
ವಿಡಿ ಶರ್ಮಾ ಪ್ರತಿಕ್ರಿಯೆ
ಮಧ್ಯಪ್ರದೇಶದ ಬಿಜೆಪಿ ಅಧ್ಯಕ್ಷ ವಿಡಿ ಶರ್ಮಾ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಮುಸ್ಲಿಮ್ ಕುಟುಂಬ ಈ ಕುರಿತು ದೂರು ನೀಡಿತ್ತು. ಬಳಿಕ ಕಾನೂನು ಹೋರಾಟ ಆರಂಭಗೊಂಡಿತ್ತು. ಇದೀಗ ಸ್ವಯಂ ಪ್ರೇರಿತರಾಗಿ ಮದರಸಾ ಕಮಿಟಿ ಮದರಸಾ ನೆಲಸಮಗೊಳಿಸಿದೆ. ಈ ರೀತಿ ಹಳೇ ವಕ್ಫ್ ಕಾನೂನು ಬಳಸಿಕೊಂಡು ಹಲೆವೆಡೆ ಜಮೀನು ಕಬ್ಜಾ ಮಾಡಲಾಗಿದೆ. ಇನ್ನು ಸಾಧ್ಯವಿಲ್ಲ ಎಂದು ವಿಡಿ ಶರ್ಮಾ ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆಯನ್ನು ಜಾರಿ ಮಾಡುವುದಿಲ್ಲ: ಮಮತಾ ಬ್ಯಾನರ್ಜಿ!