ಕೊರೋನಾಗೆ ಪತಂಜಲಿಯಿಂದ ಔಷಧ!| ಬಾಬಾ ರಾಮದೇವ್ ಆಪ್ತ ಬಾಲಕೃಷ್ಣ ಹೇಳಿಕೆ| ಆಯುರ್ವೇದ ಔಷಧದಿಂದ 14 ದಿನದಲ್ಲಿ ಸೋಂಕಿತರು ಗುಣಮುಖ| - ಔಷಧ ಶೇ.100ರಷ್ಟುಫಲಿತಾಂಶ ನೀಡಿದೆ| 1 ವಾರದಲ್ಲಿ ಸಾಕ್ಷ್ಯ ಸಮೇತ ಎಲ್ಲವೂ ಬಹಿರಂಗ
ನವದೆಹಲಿ(ಜೂ.15): ಕೊರೋನಾ ವೈರಸ್‌ಗೆ ಲಸಿಕೆ ಹಾಗೂ ಔಷಧ ಕಂಡುಹಿಡಿಯಲು ವಿಶ್ವದಾದ್ಯಂತ ಪ್ರಯತ್ನಗಳು ನಡೆದಿರುವ ನಡುವೆಯೇ, ಈ ವ್ಯಾಧಿಗೆ ಔಷಧ ಕಂಡುಹಿಡಿದಿರುವುದಾಗಿ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಆಯುರ್ವೇದ ಕಂಪನಿ ಹೇಳಿಕೊಂಡಿದೆ.
ಸುದ್ದಿಗಾರರ ಜತೆ ಮಾತನಾಡಿದ ಪತಂಜಲಿ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಆಚಾರ್ಯ ಬಾಲಕೃಷ್ಣ, ‘ನೂರಾರು ಕೊರೋನಾ ಪೀಡಿತರ ಮೇಲೆ ಈ ಔಷಧ ಪ್ರಯೋಗಿಸಲಾಗಿದೆ. ಇದು ಶೇ.100ರಷ್ಟುಉತ್ತಮ ಫಲಿತಾಂಶ ನೀಡಿದೆ. 5ರಿಂದ 14 ದಿನ ಅವಧಿಯಲ್ಲಿ ಸೋಂಕಿತರು ಗುಣಮುಖರಾಗಿದ್ದಾರೆ’ ಎಂದರು.
undefined
ಕೊರೋನಾ ಶಂಕಿತನಿಂದ ಆಸ್ಪತ್ರೆ ಸಿಬ್ಬಂದಿಗೆ ಕಿರಿಕ್: ಹೈರಾಣಾದ ವೈದ್ಯರು!
‘ಕೊರೋನಾ ವ್ಯಾಪಿಸುವಿಕೆ ಆರಂಭವಾದ ನಂತರ ನಾವು ವಿಜ್ಞಾನಿಗಳ ತಂಡ ರಚಿಸಿದೆವು. ಈ ವೇಳೆ ಅವರು ಕೊರೋನಾ ವಿರುದ್ಧ ಹೋರಾಡಬಲ್ಲ ಔಷಧ ಕಂಡುಹಿಡಿದರು. ಇದನ್ನು ನಾವು ನೂರಾರು ಸೋಂಕಿತರ ಮೇಲೆ ಪ್ರಯೋಗಿಸಿದ್ದು, ಶತ ಪ್ರತಿಶತ ಫಲಿತಾಂಶ ಬಂದಿದೆ’ ಎಂದು ಹೇಳಿದರು.
‘ಆಯುರ್ವೇದವೇ ಕೊರೋನಾಗೆ ಮದ್ದು ಎಂದು ನಾವು ಹೇಳಬಹುದು. ಪ್ರಯೋಗ ಇನ್ನೂ ಮುಂದುವರಿದಿದೆ. ಇನ್ನೊಂದು ವಾರದಲ್ಲಿ ನಾವು ಸಾಕ್ಷಿ-ಆಧಾರ ಸಮೇತ ಎಲ್ಲವನ್ನೂ ಬಹಿರಂಗಪಡಿಸಲಿದ್ದೇವೆ’ ಎಂದು ಹೇಳಿದರು.