
ಬಿಲಾಸ್‌ಪುರ : ಕೆಲವು ತಿಂಗಳ ಅಂತರದ ಬಳಿಕ ಮತ್ತೆ ರೈಲು ದುರಂತ ಸಂಭವಿಸಿದೆ. ಗೂಡ್ಸ್ ರೈಲಿಗೆ ಪ್ಯಾಸೆಂಜರ್ ರೈಲು ಡಿಕ್ಕಿ ಹೊಡೆದ ಪರಿಣಾಮ ಪ್ಯಾಸೆಂಜರ್ ರೈಲು ಚಾಲಕ ಸೇರಿ 8 ಮಂದಿ ಸಾವನ್ನಪ್ಪಿ, 14 ಮಂದಿ ಗಾಯಗೊಂಡ ದುರದೃಷ್ಟಕರ ಘಟನೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಪ್ರಯಾಣಿಕ ರೈಲು ಗೇವ್ರಾದಿಂದ ಬಿಲಾಸ್‌ಪುರಕ್ಕೆ ತೆರಳುತ್ತಿತ್ತು. ಅಪರಾಹ್ನ 4 ಗಂಟೆ ಸುಮಾರಿಗೆ ಗತೌರಾ ಮತ್ತು ಬಿಲಾಸ್‌ಪುರ ನಿಲ್ದಾಣಗಳ ಮಧ್ಯೆ ಚಲಿಸುತ್ತಿದ್ದಾಗ, ಗೂಡ್ಸ್ ರೈಲಿಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಕೆಲವು ಬೋಗಿಗಳು ಒಂದರ ಮೇಲೆ ಒಂದು ಬಿದ್ದಿವೆ. ಅಪಘಾತದ ತೀವ್ರತೆಗೆ ಅನೇಕರು ಬೋಗಿಗಳ ಅಡಿ ಯಲ್ಲಿ ಸಿಲುಕಿದ್ದಾರೆ. ಈ ವೇಳೆ ಕೆಲವರು ಸಾವನ್ನಪ್ಪಿ ದ್ದಲ್ಲದೆ, ಹಲವು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಇಬ್ಬರು ಇನ್ನೂ ಅವಶೇಷಗಳಡಿಯೇ ನರಳುತ್ತಿದ್ದು, ಅವರನ್ನು ರಕ್ಷಿಸಲು ಪ್ರಯತ್ನಗಳು ನಡೆಯುತ್ತಿವೆ.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.ತನಿಖೆಗೆ ಆದೇಶ: ಒಂದೇ ಲೈನ್‌ನಲ್ಲಿ ಹಾಗೂ ಒಂದೇ ದಿಕ್ಕಿನಲ್ಲಿ ಸಾಗುತ್ತಿದ್ದ ರೈಲುಗಳು ಡಿಕ್ಕಿ ಆಗಿದ್ದು ಹೇಗೆ? ಸಿಗ್ನಲಿಂಗ್ ವೈಫಲ್ಯವೆ ಎಂಬ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರಿಂದ ತನಿಖೆಗೆ ಆದೇಶಿಸಲಾಗಿದೆ.
ಆದರೆ ಅಧಿಕಾರಿಯೊಬ್ಬರು ಮಾತನಾಡಿ, ಪ್ಯಾಸೆಂಜರ್ ರೈಲು ಚಾಲಕ ರೆಡ್ ಸಿಗ್ನಲ್ ಇದ್ದರೂ ಜಂಪ್ ಮಾಡಿದ್ದಾನೆ. ಗೂಡ್‌್ಸ ರೈಲು ಸನಿಹದಲ್ಲೇ ಕಾಣುತ್ತಿದ್ದರೂ ಎಮರ್ಜೆನ್ಸಿ ಬ್ರೇಕ್ ಹಾಕದೇ 60-70 ಕಿ.ಮೀ. ವೇಗದಲ್ಲಿ ರೈಲು ಚಲಾಯಿಸಿ ಗೂಡ್ ರೈಲಿಗೆ ಡಿಕ್ಕಿ ಹೊಡೆಸಿದ್ದಾನೆ’ ಎಂದು ಹೇಳಿದ್ದಾರೆ.
ಪರಿಹಾರ ಘೋಷಣೆ: ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರು., ಗಂಭೀರವಾಗಿ ಗಾಯಗೊಂಡವರಿಗೆ 5 ಲಕ್ಷ ರು. ಹಾಗೂ ಸಣ್ಣಪುಟ್ಟಗಾಯಗಳಾದವರಿಗೆ 1 ಲಕ್ಷ ರು. ಪರಿಹಾರಧನ ನೀಡುವುದಾಗಿ ರೈಲ್ವೆ ಹೇಳಿದೆ.ಇದು ಇತ್ತೀಚಿನ 3ನೇ ಘಟನೆ2023ರ ಜೂ.2ರಂದು ಒಡಿಶಾದ ಬಾಹಾನಗಾ ಎಂಬಲ್ಲಿ ಇದೇ ರೀತಿ ಬೆಂಗಳೂರು-ಹೌರಾ ಸೇರಿ 3 ರೈಲುಗಳ ಡಿಕ್ಕಿ ಆಗಿ 296 ಜನ ಸಾವನ್ನಪ್ಪಿದ್ದರು. 2024ರ ಅ.11ರಂದು ದರ್ಭಂಗಾ-ಮೈಸೂರು ಬಾಗ್ಮತಿ ಎಕ್ಸ್‌ಪ್ರೆಸ್ ರೈಲು, ಚೆನ್ನೈ ಸನಿಹ ಗೂಡ್‌್ಸ ರೈಲಿಗೆ ಡಿಕ್ಕಿ ಆಗಿ 19 ಜನ ಗಾಯಗೊಂಡಿದ್ದರು. ಈಗಿನ ಅಪಘಾತವು ಇದೇ ಮಾದರಿಯ 3ನೇ ಘಟನೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ