
ಹಿಮಾಚಲ ಪ್ರದೇಶ (ಡಿ.28) ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಳ್ಳಲು ಹಲವರು ಈಗಾಗಲೇ ಪ್ರವಾಸಿ ತಾಣಗಳಲ್ಲಿ ಬೀಡು ಬಿಟ್ಟಿದ್ದಾರೆ. ಕ್ರಿಸ್ಮಸ್ ರಜೆ ಜೊತೆಗೆ ಹೊಸ ವರ್ಷದ ರಜೆ ಪಡೆದು ಪ್ರವಾಸಿ ತಾಣಗಳತ್ತ ತೆರಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಪ್ರವಾಸಿ ತಾಣಗಳು ತುಂಬಿ ತುಳುಕುತ್ತಿದೆ. ಇನ್ನು ಹಿಮಾಚಲ ಪ್ರದೇಶದಲ್ಲಿ ಭಾರಿ ಪ್ರವಾಸಿಗರು ನರೆದಿದ್ದಾರೆ. ಎಲ್ಲಾ ತಾಣಗಳು ಭರ್ತಿಯಾಗಿದೆ. ಇದರ ನಡುವೆ ಜನಪ್ರಿಯ ಬಿರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಸೈಟ್‌ನಲ್ಲಿ ಅಪಘಡ ಸಂಭವಿಸಿದೆ. ಅಡ್ವೆಂಚರ್ ಪ್ರವಾಸೋದ್ಯಮಕ್ಕೆ ಭಾರಿ ಜನಪ್ರಿಯವಾಗಿರುವ ಬಿರ್ ಬಿಲ್ಲಿಂಗ್ ಪ್ಯಾರಾಗ್ಲೈಂಡಿಂಗ್ ಕೇಂದ್ರದಲ್ಲಿ ಪ್ರವಾಸಿಗನೊಬ್ಬನ ಕರೆದುಕೊಂಡು ಪ್ಯಾರಾಗ್ಲೈಡಿಂಗ್ ಟೇಕ್ ಆಫ್ ಆದ ಬೆನ್ನಲ್ಲೇ ಪತನಗೊಂಡಿದೆ ಇದರ ಪರಿಣಾಮ ಪ್ಯಾರಾಗ್ಲೈಡರ್ ಮೃತಪಟ್ಟರೆ, ಪ್ರವಾಸಿ ಗಾಯಗೊಂಡ ಘಟನೆ ನಡೆದಿದೆ.
ಬಿರ್ ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಸೈಟ್ ಅಂತಾರಾಷ್ಟ್ರೀಯ ಸೈಟ್ ಆಗಿ ಗುರುತಿಸಿಕೊಂಡಿದೆ. ಇಲ್ಲಿ ಅಡ್ವೆಂಚರ್ ಪ್ರವಾಸೋದ್ಯಮಿಂದಿಂದಾಗ ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಪ್ಯಾಕೇಜ್ ರೂಪದಲ್ಲಿ ಕಾಂಗ್ರ ಜಿಲ್ಲೆಯ ಸುಂದರ ತಾಣಗಳ ಮೇಲಿನಿಂದ ಪ್ಯಾರಾಗ್ಲೈಡಿಂಗ್ ಮಾಡಲಾಗುತ್ತದೆ. ಈ ಮಜಾ ಅನುಭವಿಸಲು ಈ ಬಾರಿ ಕಿಕ್ಕಿರಿದು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದಾರೆ. ಪ್ರವಾಸಿಗನೊಬ್ಬನನ್ನು ಕೂರಿಸಿಕೊಂಡ ಪ್ಯಾರಾಗ್ಲೈಡರ್ ಟೇಕ್ ಆಫ್ ಮಾಡಿದ್ದಾನೆ. ಆದರೆ ಕೆಲವೇ ನಿಮಿಷದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ. ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲು ಎಲ್ಲಾ ಪ್ರಯತ್ನ ಮಾಡಿದ್ದಾನೆ. ಆದರೆ ಸಾಧ್ಯವಾಗಿಲ್ಲ. ಪರಿಣಾಮ ಪ್ಯಾರಾಗ್ಲೈಡಿಂಗ್ ಪತನಗೊಂಡಿದೆ.
ಹಿಮಾಚಲ ಪ್ರದೇಶ ಮಂಡಿ ಡಿಲ್ಲೆಯ ಬಾರೋಟ್ ಗ್ರಾಮದ ಮೋಹನ್ ಸಿಂಗ್ ಈ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೋಹನ್ ಸಿಂಗ್ ಬಿರ್ ಬಿಲ್ಲಿಂಗ್ ಪ್ಯಾರಾ ಸೈಟ್‌ನಲ್ಲಿ ಪ್ಯಾರಾಗ್ಲೈಡರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ ಈ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಪ್ಯಾರಾಗ್ಲೈಡಿಂಗ್ ಪತನಗೊಳ್ಳುತ್ತಿದ್ದಂತೆ ಸ್ಥಳೀಯರು ನೆರವಿಗೆ ಧಾವಿಸಿದ್ದಾರೆ. ಗಾಯಗೊಂಡಿದ್ದ ಇಬ್ಬರನ್ನು ಸ್ಥಳೀಯರು ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಮೋಹನ್ ಸಿಂಗ್ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದ್ದಾರೆ. ಇತ್ತ ಗಾಯಗೊಂಡಿರುವ ಪ್ರವಾಸಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ಯಾರಾಗ್ಲೈಡಿಂಗ್ ಪತನ ಕುರಿತು ಪ್ರಕರಣ ದಾಖಲಾಗಿದೆ. ಈ ಪತನಕ್ಕೆ ಪ್ಯಾರಾಗ್ಲೈಡಿಂಗ್‌ನಲ್ಲಿನ ತಾಂತ್ರಿಕ ಸಮಸ್ಯೆ ಕಾಣವಾಗಿದೆಯಾ ಅನ್ನೋ ಕುರಿತು ತನಿಖೆ ನಡೆಸಲಾಗುತ್ತಿದೆ. ಇತ್ತ ಪತನ ಪ್ಯಾರಾಗ್ಲೈಡರ್ ತಪ್ಪಿನಿಂದ ಅಥವಾ ಕೆಟ್ಟ ಹವಾಮಾನದಿಂದ ಆಗಿದೆಯಾ ಅನ್ನೋ ಕುರಿತು ತನಿಖೆ ನಡೆಸಲಾಗುತ್ತಿದೆ. ಈ ಘಟನೆ ಅಡ್ವೆಂಚರ್ ಪ್ರವಾಸೋದ್ಯಮಗಳಲ್ಲಿ ತೆಗೆದುಕೊಳ್ಳುತ್ತಿರುವ ಸುರಕ್ಷತಾ ಕ್ರಮಗಳ ಕುರಿತು ಗಂಭೀರ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಸುರಕ್ಷತಾ ಕ್ರಮಗಳನ್ನು ಮಾಡದೇ, ನಿಯಮ ಉಲ್ಲಂಘಿಸುತ್ತಿರುವ ಈ ರೀತಿಯ ಅಡ್ವೆಂಚರ್ ಪ್ರವಾಸಿ ತಾಣಗಳ ಮೇಲೆ ನಿಗಾ ಇಡಲು ಪ್ರವಾಸಿಗರು ಆಗ್ರಹಿಸಿದ್ದಾರೆ. ಸ್ಥಳೀಯ ಜಿಲ್ಲಾಡಳಿ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪರವಾನಗೆ ನೀಡಬೇಕು. ಬಳಿಕ ಪ್ರತಿ ಬಾರಿ ಸುರಕ್ಷತಾ ಕ್ರಮಗಳ ಕುರಿತು ಪರಿಶೀಲನೆ ನಡೆಯಬೇಕು. ಜಿಲ್ಲಾಡಳಿತ ಇವೆಲ್ಲವನ್ನು ಪರಿಗಣಿಸುತ್ತದೆ ಅನ್ನೋ ನಂಬಿಕೆಯೊಂದಿಗೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇದೀಗ ಪ್ರವಾಸಿ ತಾಣದಲ್ಲಿನ ಪತನ ಅಡ್ವೆಂಚರ್ ಟೂರಿಸಂ ಕುರಿತು ಅನುಮಾನ ಮೂಡುವಂತೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ