ಪ್ರಧಾನಿ ನರೇಂದ್ರ ಮೋದಿ ಜಪಾನ್‌ನಲ್ಲಿ ಜಿ7 ಶೃಂಗಸಭೆ ಮುಗಿಸಿ ಇದೀಗ ಪಪುವಾ ನ್ಯೂಗಿನಿಯಾ ದೇಶ ತಲುಪಿದ್ದಾರೆ. ಮೋದಿ ಐತಿಹಾಸಿಕ ಭೇಟಿಯಿಂದ ಪಪುವಾ ನ್ಯೂಗಿನಿಯಾ ಪುಳಕಿತಗೊಂಡಿದೆ. ಹಲವು ಶಿಷ್ಟಾಚಾರ ಮುರಿದು ಮೋದಿ ಆಗಮಿಸುತ್ತಿದ್ದಂತೆ ಕಾಲು ಮುಟ್ಟಿ ನಮಸ್ಕರಿಸಿದ ಘಟನೆ ನಡೆದಿದೆ.
ನವದೆಹಲಿ(ಮೇ.21): ಪ್ರಧಾನಿ ನರೇಂದ್ರ ಮೋದಿ ಮೂರು ರಾಷ್ಟ್ರಗಳ ಪ್ರವಾಸದಲ್ಲಿದ್ದಾರೆ. ಜಪಾನ್‌ನಲ್ಲಿ ಜಿ7 ಶೃಂಗಸಭೆಯಲ್ಲಿ ಪಾಲ್ಗೊಂಡ ಮೋದಿ ಇದೀಗ ಪಪುವಾ ನ್ಯೂಗಿನಿಯಾಗೆ ಬಂದಿಳಿದಿದ್ದಾರೆ. ಮೋದಿ ಆಗಮನದಿಂದ ಪಪುವಾ ನ್ಯೂಗಿನಿಯಾ ಪುಟ್ಟ ದೇಶ ಪುಳಕಿತಗೊಂಡಿದೆ. ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ಮೋದಿಗೆ ಪಪುವಾ ನ್ಯೂಗಿನಿಯಾ ಭರ್ಜರಿ ಸ್ವಾಗತ ನೀಡಿದೆ. ವಿಮಾನದಿಂದ ಇಳಿದು ಬಂದ ಮೋದಿಯನ್ನು ಸ್ವಾಗತಿಸಿದ ಪಪುವಾ ಪ್ರಧಾನಿ ಜೇಮ್ಸ್ ಮರಾಪೆ, ಮೋದಿ ಕಾಲಿಗೆರಗಿದ ಘಟನೆ ನಡೆದಿದೆ. ಈ ವಿಡಿಯೋ ಭಾರಿ ವೈರಲ್ ಆಗಿದ್ದು, ಮೋದಿ ಜನಪ್ರೀಯತೆ ಹಾಗೂ ಮೋದಿ ಭೇಟಿಯಿಂದ ಇಡೀ ದೇಶವೇ ಯಾವ ಪರಿ ಪುಳಕಿತಗೊಂಡಿದೆ ಅನ್ನೋದು ಸೂಚ್ಯವಾಗಿ ಹೇಳುತ್ತಿದೆ.
ಪ್ರಧಾನಿ ಮೋದಿ ವಿಮಾನ ಪಪುವಾ ನ್ಯೂಗಿನಿಯಾ ದೇಶದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ಪಪುವಾ ನ್ಯೂಗಿನಿ ಪ್ರಧಾನಿ ಜೇಮ್ಸ್ ಮರಾಪೆ ಸೇರಿದಂತೆ ಪ್ರಮುಖ ನಾಯಕರು ಸ್ವಾಗತಕ್ಕಾಗಿ ಕಾದು ಕುಳಿತಿದ್ದರು. ಮೋದಿ ಆಗಮಿಸುತ್ತಿದ್ದಂತೆ ಆಲಂಗಿಸಿ ಆತ್ಮೀಯ ಸ್ವಾಗತ ಕೋರಿದ್ದಾರೆ.ಬಳಿಕ ಪ್ರಧಾನಿ ಮೋದಿ ಕಾಲು ಮುಟ್ಟಿ ಆಶೀರ್ವಾದ ಪಡೆದಿದ್ದಾರೆ. ಪ್ರಧಾನಿ ಮೋದಿ ಕಾಲಿಗೆ ಎರಗುತ್ತಿದ್ದಂತೆ ಮೋದಿ ತಡೆದಿದ್ದಾರೆ. ಆದರೆ ಜೇಮ್ಸ್ ಮರಾಪೆ ಆಶೀರ್ವಾದ ಪಡೆದಿದ್ದಾರೆ. ಜೇಮ್ಸ್ ಮರಾಪೆಯನ್ನು ಆತ್ಮೀಯವಾಗಿ ಆಲಿಂಗಿಸಿದ ಮೋದಿ ಶುಭಾಶಯ ವಿನಿಮಯ ಮಾಡಿದ್ದಾರೆ.
G7 Summit ಹುಡುಕಿಕೊಂಡು ಬಂದು ಪ್ರಧಾನಿ ಮೋದಿ ಆಲಿಂಗಿಸಿ ಶುಭಾಶಯ ವಿನಿಮಯ ಮಾಡಿದ ಬೈಡನ್!
ಇದೇ ಮೊದಲ ಬಾರಿಗೆ ಪಪುವಾ ನ್ಯೂಗಿನಿಯಾ ಸೂರ್ಯಮುಳುಗಿದ ಮೇಲೆ ವಿದೇಶಿ ಅತಿಥಿಯನ್ನು ಬರಮಾಡಿಕೊಂಡಿದೆ. ಪ್ರಧಾನಿ ಮೋದಿ ಕಾರಣದಿಂದ ಪಪುವಾ ನ್ಯೂಗಿನಿಯಾ ಎಲ್ಲಾ ಶಿಷ್ಟಾಚಾರ ಬದಿಗೊತ್ತಿ ಪ್ರಧಾನಿ ಮೋದಿಯನ್ನು ಸ್ವಾಗತಿಸಿದೆ. ಇಷ್ಟೇ ಅಲ್ಲ ಪಪುವಾ ನ್ಯೂಗಿನಿಯಾ ಪ್ರಧಾನಿ ಖುದ್ದು ವಿಮಾನ ನಿಲ್ದಾಣಕ್ಕೆ ಆಗಮಿಸಿ ಮೋದಿಯನ್ನು ಸ್ವಾಗತಿಸಿದ್ದಾರೆ.
ಪಪುವಾ ನ್ಯೂಗಿನಿಯಾಗೆ ಪ್ರಧಾನಿ ಮೋದಿ ಭೇಟಿ, ಮೋದಿ ಕಾಲು ಮುಟ್ಟಿ ನಮಸ್ಕರಿಸಿದ ಪಪುವಾ ನ್ಯೂಗಿನಿಯಾ ಪ್ರಧಾನಿ ಜೇಮ್ಸ್ ಮರಾಪೆ pic.twitter.com/xbqcYZ6FeB
— Asianet Suvarna News (@AsianetNewsSN)
ಪಪುವಾ ನ್ಯೂಗಿನಿಯಾದಲ್ಲಿ ಸೂರ್ಯ ಮುಳುಗಿದ ಮೇಲೆ ಯಾವುದೇ ವಿದೇಶಿ ಆತಿಥಿಗಳನ್ನು ಸ್ವಾಗತಿಸುವುದಿಲ್ಲ. ಇದು ಪಪುವಾ ನ್ಯೂಗಿನಿಯಾ ದೇಶದ ಸಂಪ್ರದಾಯ. ಆದರೆ ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ ಅನ್ನೋ ಕಾರಣಕ್ಕೆ ಈ ಎಲ್ಲಾ ಶಿಷ್ಟಾಚಾರವನ್ನು ಬದಿಗೊತ್ತಿ ಸ್ವಾಗತ ಕೋರಲಾಗಿದೆ. ಪ್ರಧಾನಿ ಮೋದಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡುತ್ತೇವೆ ಎಂದು ಪ್ರಧಾನಿ ಜೇಮ್ಸ್ ಮರಾಪೆ ಹೇಳಿದ್ದರು. ಇದರಂತೆ 19 ಸುತ್ತಿನ ಕುಶಾಲತೋಪು ಸಿಡಿಸಿ, ಅದ್ಧೂರಿಯಾಗಿ ಮೋದಿಯನ್ನು ಸ್ವಾಗತಿಸಲಾಗಿದೆ.
ಜಿ20 ಬಳಿಕ ಕ್ವಾಡ್ ಸಭೆಗೆ ಆತಿಥ್ಯ ವಹಿಸಿಕೊಳ್ಳಲಿರುವ ಭಾರತ, ಮೋದಿ ಘೋಷಣೆ!
ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಹಲವು ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಇದರಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಜೆಲೆನ್ಸಿಸ್ಕಿ ಜೊತೆಗಿನ ಮಾತುಕತೆ ಭಾರಿ ಮಹತ್ವ ಪಡೆದುಕೊಂಡಿದೆ. ಉಕ್ರೇನ್‌ನಲ್ಲಿನ ಯುದ್ಧ ಇಡೀ ವಿಶ್ವಕ್ಕೆ ಒಂದು ಅತಿದೊಡ್ಡ ವಿಷಯ ಮತ್ತು ಇಡೀ ಜಗತ್ತಿನ ಮೇಲೆ ಅದು ಹಲವು ರೀತಿಯ ಪರಿಣಾಮಗಳನ್ನು ಬೀರುತ್ತಿದೆ. ಉಕ್ರೇನ್‌ನಲ್ಲಿನ ಪರಿಸ್ಥಿತಿಯನ್ನು ನಾವು ಕೇವಲ ರಾಜಕೀಯ ಅಥವಾ ಆರ್ಥಿಕ ವಿಷಯವಾಗಿ ಪರಿಗಣಿಸಿಲ್ಲ. ಬದಲಾಗಿ ಅದನ್ನು ಮಾನವೀಯತೆ ಮತ್ತು ಮಾನವೀಯ ಮೌಲ್ಯಗಳ ಸಂಗತಿಯಾಗಿ ಪರಿಗಣಿಸಿದ್ದೇವೆ. ಹೀಗಾಗಿ ಭಾರತ ಮತ್ತು ನನ್ನ ಪರವಾಗಿ, ಈ ಸಂಘರ್ಷವನ್ನು ಅಂತ್ಯಗೊಳಿಸಲು ವೈಯಕ್ತಿಕ ನೆಲೆಗಟ್ಟಿನಲ್ಲಿ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲಾ ಮಾಡುವ ಭರವಸೆಯನ್ನು ನೀಡುತ್ತೇನೆ ಎಂದು ಮೋದಿ ಹೇಳಿದರು.