
ನವದೆಹಲಿ(ಸೆ.09): ಆರ್‌ಎಸ್‌ಎಸ್ ಬೆಂಬಲಿತ ವಾರದ ಪತ್ರಿಕೆ ‘ಪಾಂಚಜನ್ಯ’ವು ಧರ್ಮಯುದ್ಧ ಮಾಡುತ್ತಿದೆ ಎಂದು ಆರ್‌ಎಸ್‌ಎಸ್‌ನ ಜಂಟಿ ಪ್ರಧಾನ ಕಾರ್ಯದರ್ಶಿ ಮನಮೋಹನ್ ವೈದ್ಯ ಪ್ರತಿಪಾದಿಸಿದ್ದಾರೆ.
ಇತ್ತೀಚೆಗಷ್ಟೇ ಬೆಂಗಳೂರು ಮೂಲದ ಇಸ್ಫೋಸಿಸ್ ಸಂಸ್ಥೆ ಎಡಪಂಥೀಯರಿಗೆ ನೆರವು ನೀಡುತ್ತಿದೆ ಎಂದು ಟೀಕಿಸಿ ಪಾಂಚಜನ್ಯ ಪ್ರಕಟಿಸಿದ್ದ ಲೇಖನದಿಂದ ಆರ್‌ಎಸ್‌ಎಸ್ ಅಂತರ ಕಾಯ್ದುಕೊಂಡಿತ್ತು. ಇದರ ಬೆನ್ನಲ್ಲೇ, ಇದೀಗ ಪಾಂಚಜನ್ಯ ವಾರ ಪತ್ರಿಕೆಯನ್ನು ಆರ್‌ಎಸ್‌ಎಸ್ ಬೆಂಬಲಿಸಿದೆ.
ಸೋಮವಾರ ಮಾತನಾಡಿದ ವೈದ್ಯ ಅವರು, ‘ಪಾಂಚಜನ್ಯವು ಧರ್ಮಯುದ್ಧದ ಶಂಖ ನಾದವಾಗಿದೆ. ಕೆಲವು ಸಲ ಒಳ್ಳೆಯವರು ಸಹ ತಪ್ಪು ಮಾಡುತ್ತಾರೆ. ಹೀಗಾಗಿ ಧರ್ಮಯುದ್ಧದ ಹೋರಾಟದ ವೇಳೆ ಕೆಲವು ಸಲ ಒಳ್ಳೆಯವರನ್ನೂ ಸಹ ಗುರಿಯಾಗಿಸಿಕೊಳ್ಳಬೇಕಾಗುತ್ತದೆ’ ಎಂದರು.
ಇಸ್ಫೋಸಿಸ್ ಅಭಿವೃದ್ಧಿಪಡಿಸಿದ ಆದಾಯ ತೆರಿಗೆ ಮತ್ತು ಜಿಎಸ್‌ಟಿ ಪೋರ್ಟಲ್‌ನಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿವೆ. ಭಾರತದ ಆರ್ಥಿಕ ಹಿತಾಸಕ್ತಿಗಳನ್ನು ಘಾಸಿಗೊಳಿಸಲು ಇಸ್ಫೋಸಿಸ್ ಮುಖಾಂತರ ದೇಶವಿರೋಧಿ ಪಡೆಗಳು ಯತ್ನಿಸುತ್ತಿವೆಯೇ ಎಂದು ಪಾಂಚಜನ್ಯ ಟೀಕಿಸಿತ್ತು. ಇದಕ್ಕೆ ವಿಪಕ್ಷಗಳಿಂದ ಭಾರೀ ಟೀಕೆ ವ್ಯಕ್ತವಾಗಿತ್ತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ