‘ರೈ​ತರ ತಲೆ ಒಡೆ​ಯಿ​ರಿ’ ಎಂದಿದ್ದ ಡೀಸಿ ವಿರುದ್ಧ ಅನ್ನದಾತನ ಆಕ್ರೋಶ!

By Suvarna NewsFirst Published Sep 9, 2021, 9:52 AM IST
Highlights

* ಹರ್ಯಾಣದಲ್ಲಿ ರೈತರ ಭಾರೀ ಪ್ರತಿ​ಭ​ಟ​ನೆ

* ‘ರೈ​ತರ ತಲೆ ಒಡೆ​ಯಿ​ರಿ’ ಎಂದಿದ್ದ ಡೀಸಿ ವಿರುದ್ಧ ಕ್ರಮ​ಕ್ಕೆ ಒತ್ತಾ​ಯ

* ಬೇಡಿಕೆ ಈಡೇರದಿದ್ದರೆ ಸಿಂಘೂ, ಟಿಕ್ರಿ ರೀತಿಯ ಹೋರಾ​ಟ: ರೈತರ ಎಚ್ಚ​ರಿ​ಕೆ

ಕರ್ನಾಲ್‌(ಸೆ.01): ಇತ್ತೀಚೆಗಷ್ಟೇ ಅನ್ನದಾತರ ಮೇಲೆ ಲಾಠಿಚಾಜ್‌ರ್‍ಗೆ ಆದೇಶ ನೀಡಿದ ಐಎಎಸ್‌ ಅಧಿಕಾರಿ ಆಯುಷ್‌ ಸಿನ್ಹಾ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಇಲ್ಲಿನ ಜಿಲ್ಲಾ ಕೇಂದ್ರದಲ್ಲಿ ರೈತರು ಭಾರೀ ಪ್ರತಿಭಟನೆ ನಡೆಸಿದರು

ಈ ಸಂಬಂಧ ಮಂಗಳವಾರದಿಂದಲೇ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸುತ್ತಿರುವ ರೈತರು ರಾತ್ರಿಯೂ ಸ್ಥಳದಿಂದ ನಿರ್ಗಮಿಸದೇ ಧರಣಿ ನಡೆಸಿದರು. ಅಲ್ಲದೆ ರೈತರ ತಲೆಗಳನ್ನು ಒಡೆಯಿರಿ ಎಂದು ಕರೆ ನೀಡಿದ ಐಎಎಸ್‌ ಅಧಿಕಾರಿ ಆಯುಷ್‌ ಸಿನ್ಹಾ ಅವರನ್ನು ಅಮಾನತು ಮಾಡಿ ಕ್ರಮ ಕೈಗೊಳ್ಳುವವರೆಗೆ ನಾವೆಲ್ಲೂ ಹೋಗಲ್ಲ ಎಂದು ರೈತರು ಗುಡುಗಿದರು.

ಈ ಹಿಂದೆ ದೆಹಲಿಯ ಗಡಿಗಳಾದ ಟಿಕ್ರಿ ಮತ್ತು ಸಿಂಘೂ ಗಡಿ ರೀತಿಯ ಹೋರಾಟವನ್ನು ಇಲ್ಲೂ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡ ರಾಕೇಶ್‌ ಟಿಕಾಯತ್‌ ಹೇಳಿದರು.

ಆ.28ರಂದು ಪ್ರತಿಭಟನೆ ವೇಳೆ ರೈತರು ಹದ್ದು ಮೀರಿ ವರ್ತಿಸಿದರೆ ಅವರ ತಲೆಗಳನ್ನು ‘ಹೋಳು ಮಾಡಿ’ ಎಂದು ಐಎಎಸ್‌ ಅಧಿಕಾರಿ ಸಿನ್ಹಾ ಅವರು ಪೊಲೀಸರಿಗೆ ಹೇಳಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿತ್ತು.

click me!