ಪಂಚ ರಾಜ್ಯ ಚುನಾವಣೆಯಲ್ಲಿ ಭಾನುವಾರದ ನಾಲ್ಕು ರಾಜ್ಯಗಳ ವಿಧಾನಸಭೆಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಇವುಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಹಿನ್ನಡೆ ಕಂಡಿದೆ. ಅದರ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಪನೌತಿ ಕೌನ್ ಎನ್ನುವ ಟ್ರೆಂಡಿಗ್ ಆರಂಭವಾಗಿದೆ. ಅದರರ್ಥ 'ಪನೌತಿ ಯಾರು?' ಅನ್ನೋದಾಗಿದೆ.
ನವದೆಹಲಿ (ಡಿ.3): ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷ ಸೋಲು ಕಾಣುವ ಹಾದಿಯಲ್ಲಿದೆ. ಇದರ ಬೆನ್ನಲ್ಲಿಯೇ ಬಿಜೆಪಿ ನಾಯಕರು ಸೋಶಿಯಲ್ ಮೀಡಿಯಾದಲ್ಲಿ ಕಾಂಗ್ರೆಸ್ ನಾಯಕರನ್ನು ಲೇವಡಿ ಮಾಡಿದ್ದಾರೆ. ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ, ಕೂಡ ಕಾಂಗ್ರೆಸ್ ಪಕ್ಷದ ಸೋಲಿಗೆ ಟಾಂಟ್ ನೀಡಿದಿದ್ದಾರೆ. ಯಾರೊಬ್ಬರ ಹೆಸರನ್ನು, ಯಾವ ಪಕ್ಷದ ಹೆಸರನ್ನೂ ತೆಗೆದುಕೊಳ್ಳದ ಡ್ಯಾನಿಶ್ ಕನೇರಿಯಾ, ತಮ್ಮ ಎಕ್ಸ್ ವೇದಿಕೆಯಲ್ಲಿ 'ಪನೌತಿ ಕೌನ್..?' ಎಂದು ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದಾರೆ. ಇದರ ಅರ್ಥ, 'ಪನೌತಿ ಯಾರು?' ಅನ್ನೋದಾಗಿದೆ. ಒಂದೆಡೆ ನಾಲ್ಕೂ ರಾಜ್ಯಗಳ ಚುನಾವಣೆಯ ಮತ ಎಣಿಕೆ ಜೋರಾಗಿ ಸಾಗುತ್ತಿದ್ದರೆ, ಇನ್ನೊಂದೆಡೆ ಬಿಜೆಪಿ ಪಾಳಯದಲ್ಲಿ ಸಂಭ್ರಮ ಮನೆ ಮಾಡಿದೆ. ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್‌ಗಢ ಪೈಕಿ ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಸ್ವತಃ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿತ್ತು. ಹಾಗಿದ್ದರೂ ಪಕ್ಷ ಇಲ್ಲಿ ಕೆಟ್ಟ ನಿವರ್ಹಣೆ ನೀಡಿದೆ. ಇದರ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಬಿಜೆಪಿ ನಾಯಕರು ಪನೌತಿ ಯಾರು ಎಂದು ಟ್ವೀಟ್ ಮಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಕೆಣಕುವ ಪ್ರಯತ್ನ ಮಾಡಿದ್ದಾರೆ.
ರಾಜಸ್ಥಾನದಲ್ಲಿ ನಡೆದ ಚುನಾವಣಾ ಸಮಾವೇಶದಲ್ಲಿ ಮಾತನಾಡುವ ವೇಳೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಧಾನಿ ಮೋದಿ ಅವರನ್ನು ಪನೌತಿ ಎಂದು ಕರೆದಿದ್ದರು. ಈ ಕುರಿತಾಗಿ ಬಿಜೆಪಿ ಕೂಡ ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಕೊನೆಗೆ ಚುನಾವಣಾ ಆಯೋಗ ಕೂಡ ರಾಹುಲ್ ಗಾಂಧಿಗೆ ಈ ವಿಚಾರವಾಗಿ ನೋಟಿಸ್ ಜಾರಿ ಮಾಡಿತ್ತು. ಚುನಾವಣಾ ಸಮಾವೇಶದ ವೇಳೆ, ವಿಶ್ವಕಪ್ ಫೈನಲ್ ವೇಳೆ ಟೀಮ್ ಇಂಡಿಯಾ ಗೆಲುವಿನ ಹಾದಿಯಲ್ಲಿತ್ತು. ಆದರೆ, ಪನೌತಿ ಅಲ್ಲಿಗೆ ಹೋದ ಕಾರಣ ನಮ್ಮ ಹುಡುಗರು ಸೋಲು ಕಾಣುವಂತಾಯಿತು. ಅದಾದ ಬಳಿಕ ಕಾಂಗ್ರೆಸ್‌ನ ಇತರ ಹಿರಿಯ ನಾಯಕರು ಕೂಡ ಪ್ರಧಾನಿ ಮೋದಿ ಅವರನ್ನು ಪನೌತಿ ಎಂದು ಕರೆದು ಟ್ವೀಟ್ ಮಾಡಿದ್ದರು.
ಇಂದು ಮತ ಎಣಿಕೆ ಆರಂಭವಾಗಿ ಬಿಜೆಪಿ ಗೆಲುವಿನ ಸೂಚನೆ ಸಿಗುತ್ತಿದ್ದಂತೆ, ಬಿಜೆಪಿಯ ಸಾಕಷ್ಟು ಬೆಂಬಲಿಗರು, ಈಗ ಹೇಳಿ ಪನೌತಿ ಯಾರು ಅಂತಾ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹೆಚ್ಚಿನವರು ರಾಹುಲ್ ಗಾಂಧಿ ಎಂದು ಉತ್ತರ ನೀಡಿದ್ದಾರೆ.
ಪಾಕ್ ಹಿಂದೂಗಳ ಬಗ್ಗೆಯೂ ಮಾತನಾಡಿ, ಇರ್ಫಾನ್ ಪಠಾಣ್ ಗಾಜಾ ಟ್ವೀಟ್‌ಗೆ ಕನೇರಿಯಾ ರಿಪ್ಲೈ!
ಪ್ರಸ್ತುತ ನಾಲ್ಕು ರಾಜ್ಯಗಳ ಪೈಕಿ 230 ವಿಧಾನಸಭಾ ಕ್ಷೇತ್ರದ ಮಧ್ಯಪ್ರದೇಶದಲ್ಲಿ 161 ಸೀಟ್‌ಗಳ ಮುನ್ನಡೆಯೊಂದಿಗೆ ಬಿಜೆಪಿ ಸರಳವಾಗಿ ಅಧಿಕಾರ ಹಿಡಿಯುವ ಹಾದಿಯಲ್ಲಿದ್ದರೆ. 199 ವಿಧಾನಸಭಾ ಕ್ಷೇತ್ರಗಳ ರಾಜಸ್ಥಾನದಲ್ಲಿ ಬಿಜೆಪಿ 114 ಸೀಟ್‌ಗಳಲ್ಲಿ ಮುನ್ನಡೆ ಕಂಡಿದೆ. ಇನ್ನು ಛತ್ತೀಸ್‌ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 52 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ.
ಮತಾಂತರವಾದ್ರೆ ನಾಯಕನಾಗುವ ಅವಕಾಶವಿತ್ತು, ನನ್ಗೆ ಸನಾತನ ಧರ್ಮವೇ ಶ್ರೇಷ್ಠ ಎಂದ ಪಾಕ್ ಕ್ರಿಕೆಟಿಗ!
Panauti kaun? 😂
— Danish Kaneria (@DanishKaneria61)